ಕರ್ನಾಟಕ

karnataka

ETV Bharat / entertainment

ಬಜಾರ್ ಹುಡುಗ ಧನ್ವೀರ್ ಹೊಸ ಸಿನಿಮಾ ಕೈವ ಫಸ್ಟ್ ಲುಕ್ ರಿವೀಲ್.. ಗೆಸ್​ ಲುಕ್​ ಮೇಲೆ ಹೆಚ್ಚಿದ ಕುತೂಹಲ - Director Jayathirtha next movie

ಗಣೇಶ ಹಬ್ಬದ ಪ್ರಯುಕ್ತ ಧನ್ವೀರ್ ಹೊಸ ಸಿನಿಮಾ ಕೈವ ಫಸ್ಟ್ ಲುಕ್ ರಿವೀಲ್ ( ಗೆಸ್ ಲುಕ್ ಪೋಸ್ಟರ್) ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

Dhanveer new movie Kaiva first look revealed
ಬಜಾರ್ ಹುಡುಗ ಧನ್ವೀರ್ ಹೊಸ ಸಿನಿಮಾ ಕೈವ ಫಸ್ಟ್ ಲುಕ್ ರಿವೀಲ್

By

Published : Aug 31, 2022, 12:58 PM IST

ಬ್ಯೂಟಿಫುಲ್ ಮನಸುಗಳು ಹಾಗೂ ಬೆಲ್ ಬಾಟಮ್ ಸಿನಿಮಾಗಳ ನಂತರ ಸ್ಯಾಂಡಲ್​​ವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಜಯತೀರ್ಥ. ಬನಾರಸ್ ಸಿನಿಮಾ ಬಿಡುಗಡೆ ಹೊತ್ತಲ್ಲೇ ನಿರ್ದೇಶಕ ಜಯತೀರ್ಥ ಅವರು ಬಜಾರು ಸಿನಿಮಾದ ಹೀರೋ ಧನ್ವೀರ್ ಜೊತೆ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಕೈವ ಅಂತಾ ಟೈಟಲ್ ಇಡಲಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಕೈವ ಫಸ್ಟ್ ಲುಕ್ ರಿವೀಲ್ ( ಗೆಸ್ ಲುಕ್ ಪೋಸ್ಟರ್) ಆಗಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ.

ಬಜಾರ್ ಹುಡುಗ ಧನ್ವೀರ್

ಕೈವ 1983 ಅನ್ನೂ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣುತ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿದೆ. ನೈಜ ಘಟನೆಗಳನ್ನಾಧರಿಸಿದ ಸಿನಿಮಾ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ:ಹಬ್ಬದಂದೇ ಫ್ಯಾನ್ಸ್​ಗೆ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ..

ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಕೈವ ಗೆಸ್​ ಲುಕ್ ಅನ್ನೋ ಪೋಸ್ಟರ್ ರಿವೀಲ್ ಆಗಿದ್ದು ಸೆಪ್ಟೆಂಬರ್ 8ರಂದು ನಟ ಧನ್ವೀರ್ ಹುಟ್ಟುಹಬ್ಬ ಹಿನ್ನೆಲೆ ಕೈವ ಸಿನಿಮಾದ ಅಸಲಿ ಲುಕ್ ರಿವೀಲ್ ಆಗಲಿದೆ. ಅಂದೇ ಈ ಗೆಸ್ ಲುಕ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.

ಕೈವ ಗೆಸ್ ಲುಕ್ ರಿವೀಲ್

ABOUT THE AUTHOR

...view details