ಕರ್ನಾಟಕ

karnataka

ETV Bharat / entertainment

ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ಮಹೇಶ್ ಬಾಬು: ಹ್ಯಾಂಡ್​​ಸಮ್​ ಸ್ಟಾರ್​ ಫೋಟೋಗೆ ಫ್ಯಾನ್ಸ್​ ಫಿದಾ - ಮಹೇಶ್ ಬಾಬು ಸಿನಿಮಾ

ಟಾಲಿವುಡ್​ ಸ್ಟಾರ್ ಮಹೇಶ್ ಬಾಬು ತಮ್ಮ ವರ್ಕ್​​ಔಟ್​ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Mahesh Babu workout photo
ಮಹೇಶ್ ಬಾಬು ವರ್ಕ್​​ಔಟ್​ ಫೋಟೋ

By

Published : Mar 2, 2023, 1:44 PM IST

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಟನೆ ಮಾತ್ರವಲ್ಲದೇ ಫಿಟ್​ನೆಸ್​​ಗೂ ಹೆಸರುವಾಸಿ ಇವರು. 47ರ ಹರೆಯದಲ್ಲೂ ಸದೃಢ ಮೈಕಟ್ಟು ಹೊಂದುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ. ​​

'ಆರ್ಮ್ ಡೇ': ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವರ್ಕೌಟ್ ಸೆಷನ್‌ನ ಒಂದೆರಡು ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸದೃಢ ಮೈಕಟ್ಟಿನ ಫೋಟೋ, ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ಫೋಟೋ ಹಂಚಿಕೊಂಡಿರುವ ನಟ ತಮ್ಮ ಪೋಸ್ಟ್‌ಗೆ 'ಆರ್ಮ್ ಡೇ' ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಮೊದಲು ಸಿಂಗಲ್​ ಫೋಟೋ ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಫಿಸಿಕಲ್​ ಥೆರಪಿಸ್ಟ್ ಡಾ. ಮಿನಶ್​ ಗೇಬ್ರಿಯಲ್ ಜೊತೆಗಿನ ಚಿತ್ರ ಹಂಚಿಕೊಂಡಿದ್ದಾರೆ. ​

'ಭಾರತದ ಪರಿಪೂರ್ಣ ಸೂಪರ್‌ಸ್ಟಾರ್': ನಟ ಮಹೇಶ್ ಬಾಬು ತಮ್ಮ ಮನೆಯಲ್ಲಿ ವೈಯಕ್ತಿಕ ಜಿಮ್​ ಹೊಂದಿದ್ದಾರೆ. ಫಿಸಿಕಲ್​ ಥೆರಪಿಸ್ಟ್ ಮಾರ್ಗದರ್ಶನದಲ್ಲಿ ವರ್ಕ್​​ ಔಟ್​ ಮಾಡುತ್ತಾರೆ. ಇದೀಗ ಆ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ನಟನ ಮೈಕಟ್ಟಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 'ತಾಪಮಾನ ಹೆಚ್ಚಿಸುತ್ತಿದ್ದಾರೆ', 'ಹಾಲಿವುಡ್ ರೇಂಜ್ ಲೋಡಿಂಗ್', 'ಭಾರತದ ಪರಿಪೂರ್ಣ ಸೂಪರ್‌ಸ್ಟಾರ್' ಎಂದೆಲ್ಲಾ ಸೋಶಿಯಲ್​ ಮೀಡಿಯಾ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ನಟನ ಪೋಸ್ಟ್​​ನ ಕಾಮೆಂಟ್​ ವಿಭಾಗ ಫೈಯರ್​​, ಹಾರ್ಟ್ ಎಮೋಜಿಗಳಿಂದ ತುಂಬಿದೆ.

ಮಹೇಶ್ ಬಾಬು ವರ್ಕ್​​ಔಟ್​ ಫೋಟೋ ವೈರಲ್​: ಚಿತ್ರಗಳಲ್ಲಿ, ಟಾಲಿವುಡ್​ ಸ್ಟಾರ್​​ ಬೂದು ಬಣ್ಣದ ಶಾರ್ಟ್ಸ್‌, ನೀಲಿ ಸ್ಲೀವ್​​ಲೆಸ್​​ ಶರ್ಟ್ ಧರಿಸಿದ್ದಾರೆ. ಮರೂನ್ ಶೂ ಧರಿಸುವ ಮೂಲಕ ತಮ್ಮ ವರ್ಕ್​ ಔಟ್​ ಲುಕ್​ ಅನ್ನು ಪರಿಪೂರ್ಣಗೊಳಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

12 ವರ್ಷಗಳ ನಂತರ ದಕ್ಷಿಣದ ಮೆಗಾಸ್ಟಾರ್ ಮಹೇಶ್ ಬಾಬು ಅವರು ನಿರ್ದೇಶಕ ತ್ರಿವಿಕ್ರಮ್ ಅವರನ್ನು ಮರು ಸಂಪರ್ಕಿಸಿದ್ದಾರೆ. ಅಲ್ಲದೇ, ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಇದನ್ನೂ ಓದಿ:ಕಾಂತಾರ 2 ಕಥೆ ಕೆಲಸ ಚುರುಕು.. ಫೋನ್ ಸ್ವಿಚ್​​ ಆಫ್ ಮಾಡಿಕೊಂಡ ಡಿವೈನ್ ಸ್ಟಾರ್

ಈ ಕಥೆ ರಾಜಮೌಳಿ ಅವರ ತಂದೆ ಕೆ.ವಿ ವಿಜಯೇಂದ್ರ ಪ್ರಸಾದ್ ಅವರು ನೈಜ ಘಟನೆಗಳನ್ನು ಆಧರಿಸಿ ಬರೆದಿರೋದು ಎಂದು ಹೇಳಲಾಗಿದೆ. ಮಹೇಶ್ ಬಾಬು ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರಂತೆ. ತಾತ್ಕಾಲಿಕವಾಗಿ "SSMB29" ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಸಾಹಸಮಯ ಚಿತ್ರದ ಶೂಟಿಂಗ್​​ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆ ಇದೆ. ದೀಪಿಕಾ ಪಡುಕೋಣೆ ಮತ್ತು ಮಹೇಶ್ ಬಾಬು ಮೊದಲ ಬಾರಿಗೆ ಒಟ್ಟಿಗೆ ನಟಿಸಲಿದ್ದಾರೆ.

ಇದನ್ನೂ ಓದಿ:ಫೋಟೋ ಬ್ಲ್ಯಾಕ್​ & ವೈಟ್ - ಸಲ್ಮಾನ್​ ನೋಟ ಮಾತ್ರ ಕಲರ್​​ಫುಲ್​: 'ಬಿಲ್ಲಿ ಬಿಲ್ಲಿ' ಟೀಸರ್ ರಿಲೀಸ್

ABOUT THE AUTHOR

...view details