ಕರ್ನಾಟಕ

karnataka

ETV Bharat / entertainment

ಮಾರ್ಟಿನ್ ಚಿತ್ರಕ್ಕಾಗಿ ಮಸಲ್​ ಬಿಲ್ಡ್​ ಮಾಡಿದ ನಟ ಧ್ರುವ ಸರ್ಜಾ! - ಭಾರತೀಯ ಚಿತ್ರರಂಗ

ಮಾರ್ಟಿನ್ ಚಿತ್ರಕ್ಕಾಗಿ ಧ್ರುವ ಸರ್ಜಾ 120 ಕೆಜಿಗೆ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ.

ನಟ ಧ್ರುವ ಸರ್ಜಾ
ನಟ ಧ್ರುವ ಸರ್ಜಾ

By

Published : Feb 28, 2023, 10:13 PM IST

ಪಾತ್ರಕ್ಕಾಗಿ ದಪ್ಪ ಮತ್ತು ಸಣ್ಣ ಆಗುವ ಸಂಸ್ಕೃತಿಯನ್ನು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲ ಸ್ಟಾರ್ ಹೀರೋಗಳು ಮಾಡ್ತಾರೆ. ಈ ಸಾಲಿನಲ್ಲಿ ಕನ್ನಡದ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಒಬ್ಬರು. ಇವರನ್ನು ತೀರಾ ಚಿಕ್ಕ ವಯಸ್ಸಿಗೆ ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ. ಸಿನಿಮಾ ಯಾವುದೇ ಇರಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ಸರ್ಜಾ ನಂ1. ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರೂ ಮಾಡದ ದೊಡ್ಡ ಸಾಹಸವನ್ನೇ ಮಾಡಿದ್ದಾರೆ. ಜೊತೆಗೆ ಸೈ ಅನಿಸಿಕೊಂಡಿದ್ದಾರೆ.

ಅದ್ದೂರಿ ಚಿತ್ರದ ಮೂಲಕ ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಗಂಡಾಗಿ ಪೊಗರು ತೋರಿಸಿ ಯಾರೂ ಊಹಿಸಲಾಗದ ಅಭಿಮಾನಿ ಬಳಗ ಹೊಂದಿದ್ದಾರೆ. 2012 ರಲ್ಲಿ ಬಣ್ಣದ ಲೋಕಕ್ಕೆ ಬಲಗಾಲಿಟ್ಟ ಧ್ರುವ ಇಲ್ಲಿವರೆಗೂ 6 ಚಿತ್ರಗಳಲ್ಲಿ ಹೀರೋ ಆಗಿ ಕಂಗೊಳಿಸಿದ್ದಾರೆ. ಪ್ರತಿ ಚಿತ್ರದಲ್ಲೂ ನಿರ್ದೇಶಕ, ನಟನಾಗಿ ಪಾತ್ರಕ್ಕೆ ತಕ್ಕಂತೆ ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡಿರುವ ಇವರ ಬಗ್ಗೆ ಇಡೀ ಇಂಡಸ್ಟ್ರಿಯಲ್ಲಿ ಮೆಚ್ಚುಗೆ ಮಾತುಗಳಿವೆ. ಅದರಲ್ಲೂ ಧ್ರುವ ಪಾತ್ರಕ್ಕಾಗಿ ತೆಗೆದುಕೊಳ್ಳುವ ರಿಸ್ಕ್ ಸಿನಿಮಾ ದಿಗ್ಗಜರು ಕೂಡ ಅಬ್ಬಬ್ಬ ಅನ್ನುವಂತೆ ಮಾಡಿದೆ.

ಧ್ರುವ ಸರ್ಜಾ ಅದ್ದೂರಿ ಚಿತ್ರದಲ್ಲೂ ಭರ್ಜರಿಯಾದ ಆ್ಯಕ್ಷನ್, ಯಾರು ನಿರೀಕ್ಷೆ ಮಾಡಲಾಗದ ಡ್ಯಾನ್ಸ್ ಮೂಲಕ‌ ಇಂದು ಆ್ಯಕ್ಷನ್ ಪ್ರಿನ್ಸ್ ಆಗಿ ಅಭಿಮಾನಿಗಳ ಹೃದಯದಲ್ಲಿ ದರ್ಬಾರ್ ಮಾಡ್ತಿದ್ದಾರೆ. ಪೊಗರು ಚಿತ್ರದಲ್ಲಿ 40 ಕೆಜಿ ತೂಕ ಇಳಿಸಿ ಯೋಗ ಮಾಡಿ ಹುಬ್ಬೇರುವಂತೆ ಮಾಡಿದ್ದ ಧ್ರುವ ಈಗ ಮಾರ್ಟಿನ್ ಚಿತ್ರದಲ್ಲೂ ಪಾತ್ರಕ್ಕಾಗಿ ಸಖತ್ ಎಫರ್ಟ್ ಹಾಕಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಈ ಹಿಂದೆ ಕಾಣಿಸದ ರಗಡ್ ಮಾಸ್ ಲುಕ್​ನಲ್ಲಿ ಮಿಂಚಿದ್ದು, ಮಾರ್ಟಿನ್ ಟೀಸರ್ ನೋಡಿದ ಮಂದಿ ದೈತ್ಯಾಕಾರದ ಧ್ರುವನ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕನ್ನಡದ ಅರ್ನಾಲ್ಡ್​: ಹೌದು, ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚೊಕೆ ಕನಸು ಕಂಡಿದ್ದಾರೆ. ಆದರೆ ಈ ಕನಸು ಅಷ್ಟು ಸುಲಭವಲ್ಲ. ಕಲ್ಲು ಮುಳ್ಳುಗಳ ಈ ಹಾದಿಯಲ್ಲಿ ಗೋಲ್ ರೀಚ್ ಆಗಬೇಕಾದ್ರೆ ಯಾರೂ ಮಾಡದ ಸಾಹಸ ಮಾಡಲೇಬೇಕು ಎಂಬುದು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಮಾರ್ಟಿನ್ ಚಿತ್ರಕ್ಕಾಗಿ ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡದಂತಹ ಸಾಹಸ ಮಾಡಿದ್ದಾರೆ. ಮಾರ್ಟಿನ್ ಚಿತ್ರ ಶುರುವಿನಲ್ಲೇ ನಿರ್ದೇಶಕ ಅರ್ಜುನ್ ಚಿತ್ರದಲ್ಲಿ ಧ್ರುವ ಖಡಕ್ ಆಗಿ ಕಾಣಿಸ್ತಾರೆ ಅಂತ ಹೇಳಿದ್ರು. ಅದೇ ರೀತಿ ಧ್ರುವ ಮಾರ್ಟಿನ್ ಚಿತ್ರಕ್ಕಾಗಿ ಬರೋಬ್ಬರಿ 120 ಕೆಜಿಗೆ ದೇಹದ ತೂಕ ಹೆಚ್ಚಿಸಿಕೊಂಡು, ಜಿಮ್​ನಲ್ಲಿ ದೇಹ ದಂಡಿಸಿ ದೈತ್ಯಾಕಾರದಲ್ಲಿ ಕಾಣಿಸುವ ಮೂಲಕ ಧ್ರುವ ಕನ್ನಡದ ಅರ್ನಾಲ್ಡ್ ಆಗಿ ಕಂಗೊಳಿಸಿದ್ದಾರೆ. ಆದರೆ ಅತಿಯಾದ ದೇಹ ದಂಡನೆ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಇದೆ.

