ಕರ್ನಾಟಕ

karnataka

ETV Bharat / entertainment

ಗೆಲುವಿಗೆ ಇಡೀ ಚಿತ್ರತಂಡ ಕಾರಣ.. ವೇದ 2 ಮಾಡುವ ಆಲೋಚನೆಯಲ್ಲಿದ್ದೇವೆ:ಶಿವಣ್ಣ - veda movie

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಅದ್ಧೂರಿಯಾಗಿ ‌ನಿರ್ಮಾಣ ಆಗಿರುವ ವೇದ ಚಿತ್ರ ಡಿಸೆಂಬರ್ 23ಕ್ಕೆ ಬಿಡುಗಡೆ ಆಗಿ ಎಲ್ಲ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡದಿಂದ ಸುದ್ದಿಗೋಷ್ಠಿ ನಡೆಸಿತು.

actor shiva rajkumar
ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್

By

Published : Dec 29, 2022, 6:40 PM IST

Updated : Dec 29, 2022, 7:26 PM IST

ವೇದ ಚಿತ್ರತಂಡದಿಂದ ಸುದ್ದಿಗೋಷ್ಠಿ

'ವೇದ' ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅಭಿನಯದ 125ನೇ ಸಿನಿಮಾ. ಕಳೆದ ಶುಕ್ರವಾರ ಬಿಡುಡಗೆ ಆದ ವೇದ ಸಿನಿಮಾ ನೋಡಿದ ಸಿನಿಪ್ರಿಯರು ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಈ ವರ್ಷದ ಕೊನೆಯಲ್ಲಿ ತೆರೆಗೆ ಬಂದ ವೇದ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕೇವಲ ಮೂರು ದಿನಗಳಲ್ಲಿ 19 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಕರುನಾಡ ಚಕ್ರವರ್ತಿಯ ಮಾಸ್ ಎಂಟ್ರಿ, ಅದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ ಅವರ ಭರ್ಜರಿ ಆ್ಯಕ್ಷನ್ ಸೀನ್​ಗಳು ಹಾಗೂ ಕಥೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಿಡಿದೇಳುವ ಕಥೆಗೆ ಸಿನಿಪ್ರಿಯರು ಫುಲ್ ಮಾರ್ಕ್​ ಕೊಟ್ಟಿದೆ. ವೇದ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ, ನಟ ಶಿವ ರಾಜ್​ಕುಮಾರ್ ನಿವಾಸದ ಇಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಖುಷಿ ಹಂಚಿಕೊಂಡಿದೆ.

ಅಭಿಮಾನಿಗಳ ರಿಯಾಕ್ಷನ್ ಖುಷಿ ಕೊಟ್ಟಿದೆ:ನಟ ಶಿವ ರಾಜ್​ಕುಮಾರ್ ಮಾತನಾಡಿ, ಇಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡಿಗರು ಚಿತ್ರವನ್ನು ಒಪ್ಪಿಕೊಂಡಿರುವುದಕ್ಕೆ ಪ್ರಮುಖ ಕಾರಣ ಚಿತ್ರದ ಕಥೆ. ಸಿನಿಮಾ ಗೆಲುವಿಗೆ ನಾನೊಬ್ಬನೇ ಕಾರಣನಲ್ಲ. ಇಡೀ ತಂಡ ಇದಕ್ಕಾಗಿ ಶ್ರಮಿಸಿದೆ. ಚಿತ್ರ ರಿಲೀಸ್ ಆದ ಮೇಲೆ ನಾವು ಕೆಲ ಜಿಲ್ಲೆಗಳಿಗೆ ಹೋದಾಗ ಅಭಿಮಾನಿಗಳ ರೆಸ್ಪಾನ್ಸ್ ನೋಡಿ ನನಗೆ ಬಹಳ ಖುಷಿ ಆಯಿತು. ಕರ್ನಾಟಕದಲ್ಲಿ ಮಾತ್ರವಲ್ಲ ವೇದ ಸಿನಿಮಾಗೆ ಚೆನ್ನೈ, ಹೈದರಾಬಾದ್​ನಲ್ಲಿಯೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ವೇದ 2:ನನ್ನ ಚೆನ್ನೈ ಸ್ನೇಹಿತರು ತಮಿಳು ಭಾಷೆಯಲ್ಲಿ ಸಿನಿಮಾ ನೋಡಿದ ಬಳಿಕ ನನಗೆ ಕರೆ ಮಾಡಿ ಮಾತನಾಡಿದರು. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು. ಹಾಗೇ ಮುಂಬೈನಲ್ಲಿಯೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್​ನ ಕೆಲ ಪ್ರೊಡಕ್ಷನ್ ಸಂಸ್ಥೆಗಳು ಹಿಂದಿಗೆ ಡಬ್ಬಿಂಗ್ ಮಾಡುವ ಬಗ್ಗೆ ಕೇಳುತ್ತಿದ್ದಾರೆ. ಮುಂದೆ ವೇದ ಪಾರ್ಟ್ 2 ಮಾಡುವ ಆಲೋಚನೆ ಇದೆ ಎಂದರು. ಈ ಬಗ್ಗೆ ನಿರ್ದೇಶಕ ಹರ್ಷ ಕೂಡ ವೇದ 2 ಸಿನಿಮಾ ಯೋಚನೆ ಇದೆ ಅಂತಾ ಸುಳಿವು ನೀಡಿದರು.

