ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಎನ್.ಎಸ್ ರಾಜಕುಮಾರ್ ಇತ್ತೀಚಿಗೆ ನಿಧನರಾದ ನಟ ವಿಜಯಕಾಂತ್ ಮನೆಗೆ ತೆರಳಿ ಅವರ ಪತ್ನಿ ಪ್ರೇಮಲತಾ ಹಾಗೂ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಮಿಳು ನಟ ಹಾಗೂ ರಾಜಕಾರಣಿ ವಿಜಯಕಾಂತ್ ಅನಾರೋಗ್ಯದಿಂದ ಕಳೆದ ಗುರುವಾರ ಕೊನೆಯುಸಿರೆಳೆದಿದ್ದರು. ಇನ್ನು ರಾಜ್ಕುಮಾರ್ ಅವರ ಕುಟುಂಬ ತೆಲುಗು ಹಾಗು ತಮಿಳು ಚಿತ್ರರಂಗದ ಬಹುತೇಕ ನಟರ ಫ್ಯಾಮಿಲಿಗಳ ಜೊತೆ ಒಳ್ಳೆ ಒಡನಾಟ ಹೊಂದಿದ್ದಾರೆ. ಈ ಸಂಬಂಧ ಈಗ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ವಿಜಯಕಾಂತ್ ಮನೆಗೆ ತೆರೆಳಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ತಮಿಳಿನ ದಿವಂಗತ ನಟ ವಿಜಯ್ಕಾಂತ್ ಮನೆಗೆ ಶಿವರಾಜ್ ಕುಮಾರ್ ಭೇಟಿ - Vijaykanth house
ನಟ ಶಿವರಾಜ್ ಕುಮಾರ್ ಇತ್ತೀಚಿಗೆ ನಿಧನರಾದ ನಟ ವಿಜಯಕಾಂತ್ ಮನೆಗೆ ತೆರಳಿ ಅವರ ಪತ್ನಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ತಮಿಳಿನ ದಿವಂಗತ ನಟ ವಿಜಯ್ಕಾಂತ್ ಮನೆಗೆ ನಟ ಶಿವರಾಜ್ ಕುಮಾರ್ ಭೇಟಿ
Published : Jan 5, 2024, 11:06 PM IST
ಶಿವರಾಜ್ ಕುಮಾರ್ ಸದ್ಯ ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ಪೊಂಗಲ್ಗೆ ಬಿಡುಗಡೆ ಆಗುತ್ತಿದೆ. ಹೀಗಾಗಿ ಈ ಚಿತ್ರದ ರಿಲೀಸ್ ಇವೆಂಟ್ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ಅನಾರೋಗ್ಯದಿಂದ ಮೃತಪಟ್ಟ ವಿಜಯಕಾಂತ್ ಅವರ ಮನೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಶಶಿ 'ಮೆಹಬೂಬಾ' ಸಿನಿಮಾಗೆ ಸಚಿವ ಚಲುವರಾಯಸ್ವಾಮಿ ಸಾಥ್