ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲೀಗ ಮದುವೆ ಸಂಭ್ರಮ. ಹಿರಿಯ ಪುತ್ರ ಮನೋರಂಜನ್ ಅವರು ಸಂಗೀತಾ ದೀಪಕ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿರುವ ವೈಟ್ ಪೆಟಲ್ಸ್‌ನ ತ್ರಿಪುರ ವಾಸಿನಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಿತು.
ಅದಕ್ಕೂ ಮುಂಚೆ ರವಿಚಂದ್ರನ್ ಕುಟುಂಬದವರು, ಸಂಬಂಧಿಕರು, ಮೆಹಂದಿ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದರು. ಮನೋರಂಜನ್ ರವಿಚಂದ್ರನ್, ಸಹೋದರ ವಿಕ್ರಮ್ ಸೇರಿದಂತೆ ಸಂಬಂಧಿಕರು ಕುಣಿದು ಕುಪ್ಪಳಿಸಿದರು. ಈ ಸಂಭ್ರಮದಲ್ಲಿ ರವಿಚಂದ್ರನ್ ಕೂಡ ಪತ್ನಿ ಸುಮತಿ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಿಪ್ ಆಫ್ ಮ್ಯೂಸಿಕ್‌ಗೆ ಇಡೀ ಕ್ರೇಜಿ ಕುಟುಂಬ ಸಖತ್ ಮಸ್ತಿ ಮಾಡಿದೆ.
ಶಿವರಾಜ್ ಕುಮಾರ್, ರಾಘವೇಂದ್ರ ಕುಮಾರ್, ಬಹುಭಾಷೆ ನಟಿ ಖುಷ್ಬೂ, ನಾಗಾಭರಣ, ಹಂಸಲೇಖ, ಉಮಾಶ್ರೀ ಹಾಗು ರಾಜಕಾರಣಿಗಳಾದ ಸಿ ಟಿ ರವಿ, ಕಟ್ಟಾ ಸುಬ್ರಮಣ್ಯಂ ನಾಯ್ಡು ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಹಾಗು ರಾಜಕೀಯ ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದರು.