ಸೈನ್ ಬೋರ್ಡ್ ಕಲಾವಿದ ಸುಧೀಂದ್ರ ಅಲೆಮಾರಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಈವರೆಗೂ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಗರು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ಖಳನಟ ಸುಧೀಂದ್ರ ಈಗ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಟಗರು ಸಿನಿಮಾ ನೋಡಿದವರಿಗೆ ಖಂಡಿತ ಕಾಕ್ರೋಚ್ ಹೆಸರು ನೆನಪಿರುತ್ತದೆ. ಈ ಪಾತ್ರದ ಮೂಲಕವೇ ಖಳನಟ ಸುಧೀಂದ್ರ ರಾತ್ರೋರಾತ್ರಿ ಫೇಮಸ್ ಆಗಿ ಬಹುಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದಾರೆ.
ಬಳಿಕ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದ ಸಲಗ ಚಿತ್ರದಿಂದ ಮತ್ತಷ್ಟು ಖ್ಯಾತಿ ಪಡೆದ ಕಾಕ್ರೋಚ್ ಸುಧೀ ಸದ್ಯ ಭೀಮ ಚಿತ್ರಕ್ಕಾಗಿ ತಮ್ಮ ಲುಕ್ ಚೇಂಜ್ ಮಾಡಿಕೊಡಿದ್ದಾರೆ. ಹೌದು, ತಮ್ಮ ಉದ್ದವಾದ ಕೂದಲಿಗೆ ಕತ್ತರಿ ಹಾಕುವ ಮೂಲಕ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ.