'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಸುದೀಪ್ ಅವರು ಪೊಲೀಸ್ ಆಫೀಸರ್ ಆಗಿ ಮನೋಜ್ಞವಾಗಿ ಅಭಿನಯಿಸಿದ್ದರು. ದೇಶಾದ್ಯಂತ ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 210 ಕೋಟಿ ರೂ ಸಂಗ್ರಹಿಸಿದೆ ಅನ್ನೋದು ಗಾಂಧಿನಗರದ ಮಂದಿಯ ಮಾತು. ಈ ಸಿನಿಮಾ ಯಶಸ್ಸಿನ ನಂತರ ಸಂಪೂರ್ಣ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ನಿರತರಾಗಿರುವ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು?, ಯಾವ ನಿರ್ಮಾಪಕರ ಜೊತೆ? ಎನ್ನುವುದೆಲ್ಲ ಇದೀಗ ಸಿನಿಪ್ರೇಮಿಗಳು ಕೇಳುತ್ತಿರುವ ಪ್ರಶ್ನೆಗಳಾಗಿವೆ.
ತಮ್ಮ ಹೊಸ ಸಿನಿಮಾವನ್ನು ಕಾಲಿವುಡ್ ನಿರ್ಮಾಪಕರ ಜೊತೆ ಮಾಡುವ ಬಗ್ಗೆ ಚರ್ಚೆ ನಡೆದಿದೆಯಂತೆ. ಈ ಸಿನಿಮಾ ಕೂಡಾ ದೇಶಾದ್ಯಂತ ತೆರೆ ಕಾಣಲಿದೆ ಎಂದು ಸುದೀಪ್ ಆಪ್ತ ಮೂಲಗಳಿಂದ ಗೊತ್ತಾಗಿದೆ.
ತಮಿಳು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ಹಲವು ಭಾಷೆಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿವೆ. ಈ ಮಧ್ಯೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಜೊತೆ ಕಿಚ್ಚನೊಂದಿಗೆ ಚಿತ್ರ ಮಾಡೋದು ಬಹುತೇಕ ಪಕ್ಕಾ ಆಗಿದೆಯಂತೆ. ಇತ್ತೀಚೆಗೆ ಇವರ ಪೊನ್ನಿಯಿನ್ ಸೆಲ್ವನ್ ಚಿತ್ರ ದೇಶಾದ್ಯಂತ ರಿಲೀಸ್ ಆಗಿತ್ತು.