ಕರ್ನಾಟಕ

karnataka

ETV Bharat / entertainment

ಶೀಘ್ರದಲ್ಲೇ ತಂದೆಯಾಗಲಿದ್ದಾರೆ ನಟ ಧ್ರುವ ಸರ್ಜಾ.. ನೋಡಿ ಪತ್ನಿ ಪ್ರೇರಣಾರ ಸೀಮಂತ ಕಾರ್ಯಕ್ರಮ - etv bharata kannada

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾರ ಸೀಮಂತ ಕಾರ್ಯಕ್ರಮ ಜರುಗಿತು.

Dhruva Sarja wife Prerana Baby shower program
ಧ್ರುವ ಸರ್ಜಾ ಪತ್ನಿ ಪ್ರೇರಣಾರ ಸೀಮಂತ ಕಾರ್ಯಕ್ರಮ

By

Published : Sep 15, 2022, 3:27 PM IST

ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಮನೆಯಲ್ಲಿ ಸಂಭ್ರಮದ ವಾತಾವರಣವಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೇರಣಾರ ಸೀಮಂತ ಕಾರ್ಯಕ್ರಮ ನೆರವೇರಿತು. ಸಮಾರಂಭದಲ್ಲಿ ಕುಟುಂಬಸ್ಥರು ಸೇರಿದಂತೆ ಚಿತ್ರರಂಗದವರು ಭಾಗಿಯಾಗಿದ್ದರು.

ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರೂ ಪ್ರೀತಿಸಿ ಮದುವೆಯಾದ ಜೋಡಿ. ಇವರು 14 ವರ್ಷಗಳ ಪ್ರೀತಿಗೆ 24 ನವೆಂಬರ್ 2019ರಲ್ಲಿ ಮದುವೆ ಎಂಬ ಮುದ್ರೆಯನ್ನು ಒತ್ತಿದ್ದರು. ಇದೀಗ ತಂದೆ ತಾಯಿಯಾಗಲಿರುವ ಜೋಡಿ, ಸೀಮಂತ ಕಾರ್ಯಕ್ರಮ ನಡೆಸಿದೆ.

ಧ್ರುವ ಸರ್ಜಾ ಪತ್ನಿ ಪ್ರೇರಣಾರ ಸೀಮಂತ ಕಾರ್ಯಕ್ರಮ

ಸೀಮಂತ ಶಾಸ್ತ್ರಕ್ಕೆ ಧ್ರುವ ಸರ್ಜಾ ಅವರ ಅತ್ತಿಗೆ ಮೇಘನಾ ರಾಜ್, ಮಾವ ಅರ್ಜುನ್ ಸರ್ಜಾ, ಹಿರಿಯ ನಟಿ ತಾರಾ ಅನುರಾಧ, ನಿರ್ದೇಶಕರಾದ ಎ.ಪಿ ಅರ್ಜುನ್, ಚೇತನ್ ಕುಮಾರ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಚಿತ್ರರಂಗದ ಕೆಲ‌‌ ಆತ್ಮೀಯ ಸ್ನೇಹಿತರು, ಕುಟುಂಬದ ಬಂಧು ಮಿತ್ರರು ಸಾಕ್ಷಿಯಾಗಿದ್ದರು.

ಇದನ್ನೂ ಓದಿ:ಬಿಡುಗಡೆಯಾದ ಮೊದಲ ವಾರದಲ್ಲಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಸಿನಿಮಾ ಯಾವುದು ಗೊತ್ತೇ?

ಸೆಪ್ಟೆಂಬರ್​ 3ರಂದು ಧ್ರುವ ಸರ್ಜಾ ಪ್ರೇರಣಾರೊಂದಿಗೆ ಕಲರ್​ಫುಲ್ ಫೋಟೋಶೂಟ್ ಮಾಡಿಸುವ ಮೂಲಕ ತಾವು ಈ ತಿಂಗಳಲ್ಲೇ ಪೋಷಕರಾಗಲಿರುವ ಖುಷಿಯನ್ನು ಹಂಚಿಕೊಂಡಿದ್ದರು.

ABOUT THE AUTHOR

...view details