ಕರ್ನಾಟಕ

karnataka

ETV Bharat / entertainment

ಕಿಚ್ಚ ಸುದೀಪ್​ ಫಿಟ್ನೆಸ್​ ಸೀಕ್ರೆಟ್​ ಏನ್​ ಗೊತ್ತಾ? ಅವರೇ ಹೇಳಿದ್ದಾರೆ ನೋಡಿ.. - ಈಟಿವಿ ಭಾರತ ಕನ್ನಡ

ಬಿಗ್​ ಬಾಸ್​ ಸೀಸನ್​ 10ರ ಸಲುವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಫಿಟ್ನೆಸ್​ ಬಗ್ಗೆ ಮಾತನಾಡಿದ್ದಾರೆ.

Actor Kiccha Sudeep Fitness secret
ಆರಡಿ ಕಟೌಟ್ ಕಿಚ್ಚ ಸುದೀಪ್​ ಫಿಟ್ನೆಸ್​ ಸೀಕ್ರೆಟ್​ ಏನ್​ ಗೊತ್ತಾ?

By ETV Bharat Karnataka Team

Published : Oct 3, 2023, 8:13 PM IST

Updated : Oct 3, 2023, 8:18 PM IST

ಕಿಚ್ಚ ಸುದೀಪ್​ ಫಿಟ್ನೆಸ್​ ಸೀಕ್ರೆಟ್​ ಏನ್​ ಗೊತ್ತಾ? ಅವರೇ ಹೇಳಿದ್ದಾರೆ ನೋಡಿ..

ಭಾರತೀಯ ಸಿನಿಮಾ ರಂಗದಲ್ಲಿ ಅಭಿನಯದ ಮೂಲಕ ತನ್ನದೇ ಸ್ಟಾರ್‌ಡಮ್ ಹೊಂದಿರುವ ಆರಡಿ ಕಟೌಟ್ ಅಂದ್ರೆ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ, ಹೆಬ್ಬುಲಿ, ಪೈಲ್ವಾನ್​ ಹೀಗೆ ಸಾಕಷ್ಟು ಉಪನಾಮಗಳಿಂದ ಕರೆಸಿಕೊಂಡಿರುವ ಸ್ಟಾರ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರಲ್ಲಿ ಕಿಚ್ಚನ ಲೈಫ್​ ಸ್ಟೈಲ್​ ಹಾಗೂ ಫಿಟ್ನೆಸ್​ಗೆ ಬೋಲ್ಡ್​ ಆದವರೇ ಹೆಚ್ಚು. 51ರ ವಯಸ್ಸಿನಲ್ಲಿಯೂ ಮೋಸ್ಟ್​ ಹ್ಯಾಂಡ್ಸಮ್​ ಆಗಿ ಕಾಣಿಸುತ್ತಾರೆ. ಇವರ ಫಿಟ್ನೆಸ್​ ಸೀಕ್ರೆಟ್​ ತಿಳಿದುಕೊಳ್ಳಲು ಅನೇಕರಿಗೆ ಕುತೂಹಲವಿತ್ತು. ಇದೀಗ ಸುದೀಪ್ ಆ ಬಗ್ಗೆಯೇ ಮಾತನಾಡಿದ್ದಾರೆ.

