ಕರ್ನಾಟಕ

karnataka

ETV Bharat / entertainment

ಪೃಥ್ವಿ ಅಂಬರ್ ನಟನೆಯ 'ದೂರದರ್ಶನ' ಸಿನಿಮಾದ ಫಸ್ಟ್ ಲುಕ್ ರಿವೀಲ್ - ಪೃಥ್ವಿ ಅಂಬರ್ ಹೊಸ ಚಿತ್ರ

ಪೃಥ್ವಿ ಅಂಬಾರ್ ನಟನೆಯ 'ದೂರದರ್ಶನ' ಚಿತ್ರದ ಫಸ್ಟ್ ಪೋಸ್ಟರ್ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಜ್ಜಾಗಿದೆ.

Doordarshana film
ದೂರದರ್ಶನ

By

Published : Jul 22, 2022, 7:48 AM IST

'ದಿಯಾ', 'ಬೈರಾಗಿ' ಹಾಗು 'ಶುಗರ್ ಲೆಸ್' ಸಿನಿಮಾಗಳ ಯಶಸ್ಸಿನ ಬಳಿಕ ಪೃಥ್ವಿ ಅಂಬರ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ವಿಭಿನ್ನ ಕಂಟೆಂಟ್ ಮೂಲಕ ಟಾಕ್ ಕ್ರಿಯೇಟ್ ಮಾಡಿದ್ದ 'ದೂರದರ್ಶನ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಹಳ್ಳಿ ಬ್ಯಾಕ್ ಡ್ರಾಪ್​ನಲ್ಲಿ ಮೂಡಿ ಬಂದಿರುವ ಪೋಸ್ಟರ್​ನಲ್ಲಿ ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಆಯಾನ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

'ದೂರದರ್ಶನ' ಚಿತ್ರತಂಡ

ಸಿನಿಮಾ ಕುರಿತು ಮಾತನಾಡಿದ ಪೃಥ್ವಿ ಅಂಬರ್ , ಈ ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 88ರಲ್ಲಿ. ನನ್ನ ಪೀಳಿಕೆಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಸರ್ ಕಥೆ ಹೇಳಿದಾಗ ನಮ್ಮೂರ ಕಥೆ ಕೇಳಿದ ಹಾಗೇ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ ಎಂದರು.

'ದೂರದರ್ಶನ' ಸಿನಿಮಾದ ಫಸ್ಟ್ ಲುಕ್

ಸಿನಿಮಾ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, 1980ರ ಕಾಲಘಟ್ಟದಲ್ಲಿ ನಡೆಯುವ ವಿಷಯ. ನಾವು ನಮ್ಮ ಹಿರಿಯರ ಜೊತೆ ಅನುಭವಿಸಿ, ಕಳೆದು ಹೋದ, ನಾವು ನೋಡಿರುವ, ಕೇಳಿರುವ ಮಾಹಿತಿ ಕಲೆ ಹಾಕಿ ಕಥೆಯನ್ನು ಕಟ್ಟಿಕೊಡಲಾಗಿದೆ. ಒಂದು ಟಿವಿ ಸುತ್ತ ಕಥೆ ನಡೆಯುತ್ತದೆ. ಪೃಥ್ವಿ, ಉಗ್ರಂ ಮಂಜು ಹೀಗೆ ಪ್ರತಿಯೊಬ್ಬರನ್ನು ನೀವು ಬೇರೆ ರೀತಿ ನೋಡಬಹುದು. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂ ದಾಟಿಯಲ್ಲಿ ಕಥೆ ಕಟ್ಟಿಕೊಡಲಾಗಿದೆ ಎಂದರು.

ಅಯಾನಾ ಜೊತೆ ನಟ ಪೃಥ್ವಿ ಅಂಬರ್

'ದೂರದರ್ಶನ' ಸಿನಿಮಾದಲ್ಲಿ ಪೃಥ್ವಿ ಅಂಬರ್‌ ನಾಯಕನಾಗಿ ನಟಿಸಿದ್ದು, ನಟಿಯಾಗಿ ಅಯಾನಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

'ದೂರದರ್ಶನ' ಚಿತ್ರತಂಡ

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ಈ ಚಿತ್ರ ಒಳಗೊಂಡಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾಗೆ ರಾಜೇಶ್ ಭಟ್ ಬಂಡವಾಳ ಹೂಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಉಗ್ರಂ ಮಂಜು ಜವಾಬ್ದಾರಿ ಹೊತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್. ರಾವ್ ಸಂಕಲನ, ನಂದೀಶ್ ಟಿಜಿ ಸಂಭಾಷಣೆ ಸಿನಿಮಾಕ್ಕಿದೆ.

ಇದನ್ನೂ ಓದಿ:ನಯನತಾರಾ - ವಿಘ್ನೇಶ್ ಲವ್ ಸ್ಟೋರಿ ಕುರಿತ ಸಾಕ್ಷ್ಯಚಿತ್ರ: ಶೀಘ್ರದಲ್ಲೇ ನೆಟ್‌ಫ್ಲಿಕ್ಸ್​ನಲ್ಲಿ ಬಿಡುಗಡೆ

ABOUT THE AUTHOR

...view details