ಕೊಚ್ಚಿ (ಕೇರಳ):ಸೌತ್ ಸಿನಿ ರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fathima Ismail) ಇಂದು ಮುಂಜಾನೆ ಮೃತಪಟ್ಟಿದ್ದಾರೆ. ತಾಯಿ ನಿಧನ ಹಿನ್ನೆಲೆ ಮಮ್ಮುಟ್ಟಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಫಾತಿಮಾ ಇಸ್ಮಾಯಿಲ್ ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ನಿಧನರಾದರು. ಮಮ್ಮುಟ್ಟಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ. ಕೊಚ್ಚಿಯ ಚೆಂಬು ಮುಸ್ಲಿಂ ಜಮಾತ್ ಮಸೀದಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಫಾತಿಮಾ ಇಸ್ಮಾಯಿಲ್:ಕಳೆದ ಕೆಲ ವರ್ಷಗಳಿಂದ ಫಾತಿಮಾ ಇಸ್ಮಾಯಿಲ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಲ್ಲಿದ್ದ ಸಂದರ್ಭವೇ ಆಸ್ಪತ್ರೆಯಲ್ಲೇ ಇಮದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮಮ್ಮುಟ್ಟಿ ಅವರ ತಾಯಿ ನಿಧನದಿಂದ ಕುಟುಂಬ, ಮಲಯಾಳಂ ಚಿತ್ರರಂಗ ದೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮಮ್ಮುಟ್ಟಿ ಭಾರತೀಯ ಚಿತ್ರರಂಗದ ಅದ್ಭುತ ನಟ. ಮಲಯಾಳಂ ಹಾಗೂ ತೆಲುಗು ಪ್ರೇಕ್ಷಕರ ಮನೆ ಮಾತು. ಹಲವು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಏಜೆಂಟ್ ಅವರ ಮುಂದಿನ ಚಿತ್ರ. ಆದರೆ, ಮಮ್ಮುಟ್ಟಿ ತಮ್ಮ ತಾಯಿಯ ಸಾವಿನ ನಂತರ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಏಜೆಂಟ್ ಚಿತ್ರದ ಪ್ರಚಾರದಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್ 28ರಂದು ತೆಲುಗು ಜೊತೆಗೆ ಮಲಯಾಳಂನಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ:ವಯೋಸಹಜ ಅನಾರೋಗ್ಯ: ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ!
ಪಮೇಲಾ ಚೋಪ್ರಾ ವಿಧಿವಶ: ಸಿನಿಮಾ ಇಂಡಸ್ಟ್ರಿ ಸದ್ಯ ಕಣ್ಣೀರಿನಲ್ಲಿದೆ. ಗುರುವಾರ ಬಾಲಿವುಡ್ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ದಿ. ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ವಿಧಿವಶರಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪಮೇಲಾ ನಿನ್ನೆ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ನಿನ್ನೆಯೇ ಅವರ ಕುಟುಂಬದ ಸದಸ್ಯರು ಮುಂಬೈನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಾವಿನ ದುಃಖ ಮಾಸುವ ಮುನ್ನವೇ ಚಿತ್ರರಂಗಕ್ಕೆ ಸಂಬಂಧಪಟ್ಟ ಮತ್ತೋರ್ವರು ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ ಫಾತಿಮಾ ಇಸ್ಮಾಯಿಲ್ ನಿಧನರಾಗಿದ್ದು, ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:100 ದೇಶಗಳಲ್ಲಿ ಸಲ್ಮಾನ್ ಸಿನಿಮಾ ರಿಲೀಸ್: 5,700ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ
ಪಮೇಲಾ ಚೋಪ್ರಾ ಅವರು ಯಶ್ ಚೋಪ್ರಾ ಪತ್ನಿಯಾಗಿ ಮಾತ್ರವಲ್ಲದೇ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಅವರು ಚಲನಚಿತ್ರ ಲೇಖಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದರು. ಪಮೇಲಾ 1970ರಲ್ಲಿ ಯಶ್ ಚೋಪ್ರಾ ಅವರನ್ನು ವಿವಾಹವಾದರು. ಪಮೇಲಾ ಚೋಪ್ರಾ ಕೊನೆಯ ಬಾರಿಗೆ 'ದಿ ರೊಮ್ಯಾಂಟಿಕ್ಸ್' ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡರು. ಅದರಲ್ಲಿ ಅವರು ತಮ್ಮ ಪತಿ ಯಶ್ ಚೋಪ್ರಾ ಮತ್ತು ಅವರ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.
ಯಶ್ ಚೋಪ್ರಾ 2012ರಲ್ಲಿ ನಿಧನರಾದರು. ಅವರಿಗೆ ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗ ಆದಿತ್ಯ ಚೋಪ್ರಾ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಕಿರಿಯ ಪುತ್ರ ಉದಯ್ ಚೋಪ್ರಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಭಾರತೀಯ ಸಿನಿ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.