ಕರ್ನಾಟಕ

karnataka

ETV Bharat / entertainment

'ಅವಳಾಗಿ' ನವಾಜುದ್ದೀನ್ ಸಿದ್ದಿಕಿ.. ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬಿದ ನಟ - ನವಾಜುದ್ದೀನ್ ಸಿದ್ದಿಕಿ ತೃತೀಯಲಿಂಗಿ ಪಾತ್ರ

ಹಡ್ಡಿ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಬ್ಯುಸಿಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

Actor Nawazuddin Siddiqui transformation for Haddi movie
ಹಡ್ಡಿ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಬ್ಯುಸಿ

By

Published : Dec 13, 2022, 1:31 PM IST

ನವಾಜುದ್ದೀನ್ ಸಿದ್ದಿಕಿ ಕೆಲಸ ಮತ್ತು ಪಾತ್ರಕ್ಕೆ ತಮ್ಮ ನಟನೆಯ ಸಮರ್ಪಣೆಯಿಂದ ಪ್ರೇಕ್ಷಕರನ್ನು ತಲುಪಿದ್ದಾರೆ. ಭರವಸೆಯ ನಟನಾಗಿ ಬಾಲಿವುಡ್​​ನ ಟಾಪ್​ ನಟರ ಪಟ್ಟಿಯಲ್ಲಿದ್ದಾರೆ. ಸದ್ಯ ಹಡ್ಡಿ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಬ್ಯುಸಿಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ನಟ ಈ ಮೊದಲು ತಮ್ಮ ಮುಂಬರುವ ಚಲನಚಿತ್ರ 'ಹಡ್ಡಿ'ಯ ಮೋಷನ್ ಪೋಸ್ಟರ್‌ ಬಿಡುಗಡೆ ಮಾಡಿ ಸುದ್ದಿಯಾಗಿದ್ದರು. ಇದೀಗ ನವಾಜುದ್ದೀನ್ ಅವರು ತಮ್ಮನ್ನು ತಾವು 'ಅವಳಾಗಿ' ಪರಿವರ್ತಿಸುವ ಒಂದು ನೋಟವನ್ನು ಚಿತ್ರ ತಯಾರಕರು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಮೇಕ್ಅಪ್ ಮತ್ತು ಹೇರ್ ಆರ್ಟಿಸ್ಟ್‌ಗಳ ತಂಡವು ನವಾಜುದ್ದೀನ್ ಸಿದ್ದಿಕಿ ಸುತ್ತಲೂ ಕೆಲಸ ಮಾಡುತ್ತಿರುವ, ಅವರು ಶೂಟಿಂಗ್​​ಗೆ ತಯಾರಾಗುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಹಡ್ಡಿಯ ಇತ್ತೀಚಿನ ತೆರೆಮರೆಯ ವಿಡಿಯೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ, ಈ ಮೇಕ್ಅಪ್​ಗೆ 3 ಗಂಟೆ ಸಮಯ ಹಿಡಿಯುತ್ತದೆ ಎಂದು ಚಿತ್ರ ತಯಾರಕರು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ನವಾಜುದ್ದೀನ್, ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ನಟನಾಗಲು ಈ ಚಿತ್ರ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್​ಆರ್​​ಆರ್​ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ

ಅಕ್ಷತ್ ಅಜಯ್ ಶರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹಡ್ಡಿ ಸಿನಿಮಾ ಅನ್ನು ಝೀ ಸ್ಟುಡಿಯೋಸ್, ಆನಂದಿತಾ ಸ್ಟುಡಿಯೋಸ್ ನಿರ್ಮಿಸುತ್ತಿವೆ. ಈ ಚಿತ್ರವು ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. 2023ರಲ್ಲಿ ಹಡ್ಡಿ ಬಿಡುಗಡೆಯಾಗಲಿದೆ.

ABOUT THE AUTHOR

...view details