ಕಬ್ಜ ಮೂಲಕ ಸದ್ದು ಮಾಡುತ್ತಿರೋ ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಮನೆ ಖರೀದಿಸಿದ್ದಾರೆ. ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಕೂಡ ಶಾಸ್ತ್ರ ಸಂಪ್ರದಾಯದ ಪ್ರಕಾರ ನೆರವೇರಿದೆ. ಉಪೇಂದ್ರ ಗೃಹ ಪ್ರವೇಶ ಕಾರ್ಯಕ್ರಮದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಸಕ್ಸಸ್ ನಂತರ ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ಚುನಾವಣೆ ಕಡೆ ಗಮನ ಕೊಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಂಟೆಸ್ಟ್ ಮಾಡಲಿದ್ದಾರೆ. ಈ ಬಾರಿ ಜನರ ವಿಶ್ವಾಸ ಗಳಿಸೋ ಪ್ರಯತ್ನದಲ್ಲಿ ಪಕ್ಷವಿದೆ. ಎಲೆಕ್ಷನ್ ಮುಗಿಯುತ್ತಿದ್ದಂತೆ ತಾವು ನಿರ್ದೇಶನ ಮಾಡುತ್ತಿರುವ 'ಯು ಐ' ಚಿತ್ರದ ಶೂಟಿಂಗ್ ಮುಂದುವರಿಸಲಿದ್ದಾರೆ. ಹೀಗೆ ಎಲೆಕ್ಷನ್ ಜೊತೆ ಡೈರೆಕ್ಷನ್ ಅಂತಾ ಬ್ಯುಸಿ ಇರುವ ಉಪ್ಪಿ ಸದ್ಯ ಮನೆ ಬದಲಾಯಿಸಿದ್ದಾರೆ. ಹೌದು, ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದ ಹಳೆ ಮನೆಯಿಂದ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.
ಉಪ್ಪಿ ಕುಟುಂಬ ಕತ್ರಿಗುಪ್ಪೆಯಲ್ಲಿರುವ ಮನೆಯಲ್ಲಿ ವಾಸವಿತ್ತು. ಜೊತೆಗೆ ಅಲ್ಲೇ ದೊಡ್ಡ ಆಲದ ಮರದ ಬಳಿ ರುಪ್ಪೀಸ್ ರೆಸಾರ್ಟ್ ಅಂತ ನಿರ್ಮಾಣ ಮಾಡಿ ಆಗಾಗ್ಗೆ ಅಲ್ಲೂ ಹೋಗಿ ಬರುತ್ತಿದ್ದರು. ರುಪ್ಪೀಸ್ ರೆಸಾರ್ಟ್ ವೆಕೇಶನ್ಗೆ ಎಂದು ಇದ್ದರೂ, ಉಪ್ಪಿ ಅವರ ಖಾಯಂ ಜಾಗ ಕತ್ರಿಗುಪ್ಪೆಯ ಮನೆಯೇ ಆಗಿತ್ತು. ಆದ್ರೀಗ ಆ ಮನೆ ಬಿಟ್ಟು ಹೊಸ ಮನೆಗೆ ಹೆಜ್ಜೆಯಿಟ್ಟಿದ್ದಾರೆ.
ಬೆಂಗಳೂರಿನ ದುಬಾರಿ ಏರಿಯಾ ಎನಿಸಿಕೊಂಡಿರುವ ಸದಾಶಿವನಗರದಲ್ಲಿ ಉಪೇಂದ್ರ ಅವರು ಹೊಸ ಮನೆ ಖರೀದಿ ಮಾಡಿದ್ದಾರೆ. ಈಗಾಗಲೇ ಕಟ್ಟಿರೋ ಮನೆಯನ್ನು ಪರ್ಚೆಸ್ ಮಾಡಿರೋ ರಿಯಲ್ ಸ್ಟಾರ್ ಉಪ್ಪಿ, ಒಳ್ಳೆ ದಿನ ಅನ್ನೋ ಕಾರಣಕ್ಕೆ ಮೂರು ದಿನಗಳ ಹಿಂದೆ ಪೂಜೆ ಮಾಡಿ ಮನೆಗೆ ಪ್ರವೇಶ ಮಾಡಿದ್ದಾರೆ.