ಕರ್ನಾಟಕ

karnataka

ETV Bharat / entertainment

'ಸಮಂತಾ ಹೃದಯವಂತಳು, ಯಾವಾಗಲೂ ಸಂತೋಷವಾಗಿರಬೇಕು': ಮಾಜಿ ಪತ್ನಿ ಕೊಂಡಾಡಿದ ನಾಗ ಚೈತನ್ಯ - etv bharat kannada

ನಾಗ ಚೈತನ್ಯ 'ಕಸ್ಟಡಿ' ಸಿನಿಮಾ ಪ್ರಚಾರದ ಭಾಗವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ಜೊತೆಗಿನ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Naga Chaitanya
ನಾಗ ಚೈತನ್ಯ

By

Published : May 6, 2023, 12:33 PM IST

ಟಾಲಿವುಡ್​ ಸ್ಟಾರ್​ ನಟ ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಮಾಜಿ ಪತ್ನಿ, ನಟಿ ಸಮಂತಾ ಬಗ್ಗೆ ಅವರು ಮಾಡಿದ ಕಮೆಂಟ್​ ಸದ್ಯ ಕುತೂಹಲ ಮೂಡಿಸಿದೆ. ಸಮಂತಾ ಹೃದಯವಂತಳು, ಜೀವನದಲ್ಲಿ ಸದಾ ಸುಖವಾಗಿರಲು ಬಯಸುತ್ತಾಳೆ ಎಂದು ಅವರು ಹೇಳಿದ್ದಾರೆ. ನಟ ತಮ್ಮ ಮುಂದಿನ ಚಿತ್ರ 'ಕಸ್ಟಡಿ' ಪ್ರಚಾರದ ಭಾಗವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ತಾವು ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ.

"ನಾವು ಎರಡು ವರ್ಷಗಳಿಂದ ಬೇರ್ಪಟ್ಟಿದ್ದೇವೆ, ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ನ್ಯಾಯಾಲಯ ನಮಗೆ ವಿಚ್ಛೇದನವನ್ನೂ ನೀಡಿದೆ. ಇದೀಗ ನಾವು ನಮ್ಮ ಜೀವನದಲ್ಲಿ ಮುನ್ನಡೆಯುತ್ತಿದ್ದೇವೆ. ನಾನು ಜೀವನದ ಪ್ರತಿಯೊಂದು ಹಂತವನ್ನು ಗೌರವಿಸುತ್ತೇನೆ. ಸಮಂತಾ ಒಳ್ಳೆಯ ವ್ಯಕ್ತಿ. ಅವಳು ಯಾವಾಗಲೂ ಸಂತೋಷವಾಗಿರಬೇಕು. ಸೋಷಿಯಲ್ ಮೀಡಿಯಾದಲ್ಲಿ ನಮ್ಮಿಬ್ಬರ ಬಗೆಗಿನ ವದಂತಿಗಳು ಹರಡಿವೆ. ಒಬ್ಬರಿಗೊಬ್ಬರು ಗೌರವ ಇಲ್ಲ ಎಂಬ ಸುಳ್ಳು ಜನರ ಬಳಿ ಹೋಗಿದೆ. ಇದು ನನಗೆ ತುಂಬಾ ನೋವುಂಟು ಮಾಡಿದೆ" ಎಂದು ನುಡಿದಿದ್ದಾರೆ.

