ಕರ್ನಾಟಕ

karnataka

ETV Bharat / entertainment

ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್​ಗಳಲ್ಲಿ 'ಕಾಂತಾರ ಶೆಟ್ರು' ಬ್ಯುಸಿ - Rishab shetty upcoming movie

ಕಾಂತಾರ 2, ಬೆಲ್ ಬಾಟಮ್ 2 ಸಿನಿಮಾ ಕೆಲಸದಲ್ಲಿ ನಟ ರಿಷಬ್​ ಶೆಟ್ಟಿ ಬ್ಯುಸಿಯಾಗಿದ್ದಾರೆ.

Actor Rishab shetty busy in Kantara 2
ಕಾಂತಾರ 2 ಕೆಲಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿ

By

Published : Dec 6, 2022, 5:55 PM IST

ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ತಂದುಕೊಟ್ಟ ಸಿನಿಮಾ ಕಾಂತಾರ. ಸ್ಯಾಂಡಲ್​ವುಡ್​ ಜೊತೆ ರಿಷಬ್ ಶೆಟ್ಟಿ ಹೆಸರು ಉತ್ತುಂಗಕ್ಕೇರಿದೆ.​ ಕಾಂತಾರ ನಂತರ ರಿಷಬ್ ನಡೆ ಯಾವ ಸಿನಿಮಾ ಕಡೆ ಅನ್ನೋ ಕುತೂಹಲ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಶೆಟ್ರು ಮುಂದಿನ ವರ್ಷ ಬ್ಯಾಕ್ ಟು ಬ್ಯಾಕ್ ಎರಡು ಸಿಕ್ವೇಲ್ ಸಿನಿಮಾಗಳನ್ನು ಮಾಡೋದು ಬಹುತೇಕ ಖಚಿತವಾಗಿದೆ.

ರಿಷಬ್ ಚಿತ್ರಕ್ಕೆ 5 ಕೋಟಿ ಬಜೆಟ್ ಕೊಡಲು ಯೋಚಿಸುತ್ತಿದ್ದ ನಿರ್ಮಾಪಕ‌ರೀಗ ರಿಷಬ್ ಚಿತ್ರಕ್ಕೆ 100 ಕೋಟಿ ಬಂಡವಾಳ ಹೂಡಲು ನಾ ಮುಂದು ತಾ ಮುಂದು ಅಂತಿದ್ದಾರೆ. ಕಾಂತಾರ 2 ಚಿತ್ರದ ಕೆಲಸದಲ್ಲಿ ರಿಷಬ್ ಬಳಗ ಬ್ಯುಸಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಕೆಜಿಎಫ್ ಹಾದಿಯಲ್ಲೇ ಕಾಂತಾರ ಚಿತ್ರವನ್ನು ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿದೆ ಹೊಂಬಾಳೆ ಫಿಲ್ಮ್ಸ್. ಇನ್ನು ರಿಷಬ್ ಶೆಟ್ಟಿ ಕಾಂತಾರಕ್ಕೂ ಮೊದಲು ಕಮಿಟ್ ಆಗಿದ್ದ ಸಿನಿಮಾಗಳನ್ನು ಮಾಡ್ತಾರೋ, ಇಲ್ಲವೋ ಅನ್ನೋ ಪ್ರಶ್ನೆ ಕೂಡ ಇದೆ. ಏಕೆಂದರೆ ಯಶ್ ಕೆಜಿಎಫ್​ಗೂ ಮೊದಲು ಕಮಿಟ್ ಆಗಿದ್ದ ಚಿತ್ರಗಳನ್ನು, ಕೆಜಿಎಫ್ ನಂತರ ಕೈ ಬಿಟ್ಟಿದ್ರು. ಹೀಗಾಗಿ ರಿಷಬ್ ಶೆಟ್ಟಿ ಕೂಡ ಅದೇ ಸ್ಟಾಟರ್ಜಿಯಲ್ಲಿ ತಮ್ಮ ಪ್ಯಾನ್ ಇಂಡಿಯಾ ಮಾರ್ಕೆಟ್ ಬಿಲ್ಡ್ ಮಾಡಲು ಕಾಂತಾರಗೂ ಮೊದಲು ಅನೌನ್ಸ್ ಮಾಡಿದ್ದ ಚಿತ್ರಗಳನ್ನು ಮಾಡ್ತಾರೋ ಇಲ್ಲವೋ ಅನ್ನೋ ಚರ್ಚೆ ಶುರುವಾಗಿದೆ.

