ಕರ್ನಾಟಕ

karnataka

ETV Bharat / entertainment

ಸಂತೋಷ್ ಆರ್ಯನ್ ನಟನೆಯ 'ದಿ ಭವಾನಿ ಫೈಲ್ಸ್'ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸಾಥ್​ - ಈಟಿವಿ ಭಾರತ ಕನ್ನಡ

ನಟ ಸಂತೋಷ್ ಆರ್ಯನ್ ಮುಂದಿನ ಸಿನಿಮಾದ ಟೈಟಲ್ ಅನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್ ಅನಾವರಣಗೊಳಿಸಿದ್ದಾರೆ.

Actor Santosh Aryan
ಸಂತೋಷ್ ಆರ್ಯನ್

By

Published : Jun 14, 2023, 6:18 PM IST

ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಟ ಸಂತೋಷ್ ಆರ್ಯನ್. ಇದೀಗ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಆರ್ಯನ್​ ಸಜ್ಜಾಗಿದ್ದಾರೆ. 'ದಿ ಭವಾನಿ ಫೈಲ್ಸ್' ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಲು ಸಜ್ಜಾಗಿದ್ದಾರೆ.

ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಆರ್ಯನ್​ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರ ಈ ಹೊಸ ಚಿತ್ರಕ್ಕೆ ದೊಡ್ಮನೆ ಸೊಸೆ ಸಾಥ್ ಕೊಟ್ಟಿದ್ದಾರೆ. 'ದಿ ಭವಾನಿ ಫೈಲ್ಸ್' ಸಿನಿಮಾದ ಟೈಟಲ್ ಅನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್ ಅನಾವರಣಗೊಳಿಸಿದ್ದಾರೆ. ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.​

'ದಿ ಭವಾನಿ ಫೈಲ್ಸ್'

'ದಿ ಭವಾನಿ ಫೈಲ್ಸ್' ಟೈಟಲ್​ ಪೋಸ್ಟರ್​ ಭಾರೀ ಕುತೂಹಲ ಮೂಡಿಸುವಂತಿದೆ. ಇಡೀ ಸಿಟಿ ತಲೆಕೆಳಗಾದಂತೆ, ಸಂತೋಷ್​ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವಂತೆ ಡಿಸೈನ್​ ಮಾಡಲಾಗಿದೆ. ಡಾರ್ಕ್​ ಬ್ಲೂ ಕಲರ್​ ಇಟ್ಟುಕೊಂಡು ಚಿತ್ರಿಸಲಾಗಿದೆ. ಸಂತೋಷ್​ ಆರ್ಯನ್​ ಜೊತೆಗೆ ಒಂದು ನಾಯಿಯು ಪಕ್ಕದಲ್ಲಿ ನಿಂತುಕೊಂಡಿದೆ. ಈ ಟೈಟಲ್​ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:Actor Jaggesh: ಮೂರು ಕನ್ನಡ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಜಗ್ಗೇಶ್​ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 14ನೇ ಶತಮಾನ ‘ದಿ ಭವಾನಿ ಫೈಲ್ಸ್’ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ. ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ.

ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾಗೆ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಾಥ್ ಕೊಡಲಿದೆ. ಈ ಸಿನಿಮಾದ ಕಥೆ ಮತ್ತು ಉಳಿದ ಕಾಸ್ಟ್​ ಮತ್ತು ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

ಇದನ್ನೂ ಓದಿ:Kichcha Sudeep: ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲು ಸಜ್ಜಾದ ಸುದೀಪ್‌ ಕುಟುಂಬದ ಕುಡಿ

ಶುಭ ಕೋರಿದ ಪ್ರಿಯಾಂಕಾ ಉಪೇಂದ್ರ:ರಿಯಲ್​ ಸ್ಟಾರ್​ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ‘ದಿ ಭವಾನಿ ಫೈಲ್ಸ್’ ಚಿತ್ರತಂಡಕ್ಕೆ ಶುಭಕೋರಿದ್ದಾರೆ. "ಸಂತೋಷ್​ ಆರ್ಯನ್​ ಮತ್ತು ಇಡೀ ಚಿತ್ರತಂಡಕ್ಕೆ ಶುಭಾಶಯಗಳು. ಸಿನಿಮಾಗೆ ಉತ್ತಮ ಸಕ್ಸಸ್​ ಸಿಗಲಿ, ಒಳ್ಳೆಯದಾಗಲಿ" ಎಂದು ಟ್ವೀಟ್​ ಮಾಡಿದ್ದಾರೆ.

ಸಂತೋಷ್​ ಆರ್ಯನ್​ ಕನ್ನಡದ ಬಿಗ್​ ಬಾಸ್​ ಸೀಸನ್​ 2ರ ಸ್ಪರ್ಧಿಯಾಗಿದ್ದರು. ಶೋನಲ್ಲಿ ಇರುವಾಗಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫು ಮತ್ತು ಹಳ್ಳಿ ಹೈದ ಪ್ಯಾಟೇಗ್​ ಬಂದ ರಿಯಾಲಿಟಿ ಶೋಗಳಲ್ಲೂ ಗುರುತಿಸಿಕೊಂಡಿದ್ದರು. ಬಳಿಕ ಅವರು ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಸಿನಿಮಾಗೂ ಕಾಲಿಟ್ಟರು.

ABOUT THE AUTHOR

...view details