ಕರ್ನಾಟಕ

karnataka

ETV Bharat / entertainment

ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್​ಗೆ ಮರಳಿದ ಸಲಾರ್ ನಟ ಪ್ರಭಾಸ್ - ಸಲಾರ್ ಪ್ರಚಾರ

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಇಟಲಿಯಿಂದ ಹೈದರಾಬಾದ್​ಗೆ ಮರಳಿದ್ದು, ಏರ್​ಪೋರ್ಟ್ ವಿಡಿಯೋ ವೈರಲ್​ ಆಗುತ್ತಿದೆ.

Prabhas returns to Hyderabad
ಇಟಲಿಯಿಂದ ಹೈದರಾಬಾದ್​ಗೆ ಮರಳಿದ ಪ್ರಭಾಸ್

By ETV Bharat Karnataka Team

Published : Nov 8, 2023, 7:02 PM IST

ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರು ತಮ್ಮ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಸಲಾರ್' ಮೂಲಕ ಚಿತ್ರಮಂದಿರದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಪ್ರೇಕ್ಷಕರು ಸಹ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಇಂದು ನಾಯಕ ನಟ ಮತ್ತು ಅವರ ತಂಡ ಇಟಲಿಯಿಂದ ಹಿಂತಿರುಗಿದ್ದಾರೆ.

ತಾಯ್ನಾಡಿಗೆ ಮರಳಿದ ಪ್ಯಾನ್​ ಇಂಡಿಯಾ ಸ್ಟಾರ್:ಇಟಲಿಯಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆಗೆ ಸೂಕ್ತ ಚಿಕಿತ್ಸೆ, ಸಮಯ ತೆಗೆದುಕೊಂಡರು. ಅಂತಿಮವಾಗಿ ಇಂದು ಹೈದರಾಬಾದ್​ ತಲುಪಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಶಾಂತ್ ನೀಲ್ ಜೊತೆ ಸಲಾರ್‌ ಪ್ರಮೋಶನ್​: ಕೆಲ ವಾರಗಳ ಹಿಂದೆ ದಕ್ಷಿಣ ಚಿತ್ರರಂಗದ ನಟ ಪ್ರಭಾಸ್ ತಮ್ಮ ತಂಡದೊಂದಿಗೆ ಇಟಲಿಗೆ ಹಾರಿದ್ದರು. ಓಂ ರಾವುತ್ ನಿರ್ದೇಶನದ ಆದಿಪುರುಷ್​ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿ, ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಹಿನ್ನೆಡೆ ಕಂಡಿತು. ವರದಿಗಳ ಪ್ರಕಾರ, ಪ್ರಭಾಸ್ ಪ್ರಸ್ತುತ ಸಲಾರ್​ ಪ್ರಮೋಶನ್​ಗೆ ಸಜ್ಜಾಗುತ್ತಿದ್ದಾರೆ. ಕೆಜಿಎಫ್‌ನ ಖ್ಯಾತಿಯ ಪ್ರಶಾಂತ್ ನೀಲ್ ಜೊತೆ ಸಲಾರ್‌ನ ಪ್ರಚಾರ ಆರಂಭಿಸಲಿದ್ದಾರೆ ಎಂಬ ಮಾಹಿತಿ ಇದೆ. ಕಂಪ್ಲೀಟ್​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಸಲಾರ್​ ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇಟಲಿಯಲ್ಲಿ ಮೊಣಕಾಲಿನ ಸರ್ಜರಿಗೊಳಗಾಗಿದ್ದ ನಟ:ಇಂದು ಬಾಹುಬಲಿ ಸ್ಟಾರ್​ ಪ್ರಭಾಸ್ ತಮ್ಮ ತಂಡದೊಂದಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿವೆ. ಸಾಹೋ ಚಿತ್ರೀಕರಣದ ವೇಳೆ ಮೊಣಕಾಲಿಗೆ ಉಂಟಾಗಿದ್ದ ನೋವಿಗೆ (ಗಾಯಕ್ಕೆ) ಅವರು ಇಟಲಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲ ದಿನಗಳ ಕಾಲ ಇಟಲಿಯಲ್ಲೇ ಉಳಿಯಲು ನಿರ್ಧರಿಸಿದ್ದರು. ಇಂದು ಹೈದರಾಬಾದ್​ಗೆ ಮರಳಿದ್ದಾರೆ.

ಇದನ್ನೂ ಓದಿ:'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ

ಪ್ರಭಾಸ್​ ಮುಂದಿನ ಸಿನಿಮಾಗಳು:ನಟನ ಕೈಯಲ್ಲಿರೋ ಸಿನಿಮಾಗಳನ್ನು ಗಮನಿಸೋದಾದರೆ, ಪ್ರಭಾಸ್ ಆ್ಯಕ್ಷನ್ ಡ್ರಾಮಾ ಸಲಾರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್‌ ನಟನೆಯ ಡಂಕಿ ಸಿನಿಮಾ ಕೂಡ ಡಿಸೆಂಬರ್ 22 ರಂದು ತೆರೆಗಪ್ಪಳಿಸಲಿದ್ದು, ಬಾಕ್ಸ್ ಆಫೀಸ್ ಪೈಪೋಟಿ ಏರ್ಪಡಲಿದೆ. ನಿರ್ದೇಶಕ ಮಾರುತಿ ಅವರ ರಾಜಾ ಡಿಲಕ್ಸ್, ನಾಗ್ ಅಶ್ವಿನ್ ಅವರ ಕಲ್ಕಿ 2898 ಎಡಿ, ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾದಲ್ಲಿಯೂ ನಟ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಡೀಪ್‌ಫೇಕ್ ವಿಡಿಯೋ ವೈರಲ್ ಬಳಿಕ ಮುಂಬೈನಲ್ಲಿ ರಣ್​​ಬೀರ್​ ಜೊತೆ ಕಾಣಿಸಿಕೊಂಡ ರಶ್ಮಿಕಾ

ABOUT THE AUTHOR

...view details