ಕರ್ನಾಟಕ

karnataka

ETV Bharat / entertainment

ಆಸ್ಕರ್​ ಅಂಗಳದಲ್ಲಿ ಜೂನಿಯರ್​ ಎನ್​ಟಿಆರ್.. ಅಮೋಘ ಅಭಿನಯಕ್ಕೆ ಸಿಗುತ್ತಾ ಪ್ರಶಸ್ತಿ ಗರಿ? - ಜೂನಿಯರ್​ ಎನ್​ಟಿಆರ್ ಪ್ರಶಸ್ತಿ

ನಟ ಜೂನಿಯರ್​ ಎನ್​ಟಿಆರ್​ ಆಸ್ಕರ್​ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Actor Junior NTR
ಆಸ್ಕರ್​ ಅಂಗಳದಲ್ಲಿ ಜೂನಿಯರ್​ ಎನ್​ಟಿಆರ್

By

Published : Jan 21, 2023, 3:05 PM IST

ಖ್ಯಾತ ಸಿನಿಮಾ ನಿರ್ದೇಶಕ ​ಎಸ್.​ಎಸ್.ರಾಜಮೌಳಿ ಆ್ಯಕ್ಷನ್​ ಕಟ್ ಹೇಳಿರುವ ಆರ್​ಆರ್​ಆರ್​ ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ಸೌತ್​ ಸೂಪರ್​ ಸ್ಟಾರ್​ಗಳಾದ ರಾಮ್​ ಚರಣ್​​ ಮತ್ತು ಜೂನಿಯರ್​ ಎನ್​ಟಿಆರ್​ ಅವರ ಅಮೋಘ ಅಭಿನಯಕ್ಕೆ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಮನಸೋತಿದ್ದಾರೆ. ಅವರ ನಟನಾ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್​ಆರ್​ಆರ್​ ತಂಡ ಆಸ್ಕರ್​ ಅಂಗಳದಲ್ಲಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.

ಆಸ್ಕರ್​ ಪ್ರಶಸ್ತಿ ಪಟ್ಟಿಯಲ್ಲಿ ಜೂನಿಯರ್​ ಎನ್​ಟಿಆರ್?ವಿಶ್ವದಲ್ಲೇ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸಿರುವ ಆರ್​ಆರ್​ಆರ್​ ಸಿನಿಮಾ ಇತ್ತೀಚೆಗೆ ಗೋಲ್ಡನ್​​ ಗ್ಲೋಬ್​ ಪ್ರಶಸ್ತಿ ಗೆದ್ದು ಬೀಗಿತ್ತು. ಇದೀಗ ಈ ಚಿತ್ರತಂಡದ ಕಣ್ಣುಗಳು ಆಸ್ಕರ್​ ಪ್ರಶಸ್ತಿ ಮೇಲಿದೆ. ಜೂನಿಯರ್​ ಎನ್​ಟಿಆರ್​ ಆಸ್ಕರ್​ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಹೆಮ್ಮಯ ವಿಷಯ.

ಜೂನಿಯರ್​ ಎನ್​ಟಿಆರ್​ ಅಭಿನಯಕ್ಕೆ ಮೆಚ್ಚುಗೆ..ಸೂಪರ್​ ಹಿಟ್​ ಆರ್​ಆರ್​ಆರ್​ ಸಿನಿಮಾದಲ್ಲಿ ಭೀಮ್​ ಪಾತ್ರದಲ್ಲಿ ಜೂನಿಯರ್​ ಎನ್​ಟಿಆರ್​ ಅಬ್ಬರಿಸಿದ್ದರು. ಈ ಪಾತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆಸ್ಕರ್​ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡೋದು ಅವರ ಅಭಿಮಾನಿಗಳೇ ಅಲ್ವಾ?. ನಮ್ಮ ದೇಶದ ನಟ ಆಸ್ಕರ್​ಗೆ ಆಯ್ಕೆ ಆಗಬೇಕು, ಪ್ರಶಸ್ತಿ ಪಡೆದು ಭಾರತದ ಕೀರ್ತಿ ಹೆಚ್ಚಿಸಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಅಮೆರಿಕದ ಪತ್ರಿಕೆಯೊಂದು ಕೂಡ ಆಸ್ಕರ್​ ಪ್ರಶಸ್ತಿ ಪಟ್ಟಿಯಲ್ಲಿ ಜೂನಿಯರ್​ ಎನ್​ಟಿಆರ್ ಇರುವುದು ಬಹುತೇಕ ಖಚಿತ ಎಂದು ವರದಿ ಮಾಡಿದೆ.

ಇದನ್ನೂ ಓದಿ:ಇಂದು ಸುಶಾಂತ್​ ಸಿಂಗ್​ ಜನ್ಮದಿನ.. ಬಾಲಿವುಡ್​ ಧೋನಿ ನೆನಪು ಜೀವಂತ!

ಆರ್​ಆರ್​ಆರ್​ ಯಶಸ್ಸು..ಸೌತ್​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್​ಗಳಾದ ಜೂನಿಯರ್​ ಎನ್​ಟಿಆರ್​ ಹಾಗು ರಾಮ್​ ಚರಣ್​ ಜೊತೆಗೆ ಬಾಲಿವುಡ್​ ಬಹುಬೇಡಿಕೆ ನಟಿ ಆಲಿಯಾ ಭಟ್​ ನಟನೆಯ ಆರ್​ಅರ್​ಆರ್​ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಧೂಳೆಬ್ಬಿಸಿತ್ತು. ​ಎಸ್.​ಎಸ್.ರಾಜಮೌಳಿ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಬಾಕ್ಸ್​​ ಆಫೀಸ್​ನಲ್ಲಿ 1,200 ಕೊಟಿ ರೂ.ಗೂ ಅಧಿಕ ಗಳಿಗೆ​ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಇತ್ತೀಚೆಗೆ ಗೋಲ್ಡನ್ ಗ್ಲೋಬ್​​ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತೀಯ ಚಿತ್ರರಂಗದ ಹಿರಿಮೆ ಹೆಚ್ಚಿಸಿತ್ತು. ಹೌದು, ಕೆಲ ದಿನಗಳ ಹಿಂದೆ ಈ ಸಿನಿಮಾದ ನಾಟು ನಾಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್​​ 2023ರ ಅತ್ಯುತ್ತಮ ಮೂಲ (ಸ್ವತಂತ್ರ ರಚನೆ) ಹಾಡು ಪ್ರಶಸ್ತಿ ಪಡೆದುಕೊಂಡಿತ್ತು.

ಇದನ್ನೂ ಓದಿ:ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ!

BAFTA 2023 ಪ್ರಶಸ್ತಿಗೆ ಆಯ್ಕೆ.. ಈಗಾಗಲೇ ದೇಶ ಮತ್ತು ವಿದೇಶಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್​ಆರ್​ಆರ್ ಸಿನಿಮಾ​ ಮತ್ತಷ್ಟು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದೆ. ಪ್ರತಿಷ್ಠಿತ BAFTA ಪ್ರಶಸ್ತಿಗೆ ಆಯ್ಕೆ ಆಗಿದೆ. BAFTA 2023 ಪ್ರಶಸ್ತಿಗೆ ರೇಸ್‌ನಲ್ಲಿರುವ ಚಲನಚಿತ್ರಗಳಲ್ಲಿ ಆರ್​ಆರ್​ಆರ್ ಕೂಡ​ ಒಂದು.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಎಲ್ಲ ರೀತಿಯಲ್ಲೂ ನಂಬರ್1: ಸಾರಾ ಅಲಿ ಖಾನ್​

ABOUT THE AUTHOR

...view details