ಹೈದರಾಬಾದ್: ನಟ ಕಮಲ್ ಹಾಸನ್ ನಟನೆಯ ಚಿತ್ರ ವಿಕ್ರಮ್ ಚಿತ್ರರಂಗದಲ್ಲಿ ಗೆಲುವು ಸಾಧಿಸಿದ್ದು, ಚಿತ್ರ ತೆರೆ ಕಂಡು ನಾಲ್ಕು ದಿನಗಳಲ್ಲಿ 200 ಕೋಟಿ ಕ್ಲಬ್ ದಾಟಿದೆ. ಈ ಚಿತ್ರ ನಿರ್ದೇಶನ ಮಾಡಿರುವ ಲೋಕೇಶ್ ಕನಗರಾಜ್ ಅವರಿಗೆ ಇದೀಗ ನಟ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಚಿತ್ರರಂಗದಲ್ಲಿ ಗೆದ್ದ ಕಮಲ್ ಹಾಸನ್ 'ವಿಕ್ರಮ್'.. ನಿರ್ದೇಶಕರಿಗೆ ಭರ್ಜರಿ ಕಾರು ಗಿಫ್ಟ್ ನೀಡಿದ ನಟ! - ವಿಕ್ರಮ್ ಚಿತ್ರದಲ್ಲಿ ನಟ ಕಮಲ್ ಹಾಸನ್
ಕಮಲ್ ಹಾಸನ್ ನಟನೆ ಮಾಡಿರುವ ಚಿತ್ರ ವಿಕ್ರಮ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದರ ಬೆನ್ನಲ್ಲೇ ಚಿತ್ರ ನಿರ್ದೇಶನ ಮಾಡಿರುವ ಲೋಕೇಶ್ ಕನಗರಾಜ್ ಅವರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ.
ಬಹಳ ವರ್ಷಗಳ ನಂತರ ಕಮಲ್ ಹಾಸನ್ ನಟನೆ ಮಾಡಿರುವ ವಿಕ್ರಮ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ದುಬಾರಿ ಲೆಕ್ಸೆಸ್ ಕಾರು ಗಿಫ್ಟ್ ಮಾಡಿದ್ದು, ಇದರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಿಗೆ ಟಿಎಎಸ್ ಅಪಾಚಿ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
ವಿಕ್ರಮ್ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದು, ಇದರಲ್ಲಿ ನಟರಾದ ವಿಜಯ್ ಸೇತುಪತಿ, ಫಹದ್ ಫಾಸಿಲ್ ಸಹ ನಟನೆ ಮಾಡಿದ್ದಾರೆ. ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.