ಸಿನಿಮಾಗಳಲ್ಲದೇ ಕಿಚ್ಚ ಸುದೀಪ್ ಸಖತ್ ಹ್ಯಾಂಡ್ಸಮ್​ ಹಾಗೂ ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳೋದು ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ. ವಾರದಲ್ಲಿ ಎರಡು ದಿನ ಪ್ರೇಕ್ಷಕರ ಮುಂದೆ ಬರುವ ಕಿಚ್ಚನ ಕಾಸ್ಟ್ಯೂಮ್​ನಿಂದ ಹಿಡಿದು ಅವರ ಪರ್ಸಾನಿಲಿಟಿ, ಫಿಟ್ನೆಸ್​ ನೋಡುಗರನ್ನು ಆಕರ್ಷಿಸುತ್ತದೆ. ಸದಾ ಎವರ್​ಗ್ರೀನ್​ ಲುಕ್​ನಲ್ಲೇ ಕಾಣುವ ನಟನ ಫಿಟ್ನೆಸ್​ ಸೀಕ್ರೆಟ್ ಏನಪ್ಪಾ ಅನ್ನೋದು ಅವರನ್ನು ಪ್ರೀತಿಸುವ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಈ ಬಗ್ಗೆ ಬಿಗ್​ ಬಾಸ್​ ಸೀಸನ್​ 10ರ ಸಲುವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಅವರೇ ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಚ್ಚ ತಮ್ಮ ಮೊದಲ 'ಸ್ಪರ್ಶ' ಸಿನಿಮಾದಲ್ಲಿ ಇದ್ದಂತೆಯೇ ಈಗಲೂ ಇದ್ದಾರೆ. ಕೊಂಚ ಮೀಸೆ ಗಡ್ಡ ಬಿಟ್ಟಿದ್ದಾರೆ ಅನ್ನೋದಷ್ಟೇ ವ್ಯತ್ಯಾಸ. ಇತ್ತೀಚೆಗಿನ 'ಪೈಲ್ವಾನ್' ಚಿತ್ರದ ನಂತರ ಜಿಮ್​​ನಲ್ಲಿ ವರ್ಕೌಟ್​ ಶುರು ಮಾಡಿರೋ ಕಾರಣ ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿ ಕಾಣುತ್ತಾರೆ. ಅವರ ಅರೋಗ್ಯದ ಗುಟ್ಟು ಅರೋಗ್ಯಕರ ದಿನಚರಿ.

ಸಾಮಾನ್ಯವಾಗಿ ಸ್ಟಾರ್ ನಟರು ಸಖತ್​ ಬ್ಯುಸಿಯಾಗಿರುತ್ತಾರೆ. ಪಾರ್ಟಿ, ಪ್ರೋಗ್ರಾಂ ಅಂತ ಲೇಟ್ ನೈಟ್ ಮನೆ ತಲುಪುತ್ತಾರೆ. ಯಾವಾಗ ಟೈಮ್ ಸಿಗುತ್ತೋ ಆಗ ಜಿಮ್, ಗ್ಯಾಪ್​​ನಲ್ಲಿ ಊಟ ತಿಂಡಿ ಮಾಡ್ತಾರೆ ಅಂತ ಜನ ಅಂದುಕೊಂಡಿದ್ದಾರೆ. ಯಾಕಂದ್ರೆ, ಕೆಲ ನಟರ ಲೈಫ್ ಸ್ಟೈಲ್ ಕೂಡ ಅದೇ ರೀತಿ ಇರುತ್ತದೆ. ಆದರೆ ಕಿಚ್ಚ ಸುದೀಪ್​ ಇದಕ್ಕೆಲ್ಲಾ ತದ್ವಿರುದ್ಧ.

ಇದೇ ನೋಡಿ ಫಿಟ್ನೆಸ್‌ ಸೀಕ್ರೆಟ್: ಕಿಚ್ಚ ಅವರೇ ಹೇಳುವಂತೆ, ಬೆಳಗ್ಗೆ 5 ಗಂಟೆಗೆ ಎದ್ದು ಆ್ಯಕ್ಟೀವ್ ಆಗಿ 6 ಗಂಟೆ ವೇಳೆಗೆ ಬೆಳಗ್ಗಿನ ಉಪಹಾರ ಮುಗಿಸಿಬಿಡುತ್ತಾರೆ. ಅದಾದ ನಂತರ ಕೊಂಚ ರಿಲ್ಯಾಕ್ಸ್. ಬಳಿಕ ಸಿನಿಮಾ ಕೆಲಸದಲ್ಲಿ ಬ್ಯುಸಿ. 11 ಗಂಟೆ ವೇಳೆಗೆ ಊಟ ಮುಗಿಸಿ ಮತ್ತೆ ಸಿನಿಮಾ ಕೆಲಸ. ಇದರ ನಡುವೆ ಕ್ರಿಕೆಟ್, ಜಿಮ್​. ಮಧ್ಯಾಹ್ನದ ವೇಳೆ ನಿದ್ದೆ ಮಾಡೋದು ತೀರಾ ಕಮ್ಮಿಯಂತೆ.

