ಕರ್ನಾಟಕ

karnataka

ETV Bharat / entertainment

ನಟ ದಿಗಂತ್​ ​ಹುಟ್ಟುಹಬ್ಬ: 'ಎಡಗೈಯೇ ಅಪಘಾತಕ್ಕೆ ಕಾರಣ' ಪೋಸ್ಟರ್ ರಿವೀಲ್ - diganth upcoming movies

ನಟ ದಿಗಂತ್​ ಹುಟ್ಟುಹಬ್ಬ - ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರತಂಡದಿಂದ ದೂದ್​ ಪೇಡಾ ನಟನಿಗೆ ಸಿಕ್ತು ಗಿಫ್ಟ್​ - ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡಿದ ಚಿತ್ರತಂಡ.

actor diganth birthday
ನಟ ದಿಂಗತ್​ ಹುಟ್ಟುಹಬ್ಬ

By

Published : Dec 28, 2022, 4:34 PM IST

ಕನ್ನಡ ಚಿತ್ರಗಳಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡು ಬಂದಿರುವ ದೂದ್ ಪೇಡ ದಿಗಂತ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ದಿಂಗತ್‌ಗೆ ಅಭಿಮಾನಿಗಳು, ಆತ್ಮೀಯರು, ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಅವರ ಹೊಸ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ.

ಹೌದು, ನಟ ದಿಗಂತ್ ನಟಿಸುತ್ತಿರುವ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ತಮ್ಮ ಚಿತ್ರದ ನಾಯಕ ನಟನಿಗೆ ಸರ್ ಪ್ರೈಸ್ ನೀಡಿದೆ. ದಿಗಂತ್ ಅವರಿಗೆ ಇಲ್ಲಿವರೆಗೆ ಚಾಕೋಲೇಟ್ ಬಾಯ್, ರೊಮ್ಯಾಂಟಿಕ್ ಹೀರೋ ಇಮೇಜ್ ಇತ್ತು. ಆದರೆ ಈ ಸಿನಿಮಾ ಮೂಲಕ ಕಂಪ್ಲೀಟ್ ಡಿಫ್ರೆಂಟ್ ಇಮೇಜ್​​ನಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ. ಹುಟ್ಟುಹಬ್ಬಕ್ಕೆ ಡಿಫ್ರೆಂಟ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದೆವು. ಅದರಂತೆ ಇಂದು ಪೋಸ್ಟರ್ ಅನಾವರಣ ಮಾಡಿದ್ದೇವೆ ಎಂದು ನಿರ್ದೇಶಕ ಸಮರ್ಥ್ ಬಿ ಕಡಕೊಳ್ ತಿಳಿಸಿದ್ದಾರೆ.

'ಎಡಗೈಯೇ ಅಪಘಾತಕ್ಕೆ ಕಾರಣ' ಪೋಸ್ಟರ್ ರಿವೀಲ್

ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಕೊನೆಯಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರವಿದು. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು.

ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್ ಅಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.

ಇದನ್ನೂ ಓದಿ:2022ರಲ್ಲಿ ಸ್ಯಾಂಡಲ್​ವುಡ್​ಗೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ?

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಧನು ಹರ್ಷ ದಿಗಂತ್​ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಡಗೈ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರೋದ್ರಿಂದ ಈ ಪಾತ್ರ ತಮಗೆ ವಿಶೇಷವಾಗಿದ್ದು, ಡಿಫರೆಂಟ್ ಶೇಡ್​ನಲ್ಲಿ ಕಾಣಿಸಿಕೊಳ್ಳುವುದಾಗಿ ಧನು ಹರ್ಷ ಈ ಮೊದಲು ತಿಳಿಸಿದ್ದರು.

ಈ ಚಿತ್ರದ ವಿಶೇಷ ಏನೆಂದರೆ, ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದೆ. ಇದರಿಂದ ಅವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದೆ. ನಟ ದಿಗಂತ್ ಅವರ ವೃತ್ತಿಜೀವನದಲ್ಲಿ ಇದೊಂದು ಭಿನ್ನ ಸಿನಿಮಾ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್ 2022:​​ ಸೂಪರ್ ಹಿಟ್ ಸಿನಿಮಾಗಳು - ನಿರೀಕ್ಷೆ ತಲುಪದ ಚಿತ್ರಗಳು!!

ನಟ ದಿಗಂತ್‌ ಶಿವಮೊಗ್ಗದ ತೀರ್ಥಹಳ್ಳಿಯವರು. ತಂದೆ ಕೃಷ್ಣಮೂರ್ತಿ, ತಾಯಿ ಮಲ್ಲಿಕಾ. ಶಿವಮೊಗ್ಗದಲ್ಲಿ ಶಾಲೆ ವಿದ್ಯಾಭ್ಯಾಸ ಮುಗಿಸಿದ ದಿಗಂತ್‌, ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ದಿಗಂತ್‌ 2006ರಲ್ಲಿ ಮಿಸ್‌ ಕ್ಯಾಲಿಫೋರ್ನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಮುಂಗಾರು ಮಳೆ, ಮೀರಾ ಮಾಧವ, ರಾಘವ, ಗಾಳಿಪಟ, ಮಸ್ತ್‌ ಮಜಾ ಮಾಡಿ, ಹೌಸ್​ ಫುಲ್​, ಮನಸಾರೆ, ಬಿಸಿಲೆ, ಜಾಲಿ ಬಾಯ್ಸ್, ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾವು ನಾಯಕನಾಗಿ ನಟಿಸಿದ ಮನಸಾರೆ ಚಿತ್ರದ ನಾಯಕಿ ಐಂದ್ರಿತಾ ರೈ ಅವರನ್ನು 2018ರ ಡಿಸೆಂಬರ್ 12 ರಂದು ವಿವಾಹವಾದರು.

ABOUT THE AUTHOR

...view details