ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​ವುಡ್​ನ​ 'ರೋಲೆಕ್ಸ್' ಆಗಲಿದ್ದಾರೆ ನಟ ಕೋಮಲ್

ಕಾಲಾಯ ನಮಃ ಚಿತ್ರ ಬಿಡುಗಡೆಗೂ ಮುನ್ನ ನಟ ಕೋಮಲ್ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ರೋಲೆಕ್ಸ್ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ.

By

Published : Dec 8, 2022, 12:16 PM IST

komal upcoming movie rolex
ಕೋಮಲ್ ರೋಲೆಕ್ಸ್ ಸಿನಿಮಾ

ರೋಲೆಕ್ಸ್ ಅಂತಾ ಹೆಸರು ಕೇಳ್ತಿದ್ದಂತೆ ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್‌ ಸಿನಿಮಾ‌ ನೆನಪಾಗುತ್ತದೆ. ಈ ಚಿತ್ರದಲ್ಲಿ ನಟ ಸೂರ್ಯ ರೋಲೆಕ್ಸ್ ಎಂಬ ಪವರ್ ಫುಲ್ ಪಾತ್ರ ಮಾಡಿ ಪ್ರೇಕ್ಷಕರ ಫೇವರಿಟ್​ ರೋಲೆಕ್ಸ್ ಆಗಿದ್ದರು. ಇದೀಗ ಕನ್ನಡದ ನಟ ಕೋಮಲ್ ರೋಲೆಕ್ಸ್ ಆಗಲಿದ್ದಾರೆ. ಹೌದು, ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿರುವ ಕೋಮಲ್ ಕಾಲಾಯ ನಮಃ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಈ‌ ಸಿ‌ನಿಮಾ ಬಿಡುಗಡೆಗೂ ಮುನ್ನ ಕೋಮಲ್ ರೋಲೆಕ್ಸ್ ಆಗಲು ಸಜ್ಜಾಗಿದ್ದಾರೆ.

ಶ್ರೀನಿವಾಸ್ ಮಂಡ್ಯ ನಿರ್ದೇಶನದಲ್ಲಿ ಬರಲಿದೆ ರೋಲೆಕ್ಸ್ ಸಿನಿಮಾ

ಬಿಲ್ ಗೇಟ್ಸ್ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ರೋಲೆಕ್ಸ್' ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ. ಈ ಚಿತ್ರ ಕಂಟೆಂಟ್ ಬೇಸ್ಡ್ ಸಿನಿಮಾವಾಗಿದ್ದು, ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಅಪ್ಪು ಹುಟ್ಟುಹಬ್ಬಕ್ಕೆ 'ಬಾನ ದಾರಿಯಲ್ಲಿ' ಗಿಫ್ಟ್ ರೆಡಿ ಮಾಡಿಕೊಂಡ ಗೋಲ್ಡನ್ ಸ್ಟಾರ್

ಫೀನಿಕ್ಸ್ ಎಂಟರ್​ಟೈನ್ಮೆಂಟ್ಸ್ ಬ್ಯಾನರ್ ಅಡಿ ಅನಿಲ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್ ಸಿ ತಿಲಕ್ ಕ್ಯಾಮರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ 'ರೋಲೆಕ್ಸ್ ' ಸಿನಿಮಾ ಸೆಟ್ಟೇರಲಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.

ABOUT THE AUTHOR

...view details