ಕರ್ನಾಟಕ

karnataka

ETV Bharat / entertainment

ಹೆದರೋದೂ ಇಲ್ಲ.. ಕ್ಷಮಿಸೋದು ಇಲ್ಲ: ಶಿವಣ್ಣನ 'ವೇದ' ಟ್ರೈಲರ್​ಗೆ ಫ್ಯಾನ್ಸ್​ ಫಿದಾ - ವೇದ

ಶಿವರಾಜ್​ಕುಮಾರ್ ಅಭಿನಯದ 125ನೇ ಬಹುನಿರೀಕ್ಷಿತ ಚಿತ್ರ ವೇದ ಚಿತ್ರದ ಟ್ರೈಲರ್​​ ಬಿಡುಗಡೆಯಾಗಿದೆ.

Actor shiva rajkumar starrer veda movie trailer released
ವೇದ ಟ್ರೈಲರ್ ರಿಲೀಸ್

By

Published : Dec 15, 2022, 4:03 PM IST

Updated : Dec 15, 2022, 4:19 PM IST

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ 125ನೇ ಬಹುನಿರೀಕ್ಷಿತ ಚಿತ್ರ ವೇದ. ಪೋಸ್ಟರ್, ಹಾಡುಗಳಿಂದ ಸೌತ್ ಸಿನಿಮಾ ರಂಗದಲ್ಲಿ ಟಾಕ್ ಆಗುತ್ತಿರುವ ವೇದ ಚಿತ್ರದ ಆಫೀಶಿಯಲ್ ಟ್ರೈಲರ್ ರಿವೀಲ್ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ. ಅದ್ಧೂರಿ ಮೇಕಿಂಗ್, ಶಿವ ರಾಜ್​ಕುಮಾರ್ ರಗಡ್ ಲುಕ್, ಮೈ ಜುಮ್ ಎನಿಸುವ ಆ್ಯಕ್ಷನ್ ದೃಶ್ಯಗಳು, ಅದರಲ್ಲೂ ಟ್ರೈಲರ್ ಕೊನೆಯಲ್ಲಿ ಬರುವ ''ವೇದ ಹೆದರೋದಿಲ್ಲ ಕ್ಷಮಿಸೋದಿಲ್ಲ'' ಎಂಬ ಖಡಕ್ ಡೈಲಾಗ್ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ.

ಕರುನಾಡ ಚಕ್ರವರ್ತಿಯ ಮಾಸ್ ಎಂಟ್ರಿ, ಶ್ವೇತಾ ಚೆಂಗಪ್ಪ, ಅದಿತಿ ಸಾಗರ್, ವೀಣಾ ಪೊನ್ನಪ್ಪ ಭರ್ಜರಿ ಆ್ಯಕ್ಷನ್ ನೈಜವಾಗಿ ಮೂಡಿ ಬಂದಿದೆ. ಅದರಲ್ಲಿ ಶಿವಣ್ಣ ಹಾಗೂ ಅದಿತಿ ಸಾಗರ್ ಕುಡುಗೋಲು ಹಿಡಿದು ದುಷ್ಟರನ್ನು ಮಟ್ಟ ಹಾಕುವ ದೃಶ್ಯಗಳು ಭಯ ಹುಟ್ಟಿಸುವಂತಿದೆ.

ಈ ಚಿತ್ರವು 1960ರ ದಶಕದಲ್ಲಿ ನಡೆಯುವ ಕಥೆ. ಕಿಚ್ಚಿನ ನಡುವೆ ರೂಪಿಸಲಾಗಿರುವ ಚಿತ್ರಕಥೆ ಇದು. ಈ ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್​ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಾಯಕಿಯಾಗಿ ಮಗಳು ಜಾನಕಿ ನಟಿ ಗಾನವಿ ಮಿಂಚಿದ್ದಾರೆ. ನಿರ್ದೇಶಕ ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗ ವೇದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಈ 4ನೇ ಚಿತ್ರವೂ ಗೆಲ್ಲುವ ಸೂಚನೆ ಕೊಟ್ಟಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಬ್ಯಾನ್​ ವಿಚಾರ: ಹೀಗಿತ್ತು ಶಿವಣ್ಣ ಪ್ರತಿಕ್ರಿಯೆ!

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ವರ್ಕ್ ಮಾಡಿದ್ದಾರೆ. ವೇದ ಚಿತ್ರವನ್ನು ಝೀ ಸ್ಟುಡಿಯೋಸ್​ ಜೊತೆಗೂಡಿ ಗೀತಾ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಈ ಚಿತ್ರದ ಮೂಲಕ ಗೀತಾ ಶಿವ ರಾಜ್​​ಕುಮಾರ್ ನಿರ್ಮಾಪಕಿಯಾಗಲಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ಡೋಂಟ್ ಫಿಯರ್, ಡೋಂಟ್ ಫರ್ಗಿವ್ ಎಂಬ ಟ್ಯಾಗ್ ಲೈನ್ ಇದ್ದು, ಅಭಿಮಾನಿಗಳಲ್ಲಿ ಬೆಟ್ಟದಷ್ಟು‌ ನಿರೀಕ್ಷೆ ಮೂಡಿಸಿದೆ. ವೇದ ಸಿನಿಮಾ ಡಿಸೆಂಬರ್ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

Last Updated : Dec 15, 2022, 4:19 PM IST

ABOUT THE AUTHOR

...view details