ಕರ್ನಾಟಕ

karnataka

ETV Bharat / entertainment

ಪ್ರಶಾಂತ್ ಆಗಿದ್ದ ರಿಷಬ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​​...ಶೆಟ್ರ ಮೇಲಿದೆ ದೊಡ್ಡ ಜವಾಬ್ದಾರಿ! - ರಿಷಬ್ ಶೆಟ್ಟಿ ಸಿನಿ ಜರ್ನಿ

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ಸಿನಿ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

actor Rishab shetty
ನಟ ರಿಷಬ್ ಶೆಟ್ಟಿ

By

Published : Feb 11, 2023, 4:34 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಡೊಡ್ಡ ಮಟ್ಟದ ಹೆಸರು ಮಾಡಿರುವ ನಟ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಹೆಸರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಡಿವೈನ್​ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ರೈತ ಕುಟುಂಬದಿಂದ ಬಂದ ರಿಷಬ್ ಶೆಟ್ಟಿ ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಬಂದು ಪ್ಯಾನ್​ ಇಂಡಿಯಾ ಸ್ಟಾರ್ ಆಗಿದ್ದು ಮಾತ್ರ ಸಖತ್​ ಇಂಟ್ರೆಸ್ಟ್ರಿಂಗ್ ನೋಡಿ.

ಪ್ರಶಾಂತ್ ಶೆಟ್ಟಿ ಯಾರು?ಅಂತಾ ಕೇಳಿದ್ರೆ ಪ್ರೇಕ್ಷಕರಿಗೆ ಯಾರೆಂದು ಅಷ್ಟು ಸುಲಭದಲ್ಲಿ ಗೊತ್ತಾಗಲಿಕ್ಕಿಲ್ಲ. ಅದೇ ರಿಷಬ್ ಶೆಟ್ಟಿ ಎಂದರೆ ಥಟ್​ ಎಂದು ತಲೆಗೆ ಬರುವುದು ಕಾಂತಾರ ಸಿನಿಮಾದ ನಟ, ನಿರ್ದೇಶಕ ಅಂತಾ. ಹಾಗಾದ್ರೆ ಪ್ರಶಾಂತ್ ಶೆಟ್ಟಿ ಯಾರು ಅಂತೀರಾ, ಅದು ರಿಷಬ್ ಶೆಟ್ಟಿ ಮೂಲ ಹೆಸರು.

ನಟ ರಿಷಬ್ ಶೆಟ್ಟಿ

ಇಂದು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವತಿಯಿಂದ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ತಾವು ಈ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ? ಕಾಂತಾರ ಸಿನಿಮಾ ಕಥೆ ಹುಟ್ಟಿದ್ದು ಹೇಗೆ? ಕಾಂತಾರ ಸಿನಿಮಾದ ದೊಡ್ಡ ಸಕ್ಸಸ್ ಬಗ್ಗೆ ಅಭಿಪ್ರಾಯವೇನು? ಕಾಂತಾರ ಚಿತ್ರದ ಹಿಂದಿನ ಭಾಗ (ಕಾಂತಾರ 1) ಬಗ್ಗೆ ಏನು ಹೇಳಿದರು? ಎಂಬುದರ ಮಾಹಿತಿ ಇಲ್ಲಿದೆ.

ಜ್ಯೋತಿಷಿಯವರ ಸಲಹೆಯಂತೆ ಹೆಸರು ಬದಲಾವಣೆ:ಮೂಲತಃ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಪ್ರಶಾಂತ್ ಶೆಟ್ಟಿ ಅಂದ್ರೆ ರಿಷಬ್ ಶೆಟ್ಟಿ ಜನಿಸಿದರು. ಭಾಸ್ಕರ್ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ದಂಪತಿ ಮಕ್ಕಳಲ್ಲಿ ಕೊನೆಯವರೇ ರಿಷಬ್ ಶೆಟ್ಟಿ. ತಂದೆ ಭಾಸ್ಕರ್ ಶೆಟ್ಟಿ ಅವರಿಗೆ ಜ್ಯೋತಿಷಿ ಅವರು ಪ್ರಶಾಂತ್ ಶೆಟ್ಟಿ ಬದಲು ಆರ್ ಎಂಬ ಅಕ್ಷರದ ಹೆಸರನ್ನು ಇಡಿ ಎಂದು ಹೇಳಿದ್ದರಂತೆ. ಅಪ್ಪನ ಮಾತಿನಂತೆ ಪ್ರಶಾಂತ್ ಶೆಟ್ಟಿ ಅವರು ರಿಷಬ್ ಶೆಟ್ಟಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡ್ರು. ಅಲ್ಲಿಂದ ಶೆಟ್ರು ಅದೃಷ್ಟ ಕುಲಾಯಿಸಿತಂತೆ. ಸಿನಿಮಾ ಹೀರೋ ಆಗಬೇಕು ಅಂತಾ ಬಂದ ರಿಷಬ್ ಶೆಟ್ಟಿ ಅವರಿಗೆ ನಟ ರಕ್ಷಿತ್ ಶೆಟ್ಟಿ ಪರಿಚಯ ಆಗಿ ರಿಕ್ಕಿ ಸಿನಿಮಾ ಮೂಲಕ ನಿರ್ದೇಶಕನಾಗಿ ಹೊರಹೊಮ್ಮುತ್ತಾರೆ.

