ಕರ್ನಾಟಕ

karnataka

ETV Bharat / entertainment

ವಿಡಿಯೋ: ಮೂಗುತಿ ಚುಚ್ಚಿಸಿಕೊಳ್ಳಲು ರಾಜ್ ಬಿ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ - 'ಟೋಬಿ' ಹಿಂದಿದೆ ನೋವಿನ ಕತೆ! - Raj B Shetty toby movie

ಟೋಬಿ ಸಿನಿಮಾಗಾಗಿ ನಟ ರಾಜ್ ಬಿ ಶೆಟ್ಟಿ ಹಗಲಿರುಳು ದುಡಿದಿದ್ದಾರೆ. ಪಾತ್ರ ಚೆನ್ನಾಗಿ ಮೂಡಿಬರಲೆಂದು, ಪಾತ್ರದೊಳಗೆ ಸಂಪೂರ್ಣ ತಲ್ಲೀನರಾಗಬೇಕೆಂಬ ನಿಟ್ಟಿನಲ್ಲಿ ರಾಜ್ ಬಿ ಶೆಟ್ಟಿ ಅವರು ನಿಜವಾಗಿಯೂ ಮೂಗುತಿ ಚುಚ್ಚಿಸಿಕೊಂಡಿದ್ದಾರೆ.

Raj B Shetty got his nose pierced
ಮೂಗುತಿ ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ

By

Published : Jul 14, 2023, 11:19 AM IST

ಮೂಗುತಿ ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ರಾಜ್ ಬಿ ಶೆಟ್ಟಿ. ಗರುಡ ಗಮನ ವೃಷಭವಾಹನ ಚಿತ್ರದ ಬಳಿಕ ರಾಜ್ ಬಿ ಶೆಟ್ಟಿ ಕಾರವಾರದ ವಿಲಕ್ಷಣ ವ್ಯಕ್ತಿ 'ಟೋಬಿ'ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಸಿನಿಮಾದ ಫಸ್ಟ್ ಲುಕ್ ಹಾಗೂ ಟೀಸರ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಅದರಲ್ಲಿ ಮೂಗುತಿ ತೊಟ್ಟಿರುವ ಕುರಿಯ ಜೊತೆಗೆ ತಾನೂ ಮೂಗುತಿ ತೊಟ್ಟು ರಕ್ತ ಸಿಕ್ತವಾದ ನೋಟದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ.

