ರಾಜ್ಯಸಭೆ ಸದಸ್ಯ, ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವವರು. ಕುಟುಂಬಸ್ಥರ, ಸ್ನೇಹಿತರ ಫೋಟೋ ವಿಡಿಯೋಗಳನ್ನು ಆಗಾಗ ಶೇರ್ ಮಾಡಿ ಪರಿಚಯಿಸುವವರು. ಆದರೆ ಇದೀಗ ಅವರು ತಮ್ಮ ಮನೆಯಲ್ಲೇ ಇರುವ ಸಂಗೀತ ವಿದ್ವಾಂಸ ಸ್ನೇಹಿತನನ್ನು ಪರಿಚಯಿಸಿದ್ದಾರೆ. ಹೌದು, ಜಗ್ಗೇಶ್ ಅವರು ತಮ್ಮ ಮನೆಯ ಪ್ರೀತಿಯ ಶ್ವಾನ (Jaggesh's dog) ಹಾಡು ಹಾಡುವ ವಿಡಿಯೋ ಶೇರ್ ಮಾಡಿದ್ದಾರೆ.
ನಮ್ಮ ಮನೆಯಲ್ಲಿರುವ ವಿಶೇಷ ಸಂಗೀತ ವಿದ್ವಾಂಸನನ್ನು ಪರಿಚಯಿಸುತ್ತಿದ್ದೇನೆ. ಆತ ನನ್ನ ಜೊತೆಗೆ ಹಾಡು ಹಾಡುತ್ತಾನೆ ಎಂದು ನಟ ಜಗ್ಗೇಶ್ ಹೊಗಳಿದ್ದಾರೆ. ಬಳಿಕ ಜಗ್ಗೇಶ್ ಹಾಡಲು ಶುರು ಮಾಡುತ್ತಿದ್ದಂತೆ ಶ್ವಾನ ಕೂಡ ಹಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.