ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸುದೀಪ್ ಅವರು ನಟ ಕಂ ರಿಯಾಲಿಟಿ ಶೋಗಳ ನಿರೂಪಕ ಅಕುಲ್ ಬಾಲಾಜಿಗೆ ಇಂದು ಲಕ್ಷ ಬೆಲೆ ಬಾಳುವ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ನಿಂತು ಅಕುಲ್ ಬಾಲಾಜಿ ಅವರು ವಿಡಿಯೋ ಒಂದನ್ನು ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಕಿಚ್ಚ ಸುದೀಪ್ ಒಳ್ಳೆ ತನದ ಬಗ್ಗೆ ಅಕುಲ್ ಬಾಲಾಜಿ ಕೊಂಡಾಡಿದ್ದಾರೆ. ನಿನ್ನೆ ಮೊನ್ನೆ ಗಣೇಶೋತ್ಸವ ಆಯ್ತಲ್ಲ ಹಾಗೆ ಇಂದು ಕಿಚ್ಚೋತ್ಸವ ಆಯಿತು. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ, ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಅದುವೇ ಈ ಸುಂದರವಾದ ಬೈಕ್. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ ಅಂತಾ ಅಕುಲ್ ಬಾಲಾಜಿ ಅವರು ಸ್ಯಾಂಡಲ್ವುಡ್ನ ವಿಕ್ರಾಂತ್ ರೋಣನ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ನಟ ಸುದೀಪ್ ಸಹ ಇದ್ದು, ಅಕುಲ್ ಅನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ. ಬಿಎಂಡಬ್ಲೂ ಬೈಕ್ ಇದಾಗಿದ್ದು ಇದರ ಬೆಲೆ ಕನಿಷ್ಠ 4 ರಿಂದ 5 ಲಕ್ಷ ರೂಪಾಯಿ ಎನ್ನಲಾಗುತ್ತದೆ. ಕೆಎ 05 ಕೆಆರ್ 3666 ಸಂಖ್ಯೆಯ ಈ ಬೈಕ್ 2019ರಲ್ಲಿ ದಕ್ಷಿಣ ಬೆಂಗಳೂರಿನಲ್ಲಿ ನೋಂದಣಿ ಆಗಿದೆ. ಸದ್ಯ ಈ ಬೈಕ್ ಅಕುಲ್ ಬಾಲಾಜಿ ಅವರ ಹೆಸರಿನಲ್ಲಿದೆ.
ಅಕುಲ್ ಬಾಲಾಜಿಗೆ ಬೈಕ್ ಗಿಫ್ಟ್ ಕೊಟ್ಟ ನಟ ಸುದೀಪ್
ಅಕುಲ್ ಹಲವು ವರ್ಷಗಳಿಂದ ಸುದೀಪ್ ಜೊತೆ ಆತ್ಮೀಯ ಸ್ನೇಹ ಹೊಂದಿರುವ ವ್ಯಕ್ತಿ. ಈ ಪ್ರೀತಿಗಾಗಿ ಅವರಿಗೆ ಈ ಬೈಕ್ ಅನ್ನು ನೀಡಿದ್ದಾರೆ ಅನ್ನೋದು ಸುದೀಪ್ ಅಪ್ತರು ಮಾತು. ಇನ್ನು ಸುದೀಪ್ ಅವರು ತಮಗೆ ಇಷ್ಟ ಆದವರಿಗೆಲ್ಲ ಒಂದಲ್ಲ ಒಂದು ಉಡುಗೊರೆಯನ್ನ ಕೊಡುತ್ತಲೇ ಬಂದಿದ್ದು ಗೊತ್ತಿರುವ ಸಂಗತಿ. ಈ ಹಿಂದೆ ತನ್ನ ಬಾಡಿಗಾರ್ಡ್ ಕಿರಣ್ಗೆ ಬುಲೆಟ್ ಬೈಕ್ ಅನ್ನ ಗಿಫ್ಟ್ ಆಗಿ ನೀಡಿದ್ದರು. ಅಷ್ಟೇ ಅಲ್ಲ ಟಾಲಿವುಡ್ ಪ್ರಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಮಾಸ್ಟರ್ಗೆ ಲಕ್ಷಗಟ್ಟಲೆ ಬೆಲೆ ಬಾಳುವ ಕಾರುವೊಂದನ್ನ ಉಡುಗೊರೆಯಾಗಿ ನೀಡಿದರು.
ಇದನ್ನೂ ಓದಿ:ಮೆಗಾ ಬ್ಲಾಕ್ ಬಸ್ಟರ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳು ಬಿಟ್ಟ ತಾರಾ ಬಳಗ!