ಕರ್ನಾಟಕ

karnataka

ETV Bharat / entertainment

ಕೊಲೆಯಾದ ಯುವನಟ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ - Prajwal Devaraj visits Satish Vajra house

ಇತ್ತೀಚೆಗೆ ಕೊಲೆಯಾದ ಯುವನಟ ಸತೀಶ್ ವಜ್ರ ಮನೆಗೆ ನಟ ಪ್ರಜ್ವಲ್ ದೇವರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Prajwal Devaraj visits actor Satish Vajra house who murdered recently
ಕೊಲೆಯಾದ ಯುವನಟ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ

By

Published : Sep 15, 2022, 7:34 PM IST

ಸ್ಯಾಂಡಲ್​ವುಡ್​ನಲ್ಲಿ ಯುವ ನಟನಾಗಿ ಗುರುತಿಸಿಕೊಂಡಿದ್ದ ಸತೀಶ್ ವಜ್ರ ಜೂನ್​ ತಿಂಗಳಲ್ಲಿ ರಾತ್ರೋ ರಾತ್ರಿ ಬರ್ಬರವಾಗಿ ಭಾಮೈದನಿಂದಲೇ ಕೊಲೆಯಾಗಿದ್ದರು. ಈ ಘಟನೆ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿತ್ತು. ಇದೀಗ ನಟ ಪ್ರಜ್ವಲ್ ದೇವರಾಜ್ ಅವರು ಸತೀಶ್ ವಜ್ರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಪ್ರಜ್ವಲ್ ದೇವರಾಜ್ - ಸತೀಶ್ ವಜ್ರ

ಪ್ರಜ್ವಲ್ ದೇವರಾಜ್ ಅವರ ಗೆಳೆಯ ಸಿನಿಮಾದಿಂದ ಸತೀಶ್ ವಜ್ರ ಅವರು ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ. ಈ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಮಂಡ್ಯದ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದಲ್ಲಿರೋ ಸತೀಶ್ ವಜ್ರ ಅವರ ತಂದೆ ಶ್ರೀನಿವಾಸ್ ಹಾಗು ತಾಯಿ ಸರೋಜಮ್ಮ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದಾರೆ.

ಕೊಲೆಯಾದ ಯುವನಟ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ

ಈ ವೇಳೆ ತಮ್ಮ ಕೈಲಾದಷ್ಟು ಹಣದ ಸಹಾಯ ಮಾಡುವುದಾಗಿ ಪ್ರಜ್ವಲ್ ದೇವರಾಜ್ ಭರವಸೆ ನೀಡಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

ಇದನ್ನೂ ಓದಿ:ಕನ್ನಡ ಓಟಿಟಿ ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ

ಚಿತ್ರರಂಗದಲ್ಲಿ ಸಿನಿಮಾ ನಟನಾಗಬೇಕು ಅಂದುಕೊಂಡಿದ್ದ ಸತೀಶ್ ವಜ್ರ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡಿದ್ದರು.

ABOUT THE AUTHOR

...view details