ಕರ್ನಾಟಕ

karnataka

ETV Bharat / entertainment

'ಟೇಲ್ಸ್ ಆಫ್ ಮಹಾನಗರ' ಸಿನಿಮಾಕ್ಕೆ ಸಾಥ್ ನೀಡಿದ ಅಭಿನಯ ಚಕ್ರವರ್ತಿ - ಅಥರ್ವ್

ರಾಜೀವ್ ಕಿರಣ್ ವೆನಿಯಲ್ ನಿರ್ದೇಶನದ 'ಟೇಲ್ಸ್ ಆಫ್ ಮಹಾನಗರ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ವಿಶೇಷವೆಂದರೆ, ಹೊಸ ಪ್ರತಿಭೆ ಅಥರ್ವ್‌ಗೆ ನಟ ಕಿಚ್ಚ ಸುದೀಪ್ ಸಾಥ್​ ನೀಡಿದ್ದಾರೆ.

sudeep  and  atharv
ಸುದೀಪ್ ಹಾಗೂ ಅಥರ್ವ್‌

By

Published : Aug 13, 2023, 7:03 AM IST

ಅಭಿನಯ ಚಕ್ರವರ್ತಿ ಕಿಚ್ಚ‌ ಸುದೀಪ್ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದು. ಇದೀಗ ಯುವ ನಟ ಅಥರ್ವ್ ನಾಯಕರಾಗಿ ನಟಿಸಿರುವ 'ಟೇಲ್ಸ್ ಆಫ್ ಮಹಾನಗರ' ಚಿತ್ರಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.

ಟೈಟಲ್​ನಿಂದಲೇ ಗಮನ‌ ಸೆಳೆಯುತ್ತಿರುವ ಟೇಲ್ಸ್ ಆಫ್ ಮಹಾನಗರ ಸಿನಿಮಾದ ಟೀಸರ್​ಗೆ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಸದ್ಯ ಟೀಸರ್ ಜನರ ಮೆಚ್ಚುಗೆ ಗಳಿಸಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ನಾಯಕ ಅಥರ್ವ್, ಈ ಹಿಂದೆ ಗೆಜ್ಜೆನಾದ, ನಂದ ಲವ್ಸ್ ನಂದಿತಾ, ಕನ್ನಡದ ಕಂದ, ಆಟ ಮುಂತಾದ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಬಿ.ಎನ್ ವಿಜಯ್ ಕುಮಾರ್ (ಗೆಜ್ಜೆನಾದ) ಅವರ ಪುತ್ರ. ಗೆಜ್ಜೆನಾದ ವಿಜಯ್​ ಕುಮಾರ್ ಎಂದೇ ಖ್ಯಾತರಾಗಿರುವ ಇವರು ಈ ಚಿತ್ರವನ್ನು ಅಥರ್ವ್ ಪಿಕ್ಚರ್ಸ್ ಲಾಂಛನದಲ್ಲಿ ಧರ್ಮೇಂದ್ರ ಎಂ. ರಾವ್ ಅವರೊಂದಿಗೆ ಸೇರಿ ನಿರ್ಮಾಣ ಮಾಡಿದ್ದಾರೆ.

ಟೇಲ್ಸ್ ಆಫ್ ಮಹಾನಗರ:ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಹೆಣ್ಣು, ಅಧಿಕಾರ ಹಾಗೂ ಧರ್ಮಕ್ಕೆ ಸಂಬಂಧಿಸಿದ ಹಾಗೆ ಮೂರು ವಿಭಿನ್ನ ಕಥೆ ಚಿತ್ರದಲ್ಲಿದೆ. ಅಥರ್ವ್ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದ್ದು. 'ಕನ್ನಡತಿ' ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ. ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ. ಎಂ. ವೆಂಕಟೇಶ್, ಮೋಹನ್, ಆರ್ ಜೆ ಅನೂಪ, ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸೆ.15 ರಂದು ಈ ಚಿತ್ರ ತೆರೆಗೆ ಬರಲಿದೆ.

ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ 'ಕಿಚ್ಚ': ಅಥರ್ವ್‌ ಅವರ 'ಟೇಲ್ಸ್ ಆಫ್ ಮಹಾನಗರ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ಗೆ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಆ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ಗೆ ಜನರ ಮೆಚ್ಚುಗೆ ಸಿಕ್ಕಿದೆ.

ಕರುನಾಡ ಚಕ್ರವರ್ತಿಗೆ ಜೈಲರ್ ವಿತರಕರಿಂದ ಸನ್ಮಾನ: ತಮಿಳು ನಿರ್ದೇಶಕ ನೆಲ್ಸನ್​ ಅವರ ಜೈಲರ್​ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್​ ಅವರಿಗೆ ಸಿನೆಮಾದ ವಿತರಕರು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಜೈಲರ್ ಸಿನಿಮಾದಲ್ಲಿ ನರಸಿಂಹ ಹೆಸರಿನ ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದರು. ತೆರೆಯ ಮೇಲೆ ಕೆಲವು ನಿಮಿಷಗಳಷ್ಟೇ ಶಿವರಾಜಕುಮಾರ್ ಕಾಣಿಸಿಕೊಳ್ಳುತ್ತಾರೆ. ಆದರೂ ಅವರ ಪಾತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮಿಳು ಸಿನಿಮಾ ಪ್ರೇಮಿಗಳು ಸಹ ಶಿವರಾಜಕುಮಾರ್ ಅವರ ಮಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿನ ಇತರೆ ಅತಿಥಿ ಪಾತ್ರಗಳನ್ನು ಬಿಟ್ಟು ಶಿವಣ್ಣನ ಪಾತ್ರವನ್ನಷ್ಟೇ ಮೆಚ್ಚಿ ಕೊಂಡಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜೈಲರ್ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿರುವ ಜಯಣ್ಣ ಹಾಗು ವೆಂಕಟೇಶ್ ಎಂಬ ವಿತರಕರು ನಾಗವಾರದಲ್ಲಿ ಶಿವರಾಜಕುಮಾರ್ ಅವರನ್ನು ಭೇಟಿ, ಶಿವಣ್ಣನಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಜೊತೆಗೆ ವೆಂಕಟೇಶ್ವರ ಸ್ವಾಮಿಯ ಪುಟ್ಟ ವಿಗ್ರಹವೊಂದನ್ನು ಗೌರವಪೂರ್ವಕವಾಗಿ ನೀಡಿದರು. ಜೈಲರ್ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಖುಷಿ ಹಂಚಿಕೊಂಡರು.

ಇದನ್ನೂ ಓದಿ:Jailer movie: ಸಿನಿ ಪ್ರೇಮಿಗಳ ಮನಗೆದ್ದ ಚಿತ್ರ.. ಕರುನಾಡ ಚಕ್ರವರ್ತಿಗೆ ಜೈಲರ್ ವಿತರಕರಿಂದ ಸನ್ಮಾನ

ABOUT THE AUTHOR

...view details