ಕನ್ನಡ ಚಿತ್ರರಂಗದಲ್ಲಿ ಸಿನೆಮಾವೊಂದು ಸೂಪರ್ ಹಿಟ್ ಆದ ಬಳಿಕ ಅದರ ಪಾರ್ಟ್- 2 ಬರುವ ಟ್ರೆಂಡ್ ಹೆಚ್ಚಾಗುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ', ಶರಣ್ ಅಭಿನಯದ 'ಅವತಾರ ಪುರುಷ', ಸತೀಶ್ ನೀನಾಸಂ ನಟನೆಯ 'ಪೆಟ್ರೋಮ್ಯಾಕ್ಸ್' ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದ್ದು, ಪಾರ್ಟ್-2ದತ್ತ ನಿರ್ದೇಶಕರು ಹಾಗೂ ನಟರು ಮುಖ ಮಾಡಿದ್ದಾರೆ. ಇದೀಗ ದುನಿಯಾ ವಿಜಯ್ ನಟಿಸಿ, ಮೊದಲ ಸಲ ನಿರ್ದೇಶಿಸಿದ್ದ 'ಸಲಗ' ಕೂಡ ಈ ಸಾಲಿಗೆ ಸೇರಲಿದೆ.
ರೌಡಿಸಂ ಕಥೆ ಆಧರಿಸಿ ಬಂದ ಸಲಗ, 2021ರಲ್ಲಿ ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ಎಬ್ಬಿಸಿತ್ತು. ಚಿತ್ರವು ನಟ ಹಾಗೂ ನಿರ್ದೇಶಕನಾಗಿ ದುನಿಯಾ ವಿಜಯ್ಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಅಲ್ಲದೇ ಗಳಿಕೆಯಲ್ಲೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ದುನಿಯಾ ವಿಜಯ್ಗೆ ಲಾಭ ಕೂಡ ಸಿಕ್ಕಿತ್ತು. ಸೂಪರ್ ಹಿಟ್ ಆದ ಬಳಿಕ ದುನಿಯಾ ವಿಜಯ್ ಎಲ್ಲಿ ಹೋದರೂ ಸಲಗ ಪಾರ್ಟ್ 2 ಮಾಡುವಿರಾ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿ ಬರುತ್ತಿದೆಯಂತೆ.
ಈ ಸಿನೆಮಾ ಸಕ್ಸಸ್ ಹಿಂದಿನ ಕಷ್ಟದ ದಿನಗಳ ಬಗ್ಗೆ ಇತ್ತೀಚೆಗೆ ವಿಜಯ್ ಹೇಳಿಕೊಂಡಿದ್ದಾರೆ. ಅಲ್ಲದೆ ಸಿನಿ ಕೆರಿಯರ್ಗೆ ಮರುಜನ್ಮ ನೀಡಿದ ಈ ಚಿತ್ರವು ಅವರಿಗೆ ಗೆಲ್ಲುತ್ತೇನೆಂಬ ಎಂಬ ಆತ್ಮವಿಶ್ವಾಸ ನೀಡಿದೆಯಂತೆ. ಈ ಕಾರಣಕ್ಕೆ ದುನಿಯಾ ವಿಜಯ್ ಸಲಗ ಪಾರ್ಟ್-2 ಮಾಡುವ ಆಲೋಚನೆಯಲ್ಲಿದ್ದಾರೆ.