ಕರ್ನಾಟಕ

karnataka

ETV Bharat / entertainment

ಇಂದು ಸುಶಾಂತ್​ ಸಿಂಗ್​ ಜನ್ಮದಿನ.. ಬಾಲಿವುಡ್​ ಧೋನಿ ನೆನಪು ಜೀವಂತ! - ಸುಶಾಂತ್​ ಸಿನಿ ಪಯಣ

ಇಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 37 ನೇ ಹುಟ್ಟುಹಬ್ಬ - ಅಗಲಿದ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಶುಭ ಕೋರಿಕೆ.

Sushant Singh
ನಟ ಸುಶಾಂತ್ ಸಿಂಗ್​

By

Published : Jan 21, 2023, 1:37 PM IST

ಇಂದು ಬಾಲಿವುಡ್​ ದಿವಗಂತ ನಟ ಸುಶಾಂತ್​ ಸಿಂಗ್​ ರಜಪೂತ್ ಅವರ 37 ನೇ​ ಹುಟ್ಟುಹಬ್ಬ. ನೆಚ್ಚಿನ ನಟ ಅಗಲಿದ್ದರೂ ಕೂಡ ದೇಶದೆಲ್ಲೆಡೆ ಅಭಿಮಾನಿಗಳು ಅವರನ್ನು ನೆನೆದು ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ. ಜನವರಿ 21, 1986 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿ ಮಿಂಚಿದರು. ಸುಮಾರು 15 ಸಿನಿಮಾಗಳಲ್ಲಿ ಸುಶಾಂತ್ ಅಭಿನಯಿಸಿದ್ದರು.

ಸುಶಾಂತ್​ ಸಿನಿ ಪಯಣ: ದೆಹಲಿಯಲ್ಲಿ ಇಂಜಿನಿಯರ್​ ಓದುತ್ತಿರುವಾಗಲೇ ಸುಶಾಂತ್​ ಮುಂಬೈನ ಬದಿರಾ ಬಬ್ಬಾರ್​ ನಾಟಕ ಕ್ಷೇತ್ರಕ್ಕೆ ಸೇರಿಕೊಂಡರು. ನಂತರದಲ್ಲಿ ಡ್ಯಾನ್ಸ್‌ ಅಕಾಡೆಮಿ ಒಂದರಲ್ಲಿ ಬಾಲಿವುಡ್​ ನಂ.1 ನಟಿಯಾಗಿದ್ದ ಐಶ್ವರ್ಯ ರೈ ಜೊತೆ ಫಿಲ್ಮ್​ಫೇರ್​ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುವ ಅವಕಾಶವನ್ನು ಪಡೆದರು. ಬಳಿಕ ಅದೃಷ್ಟ ಎಂಬಂತೆ ಏಕ್ತಾ ಕಪೂರ್​ ನಿರ್ದೇಶನದ 'ಪವಿತ್ರ ರಿಷ್ತಾ' ಧಾರಾವಾಹಿ ಮೂಲಕ ಭಾರತದ ತುಂಬೆಲ್ಲಾ ಕಿರುತೆರೆಯ ನೆಚ್ಚಿನ ನಟನಾದರು.

2013ರಲ್ಲಿ 'ಕೋಯಿ ಪೋ ಚೆ' ಚಿತ್ರದೊಂದಿಗೆ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟರು. ಆಮೇಲೆ ಅಮೀರ್​ ಖಾನ್​ ಅಭಿನಯದ ರಾಜ್​ ಕುಮಾರ್​ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದಲ್ಲಿ ಸರ್ಫರಾಜ್​ ಪಾತ್ರ ಸುಶಾಂತ್​ಗೆ ಅವಕಾಶಗಳ ಬಾಗಿಲು ತೆರೆದು ಕೊಟ್ಟಿತು. ಅದಾದ ನಂತರ 'ಎಂ ಎಸ್ ಧೋನಿ' ಬಯೋಪಿಕ್ ಸಿನಿಮಾದ ಮೂಲಕ ದೇಶವ್ಯಾಪಿಯಾಗಿ ಅಭಿಮಾನಿಗಳನ್ನು ಸಂಪಾದಿಸಿದ ಯುತ್ ಐಕಾನ್ ಆದರು ಸುಶಾಂತ್​. ಅಲ್ಲದೇ ಸುಶಾಂತ್​ನ ಸ್ಟಾರ್​ ಗಿರಿಯನ್ನೇ ಈ ಸಿನಿಮಾ ಬದಲಾಯಿಸಿ ಬಿಟ್ಟಿತು.

