ಕರ್ನಾಟಕ

karnataka

ETV Bharat / entertainment

ಕನಕದಾಸರು, ಶಿಶುನಾಳರು ಹುಟ್ಟಿದ ಸ್ಥಳದಿಂದ ಪ್ರಚಾರ ಶುರು ಮಾಡಿದ್ದು ಹೆಮ್ಮೆ: ಕಿಚ್ಚ ಸುದೀಪ್​​ - Sudeep tweet about campaign for bjp

ವಿಧಾನಸಭೆ ಚುನಾವಣಾ ಪ್ರಚಾರ ಮಾಡಿದ್ದರ ಬಗ್ಗೆ ಕಿಚ್ಚ ಸುದೀಪ್​​ ಟ್ವೀಟ್ ಮಾಡಿದ್ದಾರೆ.

Sudeep tweet about campaign
ಕಿಚ್ಚ ಸುದೀಪ್​​

By

Published : Apr 19, 2023, 8:13 PM IST

ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಲಿಷ್ಠ ನಾಯಕರು ನಾಮಪತ್ರ ಸಲ್ಲಿಸಿ ರಾಜಕೀಯ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ನಾಮಿನೇಶನ್​ ಸಲ್ಲಿಸಿದ್ದಾರೆ. ಚಿತ್ರನಟ ಸುದೀಪ್ ಅವರು ಸಿಎಂ ಬೊಮ್ಮಾಯಿಗೆ ಈ ಮೊದಲೇ ತಿಳಿಸಿದಂತೆ ಸಾಥ್ ನೀಡಿದರು.

ಕಿಚ್ಚ ಸುದೀಪ್​​ ಟ್ವೀಟ್: ಇಂದು ಸಿಎಂ ಜೊತೆ ಸೇರಿ ರೋಡ್​ ಶೋ ನಡೆಸಿದ್ದರ ಬಗ್ಗೆ ಮತ್ತು ಬಿಜೆಪಿ ಪರವಾಗಿ ಪ್ರಚಾರ ಮಾಡಿರುವುದರ ಬಗ್ಗೆ ಸುದೀಪ್​​ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ'' ಎಂದು ಬರೆದುಕೊಂಡಿದ್ದಾರೆ.

''ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಾಲ್ಗೊಂಡ ಜನಸಾಗರ ಕರುನಾಡಿನ ಭವ್ಯ ಭವಿಷ್ಯಕ್ಕೆ ಬಿಜೆಪಿಯೇ ಭರವಸೆ ಎಂದು ಸಾರಿ ಹೇಳುತ್ತಿದ್ದಾರೆ'' ಎಂದು ಬಿಜೆಪಿ ಟ್ವೀಟ್​ ಮಾಡಿಕೊಂಡು ಹಲವು ಫೋಟೋಗಳನ್ನು ಹಂಚಿಕೊಂಡಿದೆ.

ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್​ ಶೋ: ನಟ ಸುದೀಪ್​, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ​.. ಕಾಂಗ್ರೆಸ್​​ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ

ರಾಜಕೀಯ ಪಕ್ಷಗಳು ಕಲಾವಿದರನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕಿಳಿಯುವುದು ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸುದೀಪ್​ ರಾಜಕೀಯಕ್ಕೆ ಸೇರುತ್ತಾರೆಂದು ಊಹಿಸಲಾಗಿತ್ತು. ಆದ್ರೆ ಕೆಲವು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಮತ್ತು ಸುದೀಪ್​ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಬಿಜೆಪಿ ಸೇರಲ್ಲ ಆದ್ರೆ ಸಿಎಂ ಬೊಮ್ಮಾಯಿ ಪ್ರಚಾರ ಮಾಡುತ್ತೇನೆಂದು ಸ್ವತಃ ಸುದೀಪ್​ ತಿಳಿಸಿದ್ದರು. ಇಂದು ಮೊದಲ ಚುನಾವಣಾ ಪ್ರಚಾರದಲ್ಲಿ ನಟ ಭಾಗಿಯಾಗಿ ಬಿಜೆಪಿ, ಪಿಎಂ ಮೋದಿ, ಮತ್ತು ಸಿಎಂ ಬೊಮ್ಮಾಯಿ ಪರ ಮಾತನಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​​ ರಾಯಲ್​ ಫ್ಯಾಮಿಲಿಯ ಸುಂದರ ಫೋಟೋಗಳಿವು.. ನೀವೂ ಒಮ್ಮೆ ನೋಡಿ ಬಿಡಿ!

ಸುದೀಪ್​ ಬಿಜೆಪಿ ಪರ ಪ್ರಚಾರಕ್ಕಿಳಿದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ABOUT THE AUTHOR

...view details