ಮನೋರಂಜನಾ ಕ್ಷೇತ್ರಕ್ಕೆ ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಬಾಲಿವುಡ್‌ನ ರೈಸಿಂಗ್ ಸ್ಟಾರ್ ಕಾರ್ತಿಕ್ ಆರ್ಯನ್. ಸ್ವಂತ ಪ್ರತಿಭೆ ಮೂಲಕವೇ ಬಾಲಿವುಡ್ ಇಂಡಸ್ಟ್ರಿಯಲ್ಲಿ ಮಿನುಗುತ್ತಿರುವ ಸ್ಟಾರ್ ಇವರು. ಚಿಕ್ಕ ವಯಸ್ಸಿನಲ್ಲೇ ಸಿನಿ ಸಾಧನೆ ಮಾಡಿದ ಪ್ರತಿಭಾವಂತ ನಟ. ತೆರೆ ಮೇಲೆ ಹೆಚ್ಚಾಗಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಕಾರ್ತಿಕ್ ಆರ್ಯನ್ ಅವರಿಗೆ ನಿಜ ಜೀವನದಲ್ಲಿ ಲವರ್ ಇದ್ದಾರೆಯೇ?. ಇದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಪ್ರಶ್ನೆ ನೋಡಿ. ಆದರೆ ಈವರೆಗೆ ಈ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲ.
ಬಾಲಿವುಡ್‌ನ ದೂದ್ಪೇಡಾ ಲವ್ಲೈಫ್:ಆನ್ಸ್ಕ್ರೀನ್ನಲ್ಲಿ ಲವರ್ ಬಾಯ್, ನೋಡಲು ಸಖತ್ ಹ್ಯಾಂಡ್ಸಂ, ಸೂಪರ್ ಹೈಟ್ - ವೈಟ್ - ಪರ್ಸನಾಲಿಟಿ. ಇವರ ಲುಕ್ಗೆ ಮನಸೋಲದವರು ತೀರಾ ಕಡಿಮೆ. ಬಾಲಿವುಡ್‌ನ ದೂದ್ಪೇಡಾಗೆ ಪ್ರೇಯಸಿ ಇಲ್ಲದಿರುವುದನ್ನು ಮಾತ್ರ ಹೆಚ್ಚಿನ ಅಭಿಮಾನಿಗಳು ಒಪ್ಪಿಕೊಳ್ಳಲು ರೆಡಿ ಇಲ್ಲ.
ನಿರ್ಮಾಪಕರಾಗಿ ನಟ ಕಾರ್ತಿಕ್ ಆರ್ಯನ್:ನಟ ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಚಿತ್ರ ಶೆಹಜಾದ (Shehzada)ದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನಟ ನಗರಗಳಲ್ಲಿ ರೌಂಡ್ಸ್ ಒಡೆಯುತ್ತಿದ್ದಾರೆ. ನಟನಾಗಿ ಮಾತ್ರವಲ್ಲ, ಈ ಚಿತ್ರದಲ್ಲಿ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಅವರಿಗಿದು ಚೊಚ್ಚಲ ಪ್ರವೇಶ. ಶೆಹಜಾದ ಪ್ರಚಾರದ ಸಂದರ್ಶನವೊಂದರಲ್ಲಿ, ನಟ ಕಾರ್ತಿಕ್ ಆರ್ಯನ್ ಅವರಿಗೆ ಲವ್ ಲೈಫ್ ಮತ್ತು ಪ್ರೇಯಸಿ ಬಗ್ಗೆ ಕೇಳಲಾಯಿತು.
ಸಂಬಂಧ ಬೆಳೆಸಲು ಸಮಯವಿಲ್ಲವೆಂದಿದ್ದ ನಟ: ನಟ ಹೃತಿಕ್ ರೋಷನ್ ಅವರ ಸಂಬಂಧಿ ಪಶ್ಮಿನಾ ರೋಷನ್ ಅವರೊಂದಿಗೆ ವದಂತಿಯ ಸುದ್ದಿಯಲ್ಲಿದ್ದೇನೆ ಎಂದು ಕಾರ್ತಿಕ್ ಆರ್ಯನ್ ಪ್ರತಿಕ್ರಿಯಿಸಿದರು. ಹಿಂದಿನ ಸಂದರ್ಶನವೊಂದರಲ್ಲಿ, ತಮ್ಮ ಎಲ್ಲ ಸಮಯವನ್ನು ಕೆಲಸಕ್ಕೆ ಮೀಸಲಿಡಲು ಬಯಸುತ್ತೇನೆ. ಪ್ರಭಾವಶಾಲಿ ಚಿತ್ರ ನಿರ್ಮಿಸಲು ಗಮನ ಹರಿಸಬೇಕು, ಸಂಬಂಧವನ್ನು ಬೆಳೆಸಲು ಸಮಯವಿಲ್ಲ ಎಂದು ಹೇಳಿದ್ದರು.