ಚೆನ್ನೈ(ತಮಿಳುನಾಡು): ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಭಾಗ-1 ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಚಿತ್ರದಲ್ಲಿ ತಮಿಳುನಾಡು ನಟ ವಿಕ್ರಮ್ ನಟನೆ ಮಾಡಿದ್ದು, ಅದ್ಧೂರಿ ಸೆಟ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದ ಕನ್ನಡ ಟೀಸರ್ ಅನ್ನು ನಟ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ನಟ ವಿಕ್ರಮ್, ಜಯಮ್ ರವಿ, ಕಾರ್ತಿ, ತ್ರಿಷಾ, ಶೋಬಿತಾ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟನೆ ಮಾಡಿದ್ದು, ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನವಿದೆ.
ಬಹಳ ವರ್ಷಗಳ ಬಳಿಕ ನಟಿ ಐಶ್ವರ್ಯಾ ರೈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಹೆಚ್ಚಿನ ಹೈಲೈಟ್ ಆಗಿದೆ. ಇನ್ನೂ ಮಣಿರತ್ನಂ ಹಾಗೂ ಐಶ್ವರ್ಯಾ ಒಟ್ಟಾಗಿ ಕೆಲಸ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ.