ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಿನಿಮಾ ರಂಗದಲ್ಲೂ ಕೆಲ ನಟರು ಜಿಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಇದೀಗ ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
46ನೇ ವಯಸ್ಸಿನ ನಟ ನಿಧನರಾಗಿರುವ ಕುರಿತು ಕಿರುತೆರೆ ನಟ ಮತ್ತು ನಿರೂಪಕ ಜಯ್ ಭಾನುಶಾಲಿ ಖಚಿತಪಡಿಸಿದ್ದಾರೆ. ಜಯ್ ಭಾನುಶಾಲಿ ಇನ್ಸ್ಟಾಗ್ರಾಮ್ನಲ್ಲಿ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಅವರ ಫೋಟೋವನ್ನು ಪೋಸ್ಟ್ ಮಾಡಿ "ಬಹಳ ಬೇಗ ಹೋದಿರಿ" ಎಂದು ಬರೆದಿದ್ದಾರೆ. ಜಿಮ್‌ನಲ್ಲಿ ಕುಸಿದು ಬಿದ್ದ ನಂತರ ಸಿದ್ದಾಂತ್ ಸಾವನ್ನಪ್ಪಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.