ಕರ್ನಾಟಕ

karnataka

ETV Bharat / entertainment

ನಟ ಸಲ್ಮಾನ್​ ಖಾನ್​ ಬಂದೂಕು ಹೊಂದಲು ಪರವಾನಗಿ ನೀಡಿದ ಮುಂಬೈ ಪೊಲೀಸ್​ - ಈಟಿವಿ ಭಾರತ ಕನ್ನಡ

ಜೀವ ಬೆದರಿಕೆ ಹಿನ್ನೆಲೆ ಸಲ್ಮಾನ್​ ಖಾನ್​ ಇತ್ತೀಚೆಗೆ ಬಹಳಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಬುಲೆಟ್​ ಪ್ರೂಫ್​ ಕಾರನ್ನೂ ಕೂಡ ಖರೀದಿಸಿದ್ದರು ಎನ್ನಲಾಗುತ್ತಿದೆ.

Bollywood actor Salman Khan
ಬಾಲಿವುಡ್​ ನಟ ಸಲ್ಮಾನ್​ ಖಾನ್​

By

Published : Aug 1, 2022, 10:21 AM IST

ಮುಂಬೈ:ಸಲ್ಮಾನ್​ ಖಾನ್ ಅವರ ಮನವಿಯನ್ನು ಪುರಷ್ಕರಿಸಿರುವ ಮುಂಬೈ ಪೊಲೀಸರು ಸ್ವಯಂ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳಲು ಪರವಾನಗಿ ನೀಡಿದ್ದಾರೆ. ​ಎರಡು ತಿಂಗಳ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೀಡಿದ್ದ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನೀಗ ಮುಂಬೈ ಪೊಲೀಸರು ಮಾನ್ಯ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಸಲ್ಮಾನ್ ಕೆಲ ದಿನಗಳ ಹಿಂದೆ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಕೂಡ ಭೇಟಿ ಮಾಡಿದ್ದರು. ಜೀವ ಬೆದರಿಕೆ ಹಿನ್ನೆಲೆ ಸಲ್ಮಾನ್​ ಖಾನ್​ ಇತ್ತೀಚೆಗೆ ಬಹಳಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಬುಲೆಟ್​ ಪ್ರೂಫ್​ ಕಾರನ್ನೂ ಕೂಡ ಖರೀದಿಸಿದ್ದರು. ಅದರ ಜೊತೆಗೆ ತಮ್ಮ ಬಾಡಿಗಾರ್ಡ್​ಗಳ ಸಂಖ್ಯೆಯನ್ನೂ ಹೆಚ್ಚು ಮಾಡಿಕೊಂಡಿದ್ದರು. ಅನಗತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ, ಚಿತ್ರೀಕರಣಕ್ಕೆ ತೆರಳುವುದಾದರೂ ಬುಲೆಟ್​ ಪ್ರೂಫ್​ ಕಾರಲ್ಲೇ ಹೋಗುತ್ತಿದ್ದಾರೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಸಲ್ಮಾನ್​ ಖಾನ್​ ಅವರ ಮನೆಗೆ ಪತ್ರವೊಂದು ಬಂದಿತ್ತು. ಅದರಲ್ಲಿ ಸಿಧು ಮೂಸೆವಾಲಾ ಅವರನ್ನು ಕೊಂದಂತೆ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಬರೆದಿತ್ತು. ಇದಾದ ಬಳಿಕ ದೂರು ನೀಡಿದ್ದ ಸಲ್ಮಾನ್​ ನಿವಾಸಕ್ಕೆ ಪೊಲೀಸ್​ ಭದ್ರತೆ ನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್​ ಬಂದೂಕು ಹೊಂದಲು ಪೊಲೀಸ್​ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಹತ್ಯೆ ಮಾಡುವುದಾಗಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ!

ABOUT THE AUTHOR

...view details