ಕರ್ನಾಟಕ

karnataka

ETV Bharat / entertainment

ಅ.19ಕ್ಕೆ ಬಹುನಿರೀಕ್ಷಿತ 'ಘೋಸ್ಟ್'​ ತೆರೆಗೆ: ವಿದೇಶದಲ್ಲಿ 'BIG DADDY' ಹವಾ ಹೇಗಿದೆ ಗೊತ್ತಾ? - etv bharat kannada

Ghost Movie: ಅಕ್ಟೋಬರ್​ 19ರಂದು 'ಘೋಸ್ಟ್'​ ತೆರೆ ಕಾಣಲಿದ್ದು, ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ, ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ.

Actor Shivarajkumar starrer ghost movie release on october 19
ಘೋಸ್ಟ್

By ETV Bharat Karnataka Team

Published : Sep 4, 2023, 2:29 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲಿ ಹಲವು ವಿಶೇಷತೆಗಳಿಗೆ ಟಾಕ್​ ಆಗುತ್ತಿರುವ ಚಿತ್ರ 'ಘೋಸ್ಟ್​'. ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಗ್ಯಾಂಗ್​ ಸ್ಟಾರ್​ ಆಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್​ ಆಗುತ್ತಿದ್ದಂತೆ ಚಿತ್ರದ ಕ್ರೇಜ್​ ದಿನೇ ದಿನೇ ಹೆಚ್ಚಾಗುತ್ತಿದೆ. ಹ್ಯಾಟ್ರಿಕ್ ಹೀರೋ ‌ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರುವ 'ಘೋಸ್ಟ್' ಚಿತ್ರದ ಬಿಗ್ ಡ್ಯಾಡಿ ಟೀಸರ್ ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ‌. ಈ ಟೀಸರ್ ನೋಡಿದೆವರೆಲ್ಲಾ ಬಿಗ್ ಸ್ಕ್ರೀನ್ ಮೇಲೆ‌ 'ಘೋಸ್ಟ್' ಸಿನಿಮಾ ನೋಡುವುದಕ್ಕೆ ‌ತುದಿಗಾಲಿನಲ್ಲಿ ನಿಂತಿದ್ದಾರೆ‌.

ಇದರ ಜೊತೆಗೆ 'ಘೋಸ್ಟ್' ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ, ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ. ಲಂಡನ್​ನಿಂದ ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಸದ್ಯ ಈ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡ್​ ಆಗುತ್ತಿದೆ. ಕನ್ನಡದ ಸಿನಿಮಾವೊಂದು ವಿದೇಶದಲ್ಲೂ ಈ ಮಟ್ಟಿಗೆ ಕ್ರೇಜ್​ ಹುಟ್ಟು ಹಾಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಸದ್ಯ ಅನಾವರಣಗೊಂಡಿರುವ 'BIG DADDY' ಟೀಸರ್​ನಲ್ಲಿ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಸಖತ್​​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಕಣ್ಣಿನಲ್ಲೇ ಭಯ ಹುಟ್ಟಿಸುವ ಲುಕ್, ವಿಸ್ಕಿ‌ ಜೊತೆ ಪಾನಿಪುರಿ ತಿನ್ನುವ ಸ್ಟೈಲ್ ಜೊತೆ ಕಿಕ್ ಕೊಡುವ ಡೈಲಾಗ್ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. 'ಘೋಸ್ಟ್' ಸಿನಿಮಾ ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಜಾನರ್‌ನ ಚಿತ್ರವಾಗಿದ್ದು, ಕಮರ್ಷಿಯಲ್‌ ಎಲಿಮೆಂಟ್​ಗಳು ತುಂಬಾ ಇವೆಯಂತೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಅವರಿಗೆ ನಾಯಕಿಯೇ ಇಲ್ಲ. ಇದು ಸ್ಪೈ ಥ್ರಿಲ್ಲರ್‌ ಮಾದರಿಯ ಕಥೆಯನ್ನು ಒಳಗೊಂಡಿದೆ.

ಇದನ್ನೂ ಓದಿ:ಅಭಿಮಾನಿಗಳೇ ಕೇಳಿ, ಮೂಡಿಬರಲಿದೆ 'ಘೋಸ್ಟ್ 2': ಹ್ಯಾಟ್ರಿಕ್​ ಹೀರೋ ಮುಂದಿನ ಸಿನಿಮಾಗಳು ಹೀಗಿವೆ

ಈ ಚಿತ್ರದಲ್ಲಿನ ಶಿವ ರಾಜ್​ಕುಮಾರ್ ಲುಕ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಬಾಲಿವುಡ್ ನಟ ಅನುಪಮ್​ ಖೇರ್​, ಮಲೆಯಾಳಂ ನಟ ಜಯರಾಮ್, ಬಹುಭಾಷಾ ನಟ ಪ್ರಶಾಂತ್ ನಾರಾಯಣನ್ ಹಾಗೆಯೇ ಕನ್ನಡದ ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಶ್ರೀನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅ.19ಕ್ಕೆ ರಿಲೀಸ್​: ಇನ್ನು 'ಟೋಪಿವಾಲ' ಹಾಗೂ 'ಓಲ್ಡ್ ಮಂಕ್' ಚಿತ್ರಗಳನ್ನು ನಿರ್ದೇಶನ ಮಾಡಿರುವ ಶ್ರೀನಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, 'ಟಗರು' ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್​ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್.ಎನ್ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ 19 ರಂದು ಬಹುನಿರೀಕ್ಷಿತ ಘೋಸ್ಟ್​ ಚಿತ್ರ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ರಿಲೀಸ್​ ಆಗಲಿದೆ.

ಇದನ್ನೂ ಓದಿ:Shiva Rajkumar : ಶಿವರಾಜ್‌ ಕುಮಾರ್‌ ಅಭಿನಯದ 'ಘೋಸ್ಟ್' ಶೂಟಿಂಗ್ ಕಂಪ್ಲಿಟ್​

ABOUT THE AUTHOR

...view details