ನಟ ರಾಜ್ ಬಿ ಶೆಟ್ಟಿ ತಾವು ನಟಿಸುವ ಒಂದೊಂದು ಪಾತ್ರದಲ್ಲೂ ವಿಶೇಷತೆಯನ್ನು ಬಯಸುತ್ತಾರೆ. ಹಾಗೆಯೇ ತಮ್ಮ ಮುಂದಿನ ಟೋಬಿ ಸಿನಿಮಾದಲ್ಲಿ ಮೂಗುತಿ ಧರಿಸಿದ್ದು, ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಹೌದು, ಟೋಬಿ ಸಿನಿಮಾದ ‌ಪಾತ್ರಕ್ಕಾಗಿ ರಾಜ್ ಬಿ ಶೆಟ್ಟಿ ನಿಜವಾಗಿಯೂ ಮೂಗು ಚುಚ್ಚಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಮೂಗತಿ ಚುಚ್ಚಿಸಿಕೊಂಡಿರುವ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಮೂಗುತಿ ಚುಚ್ಚಿಸಿಕೊಂಡಿರೋ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ಮೂಗುತಿ ದೃಶ್ಯಕ್ಕಾಗಿ ನಾನು ಮೂಗು ಚುಚ್ಚಿಸಿಕೊಂಡೆ. ಟೋಬಿ ಪಾತ್ರ ಅನುಭವಿಸುವ ಆ ನೋವಿನ ಅನುಭವ ನನಗೂ ಸ್ವಲ್ಪ ಆಗಲಿ ಎಂಬ ಕಾರಣಕ್ಕೆ ನಾನು ಮೂಗು ಚುಚ್ಚಿಸಿಕೊಂಡೆ. ಹುಚ್ಚು ಎನಿಸಬಹುದು, ಆದರೆ ಸಿನಿಮಾಗಳಿಗೆ ಒಂದು ಹುಚ್ಚು, ಸ್ವಲ್ಪ ಹಠ ಇದ್ದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಮೂಗುತಿ ಒಂದು ಸ್ಟೈಲ್ ಎಲಿಮೆಂಟ್ ಅಲ್ಲ, ಆ ಮೂಗುತಿ ಹಿಂದೆ ಒಂದು ಕಥೆ ಇದೆ. ಒಂದು ನೋವಿನ ಕಥೆ ಇದೆ. ಒಬ್ಬ ಸಾಮಾನ್ಯ ಎಲ್ಲವನ್ನೂ ಕಳೆದುಕೊಂಡವನು, ''ಇಲ್ಲ ನಾನು ಬಿಡಲ್ಲ'' ಎಂದು ನಿರ್ಧರಿಸಿ ಬರುತ್ತಾನೆ. ಆ ಹಂತದಲ್ಲಿ ಅವನು ಮಾರಿ ಆಗುತ್ತಾನೆ, ಆಗ ಆತ ಮೂಗುತಿ ಏಕೆ ಧರಿಸುತ್ತಾನೆ? ಎಂಬುದು 'ಟೋಬಿ ಚಿತ್ರದ ಕಥೆ' ಎಂದು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಟೋಬಿ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಜೊತೆಗೆ ಸಂಯುಕ್ತ ಹೊರನಾಡು ಹಾಗೂ ಚೈತ್ರಾ ಆಚಾರ್ ಸೇರಿ ಇಬ್ಬರು ನಾಯಕಿಯರು ಜೋಡಿಯಾಗಿದ್ದಾರೆ. ಇವರ‌ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಶ್ರೀಕಾಂತ್ ಸೇರಿದಂತೆ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಮೊಮ್ಮಗಳಿಗೆ ಸ್ಪೆಷಲ್​ ರೂಂ... ಫಾರೆಸ್ಟ್ ಥೀಮ್​ನೊಂದಿಗೆ ರೆಡಿಯಾಯ್ತು ರಾಮ್ ಚರಣ್ ಪುತ್ರಿಯ ಕೊಠಡಿ!

ಟೋಬಿ ಸಿನಿಮಾವನ್ನು ಬಾಸಿಲ್ ನಿರ್ದೇಶನ ಮಾಡಿದ್ದು, ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ''ಮಾರಿ ಮಾರಿ ..ಮಾರಿಗೆ ದಾರಿ'' ಎಂಬ ಅಡಿಬರಹ ಇದೆ. ರಾಜ್ ಬಿ ಶೆಟ್ಟಿ ಅವರ ಈ ಹಿಂದಿನ ಚಿತ್ರಗಳಿಗಿಂತ ಅಧಿಕ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. 'ಟೋಬಿ' ಬಿಗ್ ಬಜೆಟ್ ಸಿನಿಮಾ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಟೋಬಿ ನಿರ್ಮಾಣ ಆಗಿದೆ. ‌ಈ‌ ಸಿನಿಮಾವನ್ನು ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ವಿತರಣೆ ಮಾಡುತ್ತಿದ್ದು, ಆಗಸ್ಟ್​ನಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ:ಮಹಾರಾಷ್ಟ್ರ, ಆಂಧ್ರದಂತೆ ಸಿನಿಮಾ​ ಟಿಕೆಟ್ ಬೆಲೆ ಕಡಿಮೆ ಮಾಡಿ: ಹಿರಿಯ ನಟ ಅಶೋಕ್

ABOUT THE AUTHOR

...view details