ಮುಂದುವರೆದು, “ಈ ಇಡೀ ಪ್ರಕರಣದಲ್ಲಿ ಮತ್ತೊಂದು ಬೇಸರದ ವಿಷಯ ಎಂದರೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯನ್ನು ಎಳೆದುಕೊಂಡು ಸುದ್ದಿ ಬರೆಯುತ್ತಿದ್ದಾರೆ. ಇದು ಆ ಮೂರನೇ ವ್ಯಕ್ತಿಗೆ ಅಗೌರವವನ್ನು ಉಂಟು ಮಾಡಿದೆ. ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವಾಗ ಅನೇಕರು ನನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಾರೆ. ಮೊದ ಮೊದಲು ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಂತಹ ಪ್ರಶ್ನೆಗಳಿಗೆ ನಾನು ಮೌನವಾಗಿರುತ್ತಿದ್ದೆ. ಆದರೂ ಇವರೆಲ್ಲರೂ ಯಾಕೆ ನನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ? ಏಕೆ ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ? ಇದೇ ನನಗೆ ಅರ್ಥವಾಗುತ್ತಿಲ್ಲ" ಎಂದು ನಟಿ ಶೋಭಿತಾ ಧೂಳಿಪಾಲ ಜೊತೆಗಿನ ವದಂತಿಯ ಬಗ್ಗೆ ಪರೋಕ್ಷವಾಗಿ ಮಾತನಾಡಿದರು.

ಇದನ್ನೂ ಓದಿ:'ಟಾರ್ಚರ್​ ಟೈಮ್​': 'ಸಿಟಾಡೆಲ್'​ ಶೂಟಿಂಗ್​ ವೇಳೆ ಸಮಂತಾ ಹೀಗಂದ್ರು!

ಬಳಿಕ ಅಕ್ಕಿನೇನಿ ನಾಯಕರ ಸರಣಿ ಸೋಲಿನ ಬಗ್ಗೆ ನಾಗ ಚೈತನ್ಯ ಪ್ರತಿಕ್ರಿಯಿಸಿದ್ದು, "ನಾವು ಯಾವಾಗಲೂ ಯಶಸ್ವಿ ಚಿತ್ರಗಳನ್ನು ಮಾಡಬೇಕೆಂದು ಬಯಸುತ್ತೇವೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳು ಯಶಸ್ವಿಯಾಗಲಿಲ್ಲ. ಮನುಷ್ಯನ ವೃತ್ತಿ ಜೀವನದಲ್ಲಿ ಏಳು ಬೀಳುಗಳು ಸಹಜ. ಅವೆಲ್ಲವನ್ನೂ ಎದುರಿಸಿ ಮುಂದೆ ಸಾಗುತ್ತಿದ್ದೇವೆ. ಶೀಘ್ರದಲ್ಲೇ ಕಸ್ಟಡಿ ಯಶಸ್ಸಿನೊಂದಿಗೆ ನಾವು ಪ್ರೇಕ್ಷಕರನ್ನು ಬಹುವಾಗಿ ರಂಜಿಸಲಿದ್ದೇವೆ. ಆ ವಿಶ್ವಾಸ ನನಗಿದೆ. ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಲು ಕಾತುರರಾಗಿದ್ದೇವೆ" ಎಂದು ಹೇಳಿದ್ದಾರೆ.

ನಾಗ ಚೈತನ್ಯ ಅಭಿನಯದ 'ಕಸ್ಟಡಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೇ 12 ರಂದು ಚಿತ್ರ ತೆರೆಗೆ ಬರಲಿದೆ. ಶುಕ್ರವಾರ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಸಿನಿ ಪ್ರೇಮಿಗಳನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಈ ಸಿನಿಮಾದಲ್ಲಿ ಚೈತನ್ಯ ಎದುರು ಕೃತಿ ಶೆಟ್ಟಿ ನಟಿಸಲಿದ್ದಾರೆ. ನಟಿ ಪ್ರಿಯಾಮಣಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೇಸ್ಟ್ರೋ ಇಳಯರಾಜ ಮತ್ತು ಅವರ ಪುತ್ರ ಯುವನ್ ಶಂಕರ್ ರಾಜಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ಅನುಷ್ಕಾ ಶರ್ಮಾ ಜೊತೆ ತೆರೆ ಹಂಚಿಕೊಳ್ಳಲಿರುವ ಸಮಂತಾ ರುತ್​ ಪ್ರಭು

ABOUT THE AUTHOR

...view details