ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಬಾಂಗ್ ಹೀರೋನ ವಯಸ್ಸು ಹೆಚ್ಚಾದಂತೆ ಅವರ ಫ್ಯಾನ್ಸ್ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಸದ್ಯ ಅವರು 'ಬಿಗ್ ಬಾಸ್ OTT 2' ರಿಯಾಲಿಟಿ ಶೋನ ನಿರೂಪಕರಾಗಿದ್ದಾರೆ. ಹಲವು ಬಾರಿ ಈ ಶೋನ ಅವರು ಬಿಟ್ಟು ಹೋಗುವುದಾಗಿ ಬಹಿರಂಗವಾಗಿ ಹೇಳುತ್ತಿರುತ್ತಾರೆ. ಆದರೆ, ಪುನಃ ಅವರು ಶೋಗೆ ಹಿಂತಿರುಗುತ್ತಾರೆ. ಇದಕ್ಕೆ ಕಾರಣವನ್ನೂ ಸಲ್ಮಾನ್ ಖಾನ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಅಭಿಮಾನಿಗಳ ಮೇಲಿನ ನಿಜವಾದ ಪ್ರೀತಿ ಮತ್ತು ಮೆಚ್ಚುಗೆಯು ಅವರನ್ನು ಪ್ರತಿ ಬಾರಿ ಹಿಂತಿರುಗುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. "ನನ್ನ ಅಭಿಮಾನಿಗಳು ನನ್ನ ದೊಡ್ಡ ಸಾಧನೆ ಮತ್ತು ಹೆಮ್ಮೆ. ನಾನು ಇಂದು ಏನಾಗಿದ್ದರೂ ಅದು ಅವರಿಂದಲೇ. ಹೌದು, ನಾನು ಕಾರ್ಯಕ್ರಮದ ವೇಳೆ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ಹೊರ ಹೋಗುತ್ತೇನೆ. ಆದರೆ, ನಾನು ಮತ್ತೆ ಅಭಿಮಾನಿಗಳಿಗಾಗಿ ಮಾತ್ರ ಹಿಂತಿರುಗುತ್ತೇನೆ. ಏಕೆಂದರೆ ಅವರು ನನ್ನ ವಾರಾಂತ್ಯದ ಕಾರ್ಯಕ್ರಮಕ್ಕಾಗಿ ಕಾಯುತ್ತಿರುತ್ತಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:'ಲಿಯೋ' ಚಿತ್ರದಿಂದ ಸಂಜಯ್ ದತ್ ಫಸ್ಟ್ ಲುಕ್ ಔಟ್: ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ
'ಬಿಗ್ ಬಾಸ್' ರಿಯಾಲಿಟಿ ಶೋ ಆಗಿದೆ. ಬಿಗ್ ಬಾಸ್ ಶೋ ಮೊದಲಿಗೆ ಹಿಂದಿ ಭಾಷೆಯಲ್ಲಿ ಪ್ರಾರಂಭವಾಯಿತು. ನಂತರ ಇದನ್ನು ಕನ್ನಡ, ಬಂಗಾಳಿ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ಏಳು ಭಾಷೆಗಳಿಗೆ ವಿಸ್ತರಿಸಲಾಯಿತು. ಸಲ್ಮಾನ್ ಖಾನ್ ಅವರು 2010 ರಲ್ಲಿ ಬಿಗ್ ಬಾಸ್ ಸೀಸನ್ 4 ರೊಂದಿಗೆ ಕಾರ್ಯಕ್ರಮದ ನಿರೂಪಕರಾಗಿ ಸೇರಿಕೊಂಡರು. ಅಂದಿನಿಂದ ಇಂದಿನಿವರೆಗೂ ಅಂದರೆ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಈ ಶೋನ ಭಾಗವಾಗಿದ್ದಾರೆ.