ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ನಟ ರಾಮ್ ಚರಣ್ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಜೊತೆಗೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಆರ್ಆರ್ಆರ್ ಸೂಪರ್ ಹಿಟ್ ಸಿನಿಮಾದ ನಂತರ ಪ್ರಪಂಚದಾದ್ಯಂತ ಹೆಸರು ಮಾಡಿದ ಗ್ಲೋಬಲ್ ಸ್ಟಾರ್ ಇದೀಗ ಕಾಲಿವುಡ್ ಹಿಟ್ ನಿರ್ದೇಶಕ ಶಂಕರ್ ಜೊತೆ ಕೈ ಜೋಡಿಸಿದ್ದಾರೆ. 'ಗೇಮ್ ಚೇಂಜರ್' ಎಂಬ ಪವರ್ ಫುಲ್ ಟೈಟಲ್ ಜೊತೆಗೆ ರಗಡ್ ಲುಕ್ನಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ.
ಮೆಗಾ ಪವರ್ ಸ್ಟಾರ್ ಜನ್ಮದಿನದ ಸಂಭ್ರಮದಲ್ಲಿದ್ದು, ಇಂದು ಬೆಳಗ್ಗೆ RC15 ಟೈಟಲ್ ಅನೌನ್ಸ್ ಆಗಿದ್ದು, 'ಗೇಮ್ ಚೇಂಜರ್' ಆಗಿ ರಾಮ್ ಚರಣ್ ಮಿಂಚಲಿದ್ದಾರೆ. ಸಿನಿಮಾವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಮತ್ತು ಶಿರೀಜ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಸಿನಿಮಾ ನಂತರ ರಾಮ್ ಚರಣ್ ಮತ್ತು ಕಿಯಾರಾ ಈ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ.
ಇನ್ನು ಮಗಧೀರ ಐಎಎಸ್ ಅಧಿಕಾರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ತಮಿಳು ಚಿತ್ರರಂಗದ ಎಸ್.ಜೆ. ಸೂರ್ಯ ಕೂಡ ಚಿತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇವರಲ್ಲದೇ ಈ ಸಿನಿಮಾದಲ್ಲಿ ಜಯರಾಮ್, ಅಂಜಲಿ, ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಲೈಫ್ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಅತ್ಯುತ್ತಮ ನಟ