ಕಾಂತಾರ ಕಥೆ ಹುಟ್ಟಿದ್ದು ಹೇಗೆ?ರಿಕ್ಕಿ ಸಿನಿಮಾ ಬಳಿಕ ಕನ್ನಡ ಚಿತ್ರರಂಗದ ಒಂದೊಂದೆ ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದ ರಿಷಬ್ ಶೆಟ್ಟಿ ಕಾಂತಾರ ಎಂಬ ದೈವಾರಾಧನೆ ಕಥೆಯುಳ್ಳ ಸಿನಿಮಾದಿಂದ ಇಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ರಿಷಬ್ ಶೆಟ್ಟಿ ಅವರ ಸ್ನೇಹಿತನ ಗದ್ದೆಗೆ ಕಾಡು ಹಂದಿ ಬಂದು ಹಾಳು ಮಾಡುತ್ತಿತ್ತು. ಆ ಹಂದಿಯನ್ನು ಹೊಡೆಯಲು ರಿಷಬ್ ಶೆಟ್ಟಿ ಹಾಗೂ ಸ್ನೇಹಿತನ ಬಳಗ ಒಂದು ವಾರಗಳ ಕಾಲ ಹುಡುಕುತ್ತಾರೆ. ಆದರೆ ಆ ಹಂದಿ ಸಿಗೋದಿಲ್ಲ. ಕೊನೆಗೆ ಹಂದಿ ಹೊಡೆಯಲು ಒಂದು ಮರದಲ್ಲಿ ಕಾದು ಕುಳಿತುಕೊಳ್ತಾರೆ. ಆ ಹಂದಿ ಹೊಡೆಯಲು ಕೂತಿರೋ ಮಾಹಿತಿ ಫಾರೆಸ್ಟ್ ಆಫೀಸರ್​ಗೆ ಲಭ್ಯವಾಗುತ್ತದೆ. ಅವರು ರಿಷಬ್ ಸ್ನೇಹಿತನ ಮನೆಗೆ ರೈಡ್ ಮಾಡ್ತಾರೆ. ಆಗ ಲೋಡೆಡ್ ಗನ್ ಸಿಗುತ್ತದೆ. ಆಗ ಹುಟ್ಟಿದ ಕಥೆಯೇ 'ಕಾಂತಾರ' ಎಂದು ರಿಷಬ್ ಶೆಟ್ಟಿ ತಿಳಿಸಿದರು.

ಕೆಲಸ ಮಾಡೋದೇ ನನ್ನ ಧ್ಯೇಯ:ನಾನು ಯಾವುದೇ ಗೆಲುವನ್ನು ಅಥವಾ ಸೋಲನ್ನು ತಲೆಗೆ ಅಂಟಿಸಿಕೊಳ್ಳುವುದಿಲ್ಲ. ಕೆಲಸ ಮಾಡೋಣ ಎಂದೇ ಯೋಚನೆ ಮಾಡುತ್ತೇನೆ. ಯಾವುದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವಾರ್ಡ್ ಪಡೆಯಲೋ ನಾನು ಸಿನಿಮಾ ಮಾಡಲ್ಲ. ಅದೇ ರೀತಿ ಕಾಂತಾರ ಸಿನಿಮಾವನ್ನು ಮೊದಲು ಕನ್ನಡಕ್ಕೆ ಮಾಡಿದೆವು. ನಂತರ ಈ ಸಿನಿಮಾ ಇತರೆ ಭಾಷೆಗಳಿಗೆ ಹೋಗುತ್ತೆ ಎಂದು ಕೂಡ ನಾನು ಅಂದುಕೊಂಡಿರಲಿಲ್ಲ. ಕಾಂತಾರ ಇಂಗ್ಲೀಷ್​ನಲ್ಲೂ ಬರುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಇಂಗ್ಲಿಷ್ ಅವತರಣಿಕೆ ಬರುತ್ತಿದೆ ಅನ್ನೋದು ಸಂತೋಷದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

ಹೊಂಬಾಳೆ ಫಿಲ್ಮ್ಸ್ ಬೆಂಬಲ:ಮೊದಲು ಕಾಂತಾರ ಸಿನಿಮಾ ಸಣ್ಣ ಬಜೆಟ್​ನಲ್ಲಿ ಆಗುತ್ತೆ ಎಂದು ಅಂದುಕೊಂಡೆವು. ಆದರೆ ಸಿನಿಮಾದ ಬಜೆಟ್ ಡಬಲ್ ಆಯಿತು. ಹೊಂಬಾಳೆ ಫಿಲ್ಮ್ಸ್​​ ಸಂಸ್ಥೆಯ ಜಾಗದಲ್ಲಿ ಬೇರೆಯುವರು ಇದ್ದಿದ್ರೆ, ಈ ಸಿನಿಮಾ ಇಲ್ಲಿಗೆ ನಿಲ್ಲಿಸಿ ಅಂತಾ ಹೇಳುತ್ತಿದ್ದರೇನೋ. ಆದರೆ ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರ್ ಅವರು ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಂತಾ ಹೇಳಿದ ಮೇಲೆ ಕಾಂತಾರ ಸಿನಿಮಾ ಆಯಿತು ಎಂದು ತಿಳಿಸಿದರು. ಬಾಹುಬಲಿ, ಆರ್​ಆರ್​ಆರ್, ಕೆಜಿಎಫ್ ಸಿನಿಮಾದಷ್ಟು ದೊಡ್ಡ ಬಜೆಟ್ ಸಿನಿಮಾ ನಮ್ಮದಲ್ಲ. ಆದ್ರೆ ಕಾಂತಾರ ನನ್ನ ಸಿನಿ ಜೀವನದಲ್ಲೇ ದೊಡ್ಡ ಬಜೆಟ್ ಸಿನಿಮಾ. ಪ್ರತಿಫಲವಾಗಿ, ಕಾಂತಾರ ಸಿನಿಮಾ ಜನರನ್ನು ತಲುಪಿ ಯಶಸ್ವಿ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಪ್ರೇಕ್ಷಕರನ್ನು ಸಿನಿಮಾ ಸಂಪರ್ಕಿಸಿತು:ಕಾಂತಾರ ಸಿನಿಮಾ ಜನರ ಬಾಯಲ್ಲಿ ಓಡಾಡಲು ಪ್ರಮುಖ ಕಾರಣ ನಮ್ಮದು ವೈವಿಧ್ಯಮಯ ದೇಶ. ನಮ್ಮಲ್ಲಿ ಹಲವಾರು ಸಂಸ್ಕೃತಿಗಳು ಇವೆ. ಪ್ರತಿಯೊಬ್ಬರು ಅವರವರ ದೈವಗಳನ್ನು, ದೇವರನ್ನು ಈ‌ ಸಿನಿಮಾದಲ್ಲಿ ನೋಡಿ ಚಿತ್ರಕ್ಕೆ ಕನೆಕ್ಟ್ ಆಗುತ್ತಾ ಹೋದ್ರು. ಈ‌ ಸಿನಿಮಾ ಕೇವಲ ದೈವದ ಬಗ್ಗೆ ಅಲ್ಲ, ಒಂದು ಸಮಾಜದ ಬಗ್ಗೆ, ಹಾಡಿ ಜನರ ಬಗ್ಗೆ ಸೇರಿ ಎಲ್ಲವೂ ಇದೆ. ಹೀಗಾಗಿ ಎಲ್ಲರಿಗೂ ಈ‌ ಸಿನಿಮಾ ಸಂಪರ್ಕಿಸಿತು. ದೈವ ದೇವರು ಯಾರಿಗೂ ಸ್ವಂತ ಅಲ್ಲ. ದೇವರು ದೈವ ಅಂದ್ರೆ ಭಯ ಭಕ್ತಿ ಇರಬೇಕು. ನನ್ನ ಪ್ರಕಾರ ಕಾಂತಾರ ಸಿನಿಮಾ ಬಂದ ಮೇಲೆ ದೈವದ ಮೇಲೆ ಪ್ರೀತಿ, ಭಕ್ತಿ ಹೆಚ್ಚಾಗಿದೆ. ವರಾಹ ರೂಪಂ ಹಾಡಿನಲ್ಲಿ ಇಡೀ ಭೂತಕೋಲವನ್ನು ತೋರಿಸಿದ್ದೇವೆ ಎಂಬದು ರಿಷಬ್ ಶೆಟ್ಟಿ.

