ಬೆಂಗಳೂರು :ನಿನ್ನೆ ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ಸೌತ್ ಫಿಲ್ಮ ಫೇರ್ ಅವಾರ್ಡ್ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿಗೆ ಶ್ಯಾಮ್ ಸಿಂಗ ರಾಯ್ ಸಿನಿಮಾಕ್ಕೆ ಪ್ರಶಸ್ತಿ ಸ್ವೀಕರಿಸುತ್ತಾರೆ. ನಂತರ ಅವರು ಕನ್ನಡ ಸಿನಿಮಾ ರಂಗದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ.
'ಈಗ ಇಡೀ ಭಾರತವೇ ಮಾತನಾಡಿಕೊಳ್ಳುವಂತ ಸಿನಿಮಾ ಕನ್ನಡದಲ್ಲಿ ಬರುತ್ತಿದೆ. ದಕ್ಷಿಣದಿಂದ ಇಂತಹ ಸಿನಿಮಾಗಳು ಬರುತ್ತಿದೆ ಎಂದು ಹೇಳಲು ಹೆಮ್ಮೆ ಆಗುತ್ತದೆ. ಇತ್ತೀಚೆಗೆ ತೆರೆಕಂಡ ಕಾಂತಾರ ಕೂಡ ದೊಡ್ಡ ಹಿಟ್ ಆಗಿದೆ ಅಂತ ಕೇಳಲ್ಪಟ್ಟೆ. ತುಂಬಾ ಸಂತೋಷ ಇದೆ ನಮ್ಮ ಪಕ್ಕದ ಸಿನಿಮಾ ಇಂಡಸ್ಟ್ರಿ ಅವರು ಉತ್ತಮ ಸಿನಿಮಾ ಕೊಡುತ್ತಿರುವುದರ ಬಗ್ಗೆ' ಎಂದು ನಾನಿ ಹೇಳಿದ್ದಾರೆ.