ಸ್ಯಾಂಡಲ್ ವುಡ್ನಲ್ಲಿ ಟ್ರೈಲರ್ ಹಾಗೂ ಹಾಡಿನ ಮೂಲಕ ಚಿತ್ರ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಧಮಾಕ. ನಾನು ಮತ್ತು ಗುಂಡ ಸಿನಿಮಾ ಬಳಿಕ ಶಿವರಾಜ್ ಕೆ ಆರ್ ಪೇಟೆ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಯಂಗ್ ರೆಬಲ್ ಸ್ಟಾರ್, ನಟ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 2ರಂದು ಧಮಾಕ ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರ ತಂಡಕ್ಕೆ ನಟ ಅಭಿಷೇಕ್ ಅಂಬರೀಶ್ ಆಲ್ ದಿ ಬೆಸ್ಟ್ ಹೇಳಿದರು.
ಬಳಿಕ ಮಾತನಾಡಿದ ಅಭಿಷೇಕ್ ಅಂಬರೀಶ್, ಶಿವರಾಜ್ ಕೆ ಆರ್ ಪೇಟೆ ಒಳ್ಳೆಯ ಮನುಷ್ಯ. ಶಿವಣ್ಣ ಶಿವಣ್ಣ ಅಂತಾ ನಾವು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಅದೇ ಖುಷಿ ಅವರು ಸ್ಕ್ರೀನ್ ಮೇಲೆ ಬಂದಾಗಲೂ ಇರುತ್ತದೆ. ಶಿವಣ್ಣ ಒಂದೇ ಟ್ರ್ಯಾಕ್ನಲ್ಲಿ ನಡೆಯೋಲ್ಲ. ವಿಭಿನ್ನ ಪಾತ್ರಗಳನ್ನು ಮಾಡುತ್ತ ಬೇರೆ ಬೇರೆ ಟ್ರ್ಯಾಕ್ನಲ್ಲಿ ನಡೆಯುತ್ತಾರೆ. ಆರ್ಟಿಸ್ಟ್ ಆಗಿ ಸಕ್ಸಸ್ ಕಂಡವರು ಈಗ ಹೀರೋ ಆಗಿಯೂ ಯಶಸ್ಸು ಕಾಣುತ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಗ ಅವರು. ಧಮಾಕ ಸಿನಿಮಾ ಟ್ರೈಲರ್ ನೋಡಿದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ನಂತರ ನಟ ಶಿವರಾಜ್ ಕೆ ಆರ್ ಪೇಟೆ ಮಾತನಾಡಿ, ಮಂಡ್ಯ ಅಂದ ತಕ್ಷಣ ನೆನಪಾಗುವುದು ಅಂಬರೀಶಣ್ಣ, ಅವರ ಪುತ್ರ. ಅಭಿಷೇಕ್ ತಂದೆಯಷ್ಟೇ ಎಲ್ಲರಿಗೂ ಪ್ರೀತಿ ಕೊಡುತ್ತಾರೆ ಎಂದು ತಿಳಿಸಿದರು.