ಎದುರಾಳಿಯ ಎದೆ ಸೀಳಿರುವ ಧ್ರುವ: ಇದಲ್ಲದೆ ಧ್ರುವ ಮಾರ್ಟಿನ್ ಚಿತ್ರದಲ್ಲಿ ಸಖತ್ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಾರೆ‌. ಮಾರ್ಟಿನ್ ಟೀಸರ್​​​ನಲ್ಲಿ ಬರುವ ಗನ್​ಸೀನ್ ಅಭಿಮಾನಿಗಳ ಕಿಕ್ ಹೆಚ್ಚಿಸಿದೆ. ಆದ್ರೆ ಆ ಒಂದು ಸೀನ್​ಗೆ ಧ್ರುವ ಹಾಕಿರುವ ಎಫರ್ಟ್​ಗೆ ಎಷ್ಟು ಹ್ಯಾಟ್ಸಾಪ್ ಹೇಳಿದ್ರು ಕಮ್ಮಿನೇ ಅನ್ನಬಹುದು. ಮಾರ್ಟಿನ್ ಟೀಸರ್​ನಲ್ಲಿ ಧ್ರುವ KM 232 ಮಿಷನ್ ಗನ್ ಬಳಸಿ ಎದುರಾಳಿಯ ಎದೆ ಸೀಳಿದ್ದಾರೆ. ಗನ್​ 45 ಕೆಜಿ ಇದ್ದು, ಯಾರ ಸಪೋರ್ಟ್ ಇಲ್ಲದೆ ಧ್ರುವ ಈ ಗನ್ ಅನ್ನು ಕೈಯಲ್ಲಿ ಹಿಡಿದು ಶೂಟಿಂಗ್​ನಲ್ಲಿ ತನ್ನ ತಾಖತ್ ತೋರಿದ್ದಾರೆ. ಒಂದು ಶಾಟ್ ಕಂಪ್ಲೀಟ್​ ಆಗೋಕೆ ಒಂದು ಎರಡು ನಿಮಿಷ ಸಮಯ ಬೇಕಿತ್ತು. ಆದರೂ ಧ್ರುವ ಎಫರ್ಟ್ ಹಾಕಿ ಗನ್ ಹಿಡಿದು ಅಬ್ಬರಿಸಿದ್ದಾರೆ.

ಧ್ರುವ ಡೆಡಿಕೇಶನ್ ಬಗ್ಗೆ ನಿರ್ದೇಶಕ ಎ ಪಿ ಅರ್ಜುನ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಒಂದಲ್ಲ ಅಂತ ಮೂರ್ನಾಲ್ಕು ಟೇಕ್ ಆದಾಗಲೂ ಕೂಡ ಧ್ರುವ ಎನರ್ಜಿ ಎಲ್ಲೂ ಡ್ರಾಪ್ ಆಗದೆ ಪ್ರತಿ ಶಾಟ್​ನಲ್ಲೂ ಧ್ರುವ ಸಖತ್ ಎನರ್ಜಿಯಿಂದ ಗನ್ ಹಿಡಿದು ಆಕ್ಟ್ ಮಾಡಿದ್ದಾರೆ ಎಂದು ಧ್ರುವ ಡೆಡಿಕೇಶನ್​ ಬಗ್ಗೆ ನಿರ್ದೇಶಕ ಎ. ಪಿ ಅರ್ಜುನ್ ಹೇಳಿದ್ದಾರೆ.ಸದ್ಯ ಈ ಆಕ್ಷನ್ ಪ್ರಿನ್ಸ್ ಸಾಹಸಕ್ಕೆ ಭಾರತೀಯ ಚಿತ್ರರಂಗ ಫಿದಾ ಆಗಿದೆ. ಅಲ್ಲದೆ ಧ್ರುವ ಮೊದಲ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಟೀಸರ್ 70 ಮಿಲಿಯನ್ ವೀಕ್ಷಣೆ ಕಂಡು ಇಡೀ ಭಾರತೀಯ ಚಿತ್ರರಂಗದ ದಿಗ್ಗಜರು ಮಾರ್ಟಿನ್ ಚಿತ್ರ ಯಾವ ಭಾಷೆಯ ಸಿನಿಮಾ ಅಂತಾ ಮಾತನಾಡಿಕೊಳ್ಳುವ ಹಾಗೆ ಟ್ರೆಂಡ್ ಸೆಟ್​​ ಮಾಡಿರೋದು ಕನ್ನಡ ಚಿತ್ರರಂಗದ ಮತ್ತೊಂದು ಚಿತ್ರ ಅಬ್ಬರಿಸಲು ಸಜ್ಜಾಗಿದೆ.

ಇದನ್ನೂ ಓದಿ :ರಾಜಮೌಳಿ ಹಾಗು ಕೀರವಾಣಿ ಅವರಿಂದ ಮೆಚ್ಚುಗೆ ಪಡೆದ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ: ಶತಕದ ಖುಷಿ

ABOUT THE AUTHOR

...view details