ಈ ಅಂತೆ ಕಂತೆಗಳ ನಡುವೆ ರಿಷಬ್ ಕಡೆಯಿಂದ ಸಿಹಿ ಸಮಾಚಾರವೊಂದು ಸಿನಿ ಪ್ರೇಮಿಗಳಿಗೆ ಸಿಕ್ಕಿದೆ. ಅದೇನಪ್ಪ ಅಂದ್ರೆ, ರಿಷಬ್ ಕಾಂತಾರ ನಂತರ ಎರಡು ಸಿಕ್ವೇಲ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡೊದು ಬಹುತೇಕ ಪಕ್ಕಾ ಆಗಿದೆ‌. ಕಾಂತಾರ ಗೆಲುವಿನ ಅಲೆಯನ್ನು ಮುಂದುವರೆಸೋ ಅಲೋಚನೆಯಲ್ಲಿ ಕಾಂತಾರ 2 ಮಾಡಿ, ಕಾಂತಾರ 2 ಮುಗಿಯುತ್ತಿದ್ದಂತೆ ಕಾಂತಾರಗೂ ಮೊದಲೂ ಅನೌನ್ಸ್ ಮಾಡಿದ್ದ ಸೂಪರ್ ಡೂಪರ್ ಹಿಟ್ ಚಿತ್ರದ ಸಿಕ್ವೇಲ್ ಬೆಲ್ ಬಾಟಮ್ 2 ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ‌.

ಬೆಲ್ ಬಾಟಮ್ 2 ಬಗ್ಗೆ ಬೆಲ್ ಬಾಟಮ್ ಸಿನಿಮಾ ನಿರ್ಮಾಪಕ ಸಂತೋಷ್ ಕನ್ಫರ್ಮ್ ಮಾಡಿದ್ದಾರೆ. ಕಾಂತಾರ 2 ಮುಗಿಯುತ್ತಿದಂತೆ ಬೆಲ್ ಬಾಟಮ್ 2 ಮಾಡೋಣ, ಪ್ಲಾನ್ ಮಾಡಿಕೊಳ್ಳಿ ಅಂತ ರಿಷಬ್ ತಿಳಿಸಿದ್ದಾರೆಂದು ಸಂತೋಷ್ ಹೇಳಿದ್ದಾರೆ.

ಇದನ್ನೂ ಓದಿ:ನ್ಯಾಯಾಂಗ ನಿಂದನೆ ಪ್ರಕರಣ: ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕ್ಷಮೆಯಾಚನೆ

ಇಂಟ್ರೆಸ್ಟಿಂಗ್ ಅಂದ್ರೆ ಬೆಲ್ ಬಾಟಮ್ ಕನ್ನಡದಲ್ಲಿ ಹಿಟ್ ಆಗಿ ಬೇರೆ ಭಾಷೆಗಳಿಗೆ ರಿಮೇಕ್ ಆಗಿತ್ತು. ಅದ್ರೆ ಬೆಲ್ ಬಾಟಮ್ 2 ಕನ್ನಡದಲ್ಲಿ ಮಾತ್ರವಲ್ಲ ಈಗಿನ ಟ್ರೆಂಡ್​ಗೆ ತಕ್ಕಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾಡಲು ನಿರ್ಮಾಪಕ ಸಂತೋಷ್ ಪ್ಲಾನ್ ಮಾಡಿ ಕೊಂಡಿದ್ದಾರೆ. ಅಲ್ಲದೇ ಪ್ಯಾನ್ ಇಂಡಿಯಾ ಬೆಲ್ ಬಾಟಮ್ 2 ಗಾಗಿ ರಿಷಬ್ ಜೊತೆ ಬಿಗ್ ಸ್ಟಾರ್ ನಟ ನಟಿಯರನ್ನು ಕರೆತಂದು ದೊಡ್ಡ ಮಟ್ಟದಲ್ಲಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಲ್ ಬಾಟಮ್ ಟೀಮ್ ಈಗಾಗಲೇ ಇದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದಾರೆ. ಮುಂದಿನ ವರ್ಷ ಹೊಂಬಾಳೆ ಬಳಗ ಅಫಿಶಿಯಲ್ ಆಗಿ ಕಾಂತಾರ 2 ಅನೌನ್ಸ್ ಮಾಡಿ, ಶೂಟಿಂಗ್ ಶುರು ಮಾಡಲಿದ್ದು, ಇದು ಮುಗಿಯುತ್ತಿದಂತೆ ರಿಷಬ್ ಡೈರೆಕ್ಷನ್​ಗೆ ಕೊಂಚ ಬ್ರೇಕ್ ಹಾಕಿ ಮತ್ತೆ ಡಿಟೆಕ್ಟಿವ್‌ ದಿವಾಕರನ ಅವತಾರದಲ್ಲಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ರಿಸರ್ಚ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ.

ABOUT THE AUTHOR

...view details