ನಂತರದಲ್ಲಿ ಕೇದಾರ್​ನಾಥ್​, ಚಿಚ್ಚೋರೆ ಬಾಕ್ಸ್​ಆಫೀಸ್​ನಲ್ಲಿ ಸೌಂಡ್​ ಮಾಡುವುದರೊಂದಿಗೆ ಸುಶಾಂತ್ ನಟನಾ ಕೌಶಲ್ಯವನ್ನು ಜಗತ್ತಿಗೆ ತೋರಿಸಿದ ಚಿತ್ರಗಳಾದವು. ಹೀಗೆ ಸುಮಾರು 15 ಸಿನಿಮಾಗಳಲ್ಲಿ ಸುಶಾಂತ್​ ನಟಿಸಿದ್ದರು. ಅವರ ಕೊನೆಯ ಚಿತ್ರವೇ ಚಿಚೋರೆ.

ಇದನ್ನೂ ಓದಿ:ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ!

'ಬಾಲಿವುಡ್​ ಧೋನಿ' ನೆನದ ಸಹರ್ಸಾ ನಿವಾಸಿಗಳು: 2019 ರ ಮೇ 13 ರಂದು ಸಹರ್ಸಾ ಜಿಲ್ಲೆಯಲ್ಲಿರುವ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಮಕ್ಕಳು, ಯುವಕರೊಂದಿಗೆ ಸುಶಾಂತ್ ಸಿಂಗ್ ಕ್ರಿಕೆಟ್​ ಆಡಿದ್ದರು. ಇಂದು ಅವರ ಜನ್ಮದಿನದ ಹಿನ್ನೆಲೆ ಅಲ್ಲಿನ ನಿವಾಸಿಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಅಗಲಿದ ನಟನನ್ನು ಸ್ಮರಿಸುತ್ತಿದ್ದಾರೆ.

"ಬಾಲಿವುಡ್‌ನ ಧೋನಿ ಮೊನ್ನೆಯಷ್ಟೇ ಇಲ್ಲಿಗೆ ಬಂದಿದ್ದರು. ನಮ್ಮೊಂದಿಗೆ ಕ್ರಿಕೆಟ್​ ಆಡಿದ್ದರು" ಎಂದು ಇಂದಿಗೂ ನೆನೆಪಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಕ್ರಿಕೆಟ್​ ದೃಶ್ಯದ ವಿಡಿಯೋ ಇಂದಿಗೂ ಅಲ್ಲಿನ ಜನರ ಮೊಬೈಲ್ ಫೋನ್‌ಗಳಲ್ಲಿದೆ. ಎಷ್ಟೋ ಮಂದಿ ಅಂದು ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಅದನ್ನು ಇಂದಿಗೂ ಹಾಗೆಯೇ ಇಟ್ಟುಕೊಂಡಿದ್ದಾರೆ.

ಗುರುವಿಲ್ಲದೇ ಗುರಿ ತಲುಪಿದ ಸುಶಾಂತ್​ಗೆ ಅನೇಕ ಸಾಧನೆ ಮಾಡುವ ತುಡಿತವಿತ್ತು. ಆದರೆ ಅವರ ವಿಧಿ ಬರಹ ಬೇರೆಯೇ ಆಗಿತ್ತು. 2020ರ ಜೂನ್ 14ರಂದು ಸುಶಾಂತ್‌ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈಗಲೂ ಅವರ ಸಾವಿನ ಪ್ರಕರಣದ ತನಿಖೆ ಮುಂದುವರೆಯುತ್ತಿದೆ. ಆದರೆ ಅವರ ನೆನಪುಗಳು ನಮ್ಮಲ್ಲಿ ಸದಾ ಜೀವಂತವಾಗಿದೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಎಲ್ಲ ರೀತಿಯಲ್ಲೂ ನಂಬರ್1: ಸಾರಾ ಅಲಿ ಖಾನ್​

ABOUT THE AUTHOR

...view details