16 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಬರೋಬ್ಬರಿ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್​​ನ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಸಿನಿಮಾದ ಲೈಟ್ ಬಾಯ್​ನಿಂದ ಹಿಡಿದು ತಂತ್ರಜ್ಞನರಿಗೆ ದುಪ್ಪಟ್ಟು ಸಂಭಾವನೆ ಕೊಟ್ಟಿದ್ದಾರೆ ಅಂತಾ ರಿಷಬ್ ಶೆಟ್ಟಿ ಹೇಳಿದರು. ಆದರೆ ಹೊಂಬಾಳೆ ಫಿಲ್ಸ್ಮ್ ಸಂಸ್ಥೆಯಿಂದ ಎಷ್ಟು ಕೋಟಿ ಶೇರ್ ಕೊಟ್ರು ಅನ್ನೋ ವಿಚಾರವನ್ನು ರಿಷಬ್​ ಬಿಟ್ಟು ಕೊಡಲಿಲ್ಲ.

ಇದನ್ನೂ ಓದಿ:RRR​ ಬಗ್ಗೆ ಸ್ಪೀಲ್‌ಬರ್ಗ್ ಗುಣಗಾನ: ಕುರ್ಚಿಯಿಂದ ಎದ್ದು ಕುಣಿಯುವಷ್ಟು ಸಂತೋಷಪಟ್ಟ ರಾಜಮೌಳಿ

ಕಾಂತಾರ 2 (ಕಾಂತಾರ 1) ಸಿನಿಮಾ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, ಸದ್ಯ ಕಾಂತಾರ 2 ಸಿನಿಮಾ ನೋಡಿದ್ದೀರ. ಮುಂದೆ ನೋಡಬೇಕಾಗಿರೋದು ಕಾಂತಾರ ಪಾರ್ಟ್ 1. ಈ ಸಿನಿಮಾದ ಕಥೆ ಹಾಗು ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರೆ ಕಾಂತಾರ ಪ್ರೀಕ್ವೆಲ್ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ಪ್ರೀಕ್ವೆಲ್​ನಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಥವಾ ಸಿಗದೆಯೂ ಇರಬಹುದು. ಅಥವಾ ಹೊಸ ಪ್ರಶ್ನೆಯನ್ನು ಹುಟ್ಟು ಹಾಕಬಹುದು ಎಂದು ರಿಷಬ್ ಶೆಟ್ಟಿ ಹೇಳಿದರು.

ಇದನ್ನೂ ಓದಿ:'ಕಾಂತಾರ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ!

ಈ ಕಾಂತಾರ ಸಿನಿಮಾ ಮುಗಿದ ಮೇಲೆ ಶಿವ ರಾಜ್​ಕಮಾರ್, ಕಿಚ್ಚ ಸುದೀಪ್ ಅವರಂತಹ ದೊಡ್ಡ ನಟರ ಸಿನಿಮಾಗಳನ್ನು ನಿರ್ದೇಶನ ಮಾಡಬೇಕಿದೆ. ಇನ್ನೂ ಯಶ್ 19 ಸಿನಿಮಾ ಬಗ್ಗೆ ನನಗೂ ದೊಡ್ಡ ಮಟ್ಟದ ಕುತೂಹಲ ಇದೆ. ಏಕಂದ್ರೆ ಕೆಜಿಎಫ್ 1 ಹಾಗು ಕೆಜಿಎಫ್ 2 ಅಂತಹ ಅದ್ಧೂರಿ ಮೇಕಿಂಗ್​ನಲ್ಲಿ ರೆಡಿ ಆಗಿ ಮಾಡಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ ಮೇಲೆ ಇದಕ್ಕಿಂತ ಚೆನ್ನಾಗಿರೋ ಕಥೆ ಮಾಡುವ ತಯಾರಿಯಲ್ಲಿ ಯಶ್​ ಇದ್ದಾರೆ ಅಂತಾ ರಿಷಬ್ ಶೆಟ್ಟಿ ಹೇಳಿದರು. ಈ ಕಾಂತಾರ ಸಿನಿಮಾದ ದೊಡ್ಡ ಮಟ್ಟದ ಸಕ್ಸಸ್ ನನಗೆ ದೊಡ್ಡ ಮಟ್ಟದ ಜವಾಬ್ದಾರಿ ತಂದುಕೊಟ್ಟಿರೋ ಕಾರಣ ನಾನು ಏನು ಮಾಡಿದರೂ ಅದನ್ನು ಪ್ರೇಕ್ಷಕರಿಗೆ ಇಷ್ಟ ಆಗುವಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.

ABOUT THE AUTHOR

...view details