ದೇವನಹಳ್ಳಿ (ಬೆಂಗಳೂರು):ಹಲವು ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ನಟ ರಾಕ್ಷಸ ಎಂದೇ ಕರೆಸಿಕೊಳ್ಳುವ ಡಾಲಿ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಎಂ.ಪಿ ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಮಾಡಿರುವುದು ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿದೆ.
ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ಸದ್ಯ ಡಾಲಿ ಸೇರಿದಂತೆ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದೆ.
ದುಬೈ ಪ್ರವಾಸದಲ್ಲಿದ್ದ ನಟ ಡಾಲಿ ಧನಂಜಯ್ ಇಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬೆಲ್ ಬಾಟಂ ಉಡುಗೆ ತೊಟ್ಟು ಮಾಜಿ ಡಾನ್ ಗೆಟಪ್ನಲ್ಲಿ ಬಂದ ಡಾಲಿಯನ್ನು ಅಭಿಮಾನಿಗಳು ಏರ್ಪೋರ್ಟ್ ನಲ್ಲಿ ಸ್ವಾಗತಿಸಿದರು. ಸಾದಹಳ್ಳಿ ಗೇಟ್ನಿಂದ ಸಿನಿಮಾದ ಪ್ರಚಾರ ಮಾಡಲಾಯಿತು. ಸಿನಿಮಾ ಪ್ರಚಾರಕ್ಕಾಗಿ ಅಂಬಾಸಿಡರ್ ಕಾರನ್ನು ಅಲಂಕಾರ ಮಾಡಲಾಗಿತ್ತು. ಅಂಬಾಸಿಡರ್ ಕಾರಿನಲ್ಲಿ ಡಾಲಿ ಬೆಂಗಳೂರಿಗೆ ಪ್ರಯಾಣಿಸಿದರು.