ಮಹಾಬಲಿಪುರಂ(ತಮಿಳುನಾಡು):ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದ ಬಹುಭಾಷಾ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದಿನಿಂದ ಹೊಸ ಜೀವನ ಆರಂಭಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುಂನಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಜೋಡಿ ಸಪ್ತಪದಿ ತುಳಿದರು.
ಇದನ್ನೂ ಓದಿ:'ಗೋದ್ರಾ' ಟೈಟಲ್ ಕೈ ಬಿಟ್ಟು 'ಡಿಯರ್ ವಿಕ್ರಂ' ಆದ ನೀನಾಸಂ ಸತೀಶ್
ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಪ್ರಮುಖವಾಗಿ ಬಾಲಿವುಡ್ ನಟ ಶಾರೂಖ್ ಖಾನ್ ಸೇರಿದಂತೆ ರಜನಿಕಾಂತ್, ವಿಜಯ್ ಸೇತುಪತಿ, ಸೂರ್ಯ, ಕಾರ್ತಿ, ಶರತ್ ಕುಮಾರ್, ನಿರ್ದೇಶಕರಾದ ಮೋಹನ್ ರಾಜ, ರವಿಕುಮಾರ್ ಸೇರಿದಂತೆ ಅನೇಕರು ಆಗಮಿಸಿದ್ದರು.
ನಯನತಾರಾ ತಮಿಳು, ತೆಲುಗು, ಕನ್ನಡ ಸೇರಿದಂತೆ ಅನೇಕ ಬಹುಭಾಷಾ ಚಿತ್ರಗಳಲ್ಲಿ ನಟಿಸಿ ಮಿಂಚು ಹರಿಸಿದ್ದಾರೆ. ಸದ್ಯ ನಯನತಾರಾ ಹಾಗೂ ಶಾರುಖ್ ಖಾನ್ ಹಿಂದಿಯ 'ಜವಾನ್' ಚಿತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ನಡೆಯುತ್ತಿದೆ. ಚಿತ್ರ 2023ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
2015ರಲ್ಲಿ ವಿಜಯ್ ಸೇತುಪತಿ ನಟನೆಯ 'ನಾನುಂ ರೌಡಿ ದಾನ್' ಎಂಬ ಚಿತ್ರವನ್ನು ವಿಘ್ನೇಶ್ ನಿರ್ದೇಶಿಸಿದ್ದು, ನಯನತಾರಾ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಜೂನ್ 11ರಂದು ಈ ಜೋಡಿಯ ಆರತಕ್ಷತೆ ನಡೆಯಲಿದ್ದು, ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಮದುವೆ ಕಾರ್ಯಕ್ರಮ ಒಟಿಟಿಯಲ್ಲಿ ಪ್ರಸಾರವಾಗಲಿದೆ.