ಕಿಚ್ಚ ಸುದೀಪ್ ಸ್ಟೈಲಿಷ್ ಪೊಲೀಸ್ ಆಫೀಸರ್ ಆಗಿ, ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿರೋ ಸಿನಿಮಾ ವಿಕ್ರಾಂತ್ ರೋಣ. ಜುಲೈ 28ರಿಂದ ವಿಶ್ವದಾದ್ಯಂತ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರೋ ಸಿನಿಮಾ. ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದಿರೋ ವಿಕ್ರಾಂತ್ ರೋಣ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.
ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚನ ಕಾಂಬಿನೇಷನ್ ಬಂದ ವಿಕ್ರಾಂತ್ ರೋಣ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿ ಈ ವರ್ಷ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡಿದೆ. ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಅಭಿಮಾನಿಗಳು ಕಣ್ಣು ತುಂಬಿಕೊಂಡಿದ್ದಾರೆ. ಇದೀಗ ಫ್ಯಾಮಿಲಿ ಸಮೇತ ಮನೆಯಲ್ಲಿ ನೋಡುವ ಸುವರ್ಣ ಅವಕಾಶ ಒದಗಿ ಬಂದಿದೆ.
ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಜನ್ಮ ದಿನ. ಅಂದು ಪ್ರತಿಷ್ಠಿತ ಒಟಿಟಿ ಜೀ5ನಲ್ಲಿ ವಿಕ್ರಾಂತ್ ರೋಣ ಚಿತ್ರ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಜೀ5 ಸ್ಪೆಷಲ್ ಟ್ರೈಲರ್ ಅನ್ನು ಅನಾವರಣ ಮಾಡಲಿದೆ. ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ನಂತರ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.