ಇದನ್ನೂ ಓದಿ:ಚಿತ್ರಮಂದಿರಗಳಲ್ಲಿ ಶಿವಣ್ಣನ 125ನೇ ಚಿತ್ರದ ಅಬ್ಬರ: 'ವೇದ' ಕಲೆಕ್ಷನ್ ಎಷ್ಟು ಗೊತ್ತಾ?​​

ಇನ್ನು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ವೇದ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ನಮ್ಮ ಬ್ಯಾನರ್​ನಲ್ಲಿ ವರ್ಷಕ್ಕೆ ಒಂದು ಸಿನಿಮಾ ಮಾಡುವ ಯೋಚನೆ ಇದೆ ಎಂದು ತಿಳಿಸಿದರು.

ವೇದ ಕಥೆ ಏನು?: ಮಹಿಳೆಯರ ಮೇಲಿನ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ 'ವೇದ'. ಈಗಾಗಲೇ ಈ ರೀತಿಯ ಕಥಾಹಂದರ ಇರುವ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ನಿರ್ದೇಶಕ ಎ ಹರ್ಷ ಈ ಕಥೆಯನ್ನು 1960 ಹಾಗೂ 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ವಿಶೇಷವಾಗಿದೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಅದರ ವಿರುದ್ಧ ಸಿಡಿದೇಳಬೇಕು ಎಂಬುದೇ ವೇದ ಸಮಾಜಕ್ಕೆ ಕೊಡುವ ಸಂದೇಶ.

ವೇದ ಕಲೆಕ್ಷನ್: ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಘೋಷಿಸದೇ ಇದ್ದರೂ, ಈ ಸಿನಿಮಾದ ವಿತರಕರಾದ ಮಂಜುನಾಥ್ ಮೂರು ದಿನದ ಕಲೆಕ್ಷನ್ ಬಗ್ಗೆ ಡೀಟೆಲ್ಸ್​ ನೀಡಿದ್ದರು. ಮೊದಲ ದಿನ 5.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಎರಡನೇ ದಿನ 6.40 ಕೋಟಿ, ಮೂರನೇ ದಿನ 7.60 ಕೋಟಿ ರೂಪಾಯಿ ಸೇರಿ ಒಟ್ಟು 19 ಕೋಟಿ 80 ಲಕ್ಷ ರೂಪಾಯಿಯನ್ನು ಸಿನಿಮಾ ಬಾಚಿಕೊಂಡಿದೆ.

Last Updated : Dec 29, 2022, 7:26 PM IST

ABOUT THE AUTHOR

...view details