ಸಂಜೆ ವೇಳೆಗೆ ಫ್ಯಾಮಿಲಿ ಇಲ್ಲ, ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯುತ್ತಾರೆ. ಕೆಲವೊಮ್ಮೆ ಪಾರ್ಟಿ ಕೂಡ ಮಾಡ್ತಾರೆ. ಆದರೆ ಕಿಚ್ಚನ ಪಾರ್ಟಿ ಸಂಜೆ 6 ರಿಂದ 7 ಗಂಟೆ ಒಳಗೆ ಮುಗಿದುಬಿಡುತ್ತದೆ. ರಾತ್ರಿಯ ಊಟ ಮುಗಿಸಿ ಅರ್ಧ ಗಂಟೆ ಗ್ಯಾಪ್ ಕೊಟ್ಟು ನಿದ್ರೆಗೆ ಜಾರುವ ಕಿಚ್ಚ ಮತ್ತೆ ಮರುದಿನ‌ ಬೆಳಗ್ಗೆ 5 ಗಂಟೆಗೆ ಎದ್ದು ಬಿಡುತ್ತಾರೆ. ದಿನಕ್ಕೆ ಎರಡು ಗಂಟೆ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಾರೆ.

ಸುದೀಪ್​ ಅವರು ಹೋಟೆಲ್​, ಫಾಸ್ಟ್​ ಫುಡ್​ಗಳಿಂದ ಕೊಂಚ ದೂರ. ಮನೆಯಲ್ಲಿಯೇ ಮಾಡಿದ ಅಡುಗೆಯನ್ನು ಇಷ್ಟಪಡುತ್ತಾರೆ. ಇಲ್ಲವಾದರೆ ತಮಗೆ ಬೇಕಾದ ಅಡುಗೆಯನ್ನು ತಾವೇ ರೆಡಿ ಮಾಡಿಕೊಳ್ಳುತ್ತಾರೆ. ನಾನ್​ವೆಜ್​ ಪ್ರಿಯರಾಗಿರುವ ಸುದೀಪ್, ಸುಮಾರು 40ಕ್ಕೂ ಹೆಚ್ಚು ವೆರೈಟಿ ಡಿಶ್‌ಗಳನ್ನು ಮಾಡುತ್ತಾರೆ ಅನ್ನೋದು ಇಂಟ್ರಸ್ಟಿಂಗ್​ ವಿಚಾರ.

"ನನಗೆ ಇಲ್ಲಿಯವರೆಗೆ ಸುದೀಪ್​ ಎಂಬ ಹೆಸರಿಗಾಗಿ ಸಿನಿಮಾ ಅರಸಿ ಬಂದಿಲ್ಲ. ನಾನು ಫಿಟ್​ ಆ್ಯಂಡ್​ ಹ್ಯಾಂಡ್ಸಮ್​ ಆಗಿರುವುದಕ್ಕೆ ನನಗೆ ಸಿನಿಮಾಗಳ ಅವಕಾಶ ಸಿಗುತ್ತಿದೆ. ಇಲ್ಲದಿದ್ದರೆ, ಬೇರೆ ನಟರು ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ಯಾಕೆ ನಮ್ಮ ನಟರು ಕೊಡಲ್ಲ ಅಂತಾ ನೀವೇ ನನ್ನ ಬಗ್ಗೆ ಸ್ಟೋರಿ ಮಾಡುತ್ತೀರಾ. ನಾನು ಚೆನ್ನಾಗಿ ಕಾಣಲಿಲ್ಲ ಅಂದ್ರೆ ಶೂಟಿಂಗ್​ ಟೈಮಲ್ಲಿ ಹೀರೋಯಿನ್​ ನನ್ನನ್ನು ನೋಡೋದು ಬಿಟ್ಟು ಪಕ್ಕದಲ್ಲಿರುವ ಫಿಟ್​ ಆಗಿರುವ ಬೇರೆಯವರನ್ನು ನೋಡುತ್ತಾರೆ" ಎಂದು ಹಾಸ್ಯಚಟಾಕಿ ಹಾರಿಸಿದರು.

ಇದನ್ನೂ ಓದಿ:ಅ. 8ರಿಂದ ಬಿಗ್​ ಬಾಸ್​ ಆಟ ಶುರು; 'ಚಾರ್ಲಿ' ಜೊತೆ 17 ಸ್ವರ್ಧಿಗಳು ದೊಡ್ಮನೆಗೆ ಎಂಟ್ರಿ

Last Updated : Oct 3, 2023, 8:18 PM IST

ABOUT THE AUTHOR

...view details