ಕರ್ನಾಟಕ

karnataka

ETV Bharat / entertainment

ರಕ್ಷಿತ್-ಶ್ರೀನಿಧಿ ಮಧ್ಯೆ 'ಹಾಗೇ ಸುಮ್ಮನೆ' ಕಮೆಂಟ್​; ಏನ್​ ನಡೀತಿದೆ ಶೆಟ್ರೇ? ಎಂದ ಫ್ಯಾನ್ಸ್​ - etv bharat kannada

ನಟಿ ಶ್ರೀನಿಧಿ ಶೆಟ್ಟಿ ಶೇರ್​ ಮಾಡಿಕೊಂಡಿರುವ ಫೋಟೋಗೆ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಕಮೆಂಟ್​ ಮಾಡಿದ್ದಾರೆ.

photo
ರಕ್ಷಿತ್​ - ಶ್ರೀನಿಧಿ

By

Published : Mar 30, 2023, 10:13 AM IST

ಕೆಜಿಎಫ್​ 2 ಸುಂದರಿ ಶ್ರೀನಿಧಿ ಶೆಟ್ಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕರಾವಳಿ ಬೆಡಗಿ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚಿದ ಬಳಿಕ ಇವರ ಡಿಮ್ಯಾಂಡ್​ ಜಾಸ್ತಿಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿರುವ ಶ್ರೀನಿಧಿ ಬಿಡುವಿದ್ದಾಗ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಈ ಬಾರಿ ಕೂಡ ತಮ್ಮ ಮುದ್ದಾದ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದು, ನಟ ರಕ್ಷಿತ್​ ಶೆಟ್ಟಿ ಕಮೆಂಟ್​ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್​ ಅವರಿಬ್ಬರ ಕಾಲೆಳೆದಿದ್ದಾರೆ.

ಶ್ರೀನಿಧಿ ಶೆಟ್ಟಿ ಕೆಜಿಎಫ್​ ಚಿತ್ರದ ಮೂಲಕ ಕನ್ನಡಿಗರ 'ನಿಧಿ'ಯಾಗಿದ್ದಾರೆ. ಇವರಿಗೆ ಹೆಚ್ಚಿನ ಸಂಖ್ಯೆಯ​ ಫ್ಯಾನ್​ ಫಾಲೋವಿಂಗ್​ ಇದ್ದು, ಇನ್​ಸ್ಟಾಗ್ರಾಮ್​ನಲ್ಲಿ 4.8 ಮಿಲಿಯನ್​ ಅನುಯಾಯಿಗಳಿದ್ದಾರೆ. ಇವರು ಪೋಸ್ಟ್​ ಮಾಡೋ ಎಲ್ಲಾ ಫೋಟೋಗಳು ಲಕ್ಷಾಂತರ ಲೈಕ್ಸ್​ ಪಡೆಯುತ್ತಿವೆ. ಇದೀಗ ಹೊಸ ಪೋಟೋವೊಂದನ್ನು ನಟಿ ಶೇರ್ ಮಾಡಿದ್ದು, ನಟ ರಕ್ಷಿತ್​ ಶೆಟ್ಟಿಯೂ ಕಮೆಂಟ್​ ಮಾಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್​ ಸದ್ಯದಲ್ಲೇ ಗುಡ್​ ನ್ಯೂಸ್​ ಕೊಡಲಿದ್ದಾರಾ? ಎಂಬುದಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಶ್ರೀನಿಧಿ ಶೆಟ್ಟಿ, 'ಹಾಗೇ ಸುಮ್ಮನೆ' ಎಂದು ಕ್ಯಾಪ್ಶನ್​​ ನೀಡಿ ಚೆಂದನೆಯ ಎರಡು ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ರಕ್ಷಿತ್​ ಶೆಟ್ಟಿ, "ಆವ್​ ಶೆಟ್ರೆ ಗೊತ್ತಾಂಡ್​ (ಆಯ್ತು ಶೆಟ್ರೆ, ಗೊತ್ತಾಯ್ತು)" ಎಂದು ಕಮೆಂಟ್​ ಮಾಡಿದ್ದಾರೆ. ಇದಕ್ಕೆ ನಿಧಿ, "ಆಹಾ, ಗೊತ್ತಾಂಡಾ ಶೆಟ್ರೆ, ಏರೆಗ್ಲಾ ಪನೋಡ್ಚಿ (ಗೊತ್ತಾಯ್ತ, ಯಾರ ಹತ್ರಾನು ಹೇಳ್ಬೇಡಿ)" ಎಂದು ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ತುಳು ಸಂಭಾಷಣೆ ನೋಡಿದ ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ. ಜೊತೆಗೆ ಸೂಪರ್​ ಜೋಡಿ, ಇವರಿಬ್ಬರು ಶೀಘ್ರದಲ್ಲೇ ಗುಡ್​ನ್ಯೂಸ್​ ಕೊಡಲಿದ್ದಾರಾ? ಏನ್​ ನಡೀತಿದೆ ಶೆಟ್ರೇ? ಎಂದೆಲ್ಲಾ ಬಗೆ ಬಗೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ:ನಾಳೆ ತೆರೆ ಮೇಲೆ ಅಬ್ಬರಿಸಲಿರುವ 'ಗುರುದೇವ್​ ಹೊಯ್ಸಳ'; ರಾಣಿ ಜೊತೆ ಲೈವ್​ ಬಂದ ಧನಂಜಯ್​

ಅಲ್ಲದೇ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿದ್ರೇ ಚೆನ್ನಾಗಿರುತ್ತೇ ಅಂತ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಜಿಎಫ್​ ಬಳಿಕ ಶ್ರೀನಿಧಿ ಯಾವುದೇ ಕನ್ನಡ ಚಿತ್ರವನ್ನು ಒಪ್ಪಿಕೊಂಡಿಲ್ಲ. ಅಷ್ಟು ಮಾತ್ರವಲ್ಲದೇ ಶ್ರೀನಿಧಿ ರಕ್ಷಿತ್​ ಜೊತೆ ಅಭಿನಯಿಸಿದ್ರೂ ಅಚ್ಚರಿ ಪಡುವಂತದ್ದೇನಿಲ್ಲ. ಹೀಗಿರುವಾಗ ನಟಿ ಸಿಂಪಲ್​ ಸ್ಟಾರ್​ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರಾ? ಎಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಕಾಡುತ್ತಿದೆ.

ಇದನ್ನೂ ಓದಿ:ಜನ್ಮದಿನಕ್ಕೆ ಒಂದು ವಾರವಿರುವಾಗಲೇ ರಶ್ಮಿಕಾ ಮಂದಣ್ಣಗೆ ಸರ್​ಪ್ರೈಸ್ ಕೊಟ್ಟ ಫ್ಯಾನ್ಸ್!

ಇನ್ನೂ ಒಳ್ಳೊಳ್ಳೆ ಕಂಟೆಂಟ್​ ಇರುವ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ರಕ್ಷಿತ್​ ಶೆಟ್ಟಿ ಚಾರ್ಲಿ 777 ಚಿತ್ರದ ಮೂಲಕ ಸೂಪರ್​ ಹಿಟ್​ ಆಗಿದ್ದಾರೆ. ಸದ್ಯ ಇವರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್​ ಮುಗಿಸಿದ್ದಾರೆ. ಇದೀಗ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ರಿಚರ್ಡ್​ ಆಂಟನಿ ಸಿನಿಮಾಗೆ ತಯಾರಿ ನಡೆಸುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ:ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೇಲರ್​ ರಿಲೀಸ್​: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ

ABOUT THE AUTHOR

...view details