ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಫೇಮಸ್ ಜೋಡಿಗಳಲ್ಲೊಂದು. ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಹೊರ ಬರುತ್ತಿರುವ ಧ್ರುವ ಸರ್ಜಾ ಮನೆಯಲ್ಲೀಗ ಸಂಭ್ರಮದ ವಾತಾವರಣವಿದೆ. ಮದುವೆ ಆಗಿ ಮೂರು ವರ್ಷಗಳ ಬಳಿಕ ಈ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೇರಣಾ ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಧ್ರುವ ಸರ್ಜಾ ಬಹಳ ಡಿಫ್ರೆಂಟ್ ಆಗಿ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಧ್ರುವ ಸರ್ಜಾ ಪ್ರೇರಣಾರೊಂದಿಗೆ ಕಲರ್ ಫುಲ್ ಫೋಟೋಶೂಟ್ ಮಾಡಿಸುವ ಮೂಲಕ ತಾವು ಈ ತಿಂಗಳಲ್ಲೇ ಪೋಷಕರಾಗಲಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಅಂತಾ ತಿಳಿಸಿದ್ದಾರೆ.