ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಅಭಿಮಾನಿಗಳ ಮೆಚ್ಚಿನ ದಂಪತಿ. ಕಳೆದ ನವರಾತ್ರಿ ಸಂದರ್ಭ ಕನ್ನಡ ನಟ ಧ್ರುವ ಸರ್ಜಾ ತಂದೆಯಾಗಿ ಬಡ್ತಿ ಪಡೆದಿದ್ದರು. ಇದೀಗ ವರಮಹಾಲಕ್ಷ್ಮಿ ಸಂಭ್ರಮದ ಸಂದರ್ಭ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಗುಡ್ ನ್ಯೂಸ್: ಹೌದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ ಈ ಸುಂದರ ಜೋಡಿ. ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ಸ್ಪೆಷಲ್ ಪೋಸ್ಟ್ ಶೇರ್ ಮಾಡುವ ಮೂಲಕ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಧ್ರುವ ಸರ್ಜಾ ಸ್ಪೆಷಲ್ ಪೋಸ್ಟ್: ಧ್ರುವ ಸರ್ಜಾ ಮತ್ತು ಪ್ರೇರಣಾ ಪ್ರೀತಿಸಿ ಮದುವೆ ಆದ ಜೋಡಿಗಳಲ್ಲೊಬ್ಬರು. ಬಾಲ್ಯದಿಂದಲೇ ಒಬ್ಬರನ್ನೊಬ್ಬರು ಅರಿತಿದ್ದರು. ಸುಮಾರು 14 ವರ್ಷಗಳ ಪ್ರೀತಿಗೆ 2019 ರ ನವೆಂಬರ್ 24 ರಂದು ಮದುವೆ ಮುದ್ರೆ ಒತ್ತಿದ್ದರು. 2022 ರ ಅಕ್ಟೋಬರ್ 2 ರಂದು ಮನೆಗೆ ಪುಟ್ಟ ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಳು. ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಸಂಭ್ರಮ ಮನೆ ಮಾಡಿದ್ದು, ಈ ಶುಭ ಸಂದರ್ಭ ಮತ್ತೊಮ್ಮೆ ತಂದೆಯಾಗುತ್ತಿರುವ ವಿಚಾರವನ್ನು ನಟ ಹಂಚಿಕೊಂಡಿದ್ದಾರೆ.
ನಟ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಅಧಿಕೃತ ಅಕೌಂಟ್ನಲ್ಲಿ ಒಂದು ಬ್ಯೂಟಿಫುಲ್ ಗ್ರಾಫಿಕ್ಸ್ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋ ಪ್ರಾರಂಭವಾಗುವ ವೇಳೆ ಎಲ್ಲರಿಗೂ ಒಂದು ಸರ್ಪ್ರೈಸ್ ಇದೆ ಎಂದು ತಿಳಿಸಿದ್ದಾರೆ. ಪ್ರಕೃತಿಯ ಸುಂದರ ದೃಶ್ಯಗಳನ್ನು ಈ ವಿಡಿಯೋ ಒಳಗೊಂಡಿದೆ. ಕೊನೆಯಲ್ಲಿ ಧ್ರುವ ತಮ್ಮ ಮೊದಲ ಮಗಳನ್ನು ಎತ್ತಿಕೊಂಡಿರುವ ದೃಶ್ಯವಿದೆ. ಬಳಿಕ ಪ್ರೇರಣಾರನ್ನು ತೋರಿಸಲಾಗಿದೆ. ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ಗೌನ್ ತೊಟ್ಟು ಬೇಬಿ ಬಂಪ್ ಅನ್ನು ಪ್ರದರ್ಶಿಸಿದ್ದಾರೆ. ಶೀಘ್ರದಲ್ಲೇ ಎರಡನೇ ಮಗು ಜನಿಸಲಿದ್ದು, ಅಭಿಮಾನಿಗಳು ಈ ದಂಪತಿಗೆ ಶುಭ ಕೋರುತ್ತಿದ್ದಾರೆ. ಈ ಸ್ಪೆಷಲ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಕಳೆದ ಸೆಪ್ಟೆಂಬರ್ 2 ರಂದು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಅಧಿಕೃತ ಖಾತೆಯಲ್ಲಿ ಸ್ಪೆಷಲ್ ಪೋಸ್ಟ್ ಶೇರ್ ಮಾಡುವ ಮೂಲಕ ತಾವು ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ತಿಳಿಸಿದ್ದರು. ಬಹಳ ಸುಂದರವಾದ ವಿಡಿಯೋದಲ್ಲಿ ಈ ಜೋಡಿ ಮಿಂಚಿದ್ದರು. ಗೌನ್ ತೊಟ್ಟು ಪ್ರೇರಣಾ ಸಖತ್ ಖ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ಮದುವೆ ಆಗಿ ಮೂರು ವರ್ಷಗಳ ಬಳಿಕ ಮೊದಲ ಮಗುವಿನ ಪೋಷಕರಾಗಿ ಬಡ್ತಿ ಪಡೆದರು. ಅಕ್ಟೋಬರ್ 2 ರಂದು ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರೋ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾರ ಹೆರಿಗೆ ಆಗಿತ್ತು. ಇದೀಗ ಪ್ರೇರಣಾ ಎರಡನೇ ಮಗುವಿನ ತುಂಬು ಗರ್ಭಿಣಿಯಾಗಿದ್ದು, ಹೊಸ ಅತಿಥಿ ಶೀಘ್ರದಲ್ಲೇ ಆಗಮಿಸಲಿದ್ದಾರೆ.
ಇದನ್ನೂ ಓದಿ:'ನಿಖಿಲ್ಗಾಗಿ ಕಥೆ ರೆಡಿ ಮಾಡಿದ್ದೇನೆ, ಆದ್ರೆ ಮಗನಿಗೊಂದು ಭಯವಿದೆ': ಹೆಚ್ ಡಿ ಕುಮಾರಸ್ವಾಮಿ