ಕರ್ನಾಟಕ

karnataka

ETV Bharat / entertainment

ಮಾಡೆಲ್ ಸೋನಾ ಬೇಬಿ ಜೊತೆ ಸಖತ್ ಹೆಜ್ಜೆ ಹಾಕಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ - ಗಣ ಚಿತ್ರ

Actor Prajwal devaraj movie song: ''ಮೈ ನೇಮ್ ಇಸ್ ಸೋನಾ ಬೇಬಿ ಬೇಬಿ.. ಕಣ್ಣಾಮುಚ್ಚಾಲೆ ನನ್ನ ಹಾಬಿ" ಎಂಬ ಗಣ ಚಿತ್ರದ ಮನಮೋಹಕ ಹಾಡಿಗೆ ಮಾಡೆಲ್ ಸೋನಾ ಬೇಬಿ ಜೊತೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಖತ್ ಹೆಜ್ಜೆ ಹಾಕಿದರು.

Etv Bharat
Etv Bharat

By ETV Bharat Karnataka Team

Published : Nov 25, 2023, 12:34 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡ ನಟ ಪ್ರಜ್ವಲ್ ದೇವರಾಜ್, ಪ್ರಸ್ತುತ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಫುಲ್​ ಬ್ಯುಸಿಯಾಗಿದ್ದಾರೆ. ಗಣ ಚಿತ್ರದ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟು ಹಾಕಿರೋ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗಣನಾಗಿ‌ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಈ ಚಿತ್ರದ ಅಡ್ಡದಿಂದ ಮತ್ತೊಂದು ಸ್ಪೆಷಲ್ ಹಾಡುವೊಂದು ಅನಾವರಣಗೊಂಡಿದೆ.

ಮಾಡೆಲ್ ಸೋನಾ ಬೇಬಿ ಜೊತೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಕನ್ನಡದ ಬಹು ಬೇಡಿಕೆಯ ಗೀತೆ ರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ "ಮೈ ನೇಮ್ ಇಸ್ ಸೋನಾ ಬೇಬಿ ಬೇಬಿ.. ಕಣ್ಣಾಮುಚ್ಚಾಲೆ ನನ್ನ ಹಾಬಿ" ಎಂಬ ಮನಮೋಹಕ ಹಾಡು "ಸರಿಗಮಪ" ಆಡಿಯೋ ಸಂಸ್ಥೆ ಮೂಲಕ ಬಿಡುಗಡೆ ಮಾಡಲಾಗಿದೆ. ಮುರಳಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ‌ ಮಾಡಿದ್ದಾರೆ. ಈ ಮಾಸ್ ಐಟಂ ಹಾಡಿಗೆ ಪ್ರಜ್ವಲ್ ದೇವರಾಜ್, ನಮೃತಾ ಮಲ್ಲ ಹಾಗೂ ರವಿಕಾಳೆ ಹೆಜ್ಜೆ ಹಾಕಿದ್ದಾರೆ. "ಕ್ರಾಂತಿ" ಸಿನಿಮಾದ "ಟೇಕ್ ಇಟ್ ಪುಷ್ಪವತಿ" ಹಾಡು ಸೇರಿದಂತೆ ಹಲವು ಯಶಸ್ವಿ ಗೀತೆಗಳನ್ನು ಹಾಡಿರುವ ಐಶ್ವರ್ಯ ರಂಗರಾಜನ್ ಈ ಹಾಡನ್ನು ಹಾಡಿದ್ದಾರೆ. "ಸೋನಾ ಬೇಬಿ" ಹಾಡು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

ಗಣ ಚಿತ್ರದ ಸಾಂಗ್

ಶೀ ಈಸ್​ ಇನ್​ ಲವ್​ ಹಾಡಿಗೆ ಜನರು ಫಿದಾ:ಬಹುನಿರೀಕ್ಷಿತ 'ಗಣ' ಚಿತ್ರದ ರೊಮ್ಯಾಂಟಿಕ್​ ಹಾಡೊಂದು ಇತ್ತೀಚೆಗೆ ರಿಲೀಸ್​ ಆಗಿತ್ತು. 'ಶೀ ಈಸ್ ಇನ್​ ಲವ್​' ಎಂಬ ಸುಮಧುರ ಸಾಂಗ್​ಗೆ ಸಿನಿಪ್ರಿಯರು ಫುಲ್​ ಫಿದಾ ಆಗಿದ್ದಾರೆ. ಈ ಸಾಂಗ್​ ಅನ್ನು ಗೀತರಚನೆಕಾರ ಪ್ರಮೋದ್ ಮರವಂತೆ ಅವರು ಬರೆದಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನೀಡಿದ್ದ ಹಾಡಿಗೆ ಗಾಯಕ ವಿಜಯ್​ ಪ್ರಕಾಶ್ ಕಂಠದಿಂದ ಮೂಡಿದೆ. ಮುರಳಿ ಮಾಸ್ಟರ್​ ನೃತ್ಯ ಸಂಯೋಜನೆ ಇದೆ. ನಟ ಪ್ರಜ್ವಲ್ ದೇವರಾಜ್​ ಮತ್ತು ಯಶ ಶಿವಕುಮಾರ್​ ಸ್ಟೆಪ್​ ಹಾಕಿದ್ದಾರೆ. ಹಾಡು ತುಂಬಾ ಸುಂದರ, ಮಧುರವಾಗಿದೆ.

ಮಾಡೆಲ್ ಸೋನಾ ಬೇಬಿ ಜೊತೆ ಸಖತ್ ಹೆಜ್ಜೆ ಹಾಕಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ರಮೇಶ್ ಭಟ್ ಸೇರಿದಂತೆ ದೊಡ್ಡ ತಾರಾ ಬಗಳ ಈ ಚಿತ್ರದಲ್ಲಿದೆ.

ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶ ಮಾಡಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಎ ಕಲಾ ನಿರ್ದೇಶನ ಮತ್ತು ಡಿ.ಜೆ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರಸ್ತುತ ಹಾಡು ಮತ್ತು ಟೀಸರ್​ ನಿಂದಲೇ ಸದ್ದು ಮಾಡುತ್ತಿರುವ ಗಣ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ:'ಎಕ್ಸ್‌ ಅಂಡ್‌ ವೈ‌' ಹಿಂದೆ ಬಿದ್ದ ರಾಮಾ ರಾಮಾ ರೇ ನಿರ್ದೇಶಕ ಸತ್ಯ ಪ್ರಕಾಶ್‌

ಒನ್ ಅಂಡ್ ಹಾಫ್​: ಶ್ರೇಯಸ್ ಚಿಂಗಾ ಜೊತೆ ತೆರೆ ಹಂಚಿಕೊಂಡ ಮಾನ್ವಿತಾ ಹರೀಶ್

ABOUT THE AUTHOR

...view details