ಕರ್ನಾಟಕ

karnataka

ETV Bharat / entertainment

ಮೊಗ್ಗಿನ ಮನಸ್ಸು ನಿರ್ದೇಶಕನ ಜೊತೆ ಡಾರ್ಲಿಂಗ್ ಕೃಷ್ಣನ ಹೊಸ‌ ಸಿನಿಮಾ

ನಿರ್ದೇಶಕ ಶಶಾಂಕ್‌ ಜೊತೆ ಡಾರ್ಲಿಂಗ್ ಕೃಷ್ಣನ ಹೊಸ‌ ಸಿನಿಮಾ ಬೆಂಗಳೂರಿನಲ್ಲಿ ಸೈಲೆಂಟ್ ಆಗಿ ಸೆಟ್ಟೇರಿದೆ.

Actor Darling Krishna new movie with  director Shashank
ಮೊಗ್ಗಿನ ಮನಸ್ಸು ನಿರ್ದೇಶಕನ ಜೊತೆ ಡಾರ್ಲಿಂಗ್ ಕೃಷ್ಣನ ಹೊಸ‌ ಸಿನಿಮಾ

By

Published : Oct 6, 2022, 3:05 PM IST

ಮೊಗ್ಗಿನ ಮನಸ್ಸು, ಕೃಷ್ಣನ್​ ಲವ್​ ಸ್ಟೋರಿ, ಕೃಷ್ಣ ಲೀಲಾ ಹಾಗೂ ಇತ್ತೀಚಿನ ಲವ್ 360 ಸಿನಿಮಾಗಳ ಮೂಲಕ ಯಶಸ್ಸು ಕಂಡ ನಿರ್ದೇಶಕ ಶಶಾಂಕ್‌. ಈಗ ಲವ್ ಮಾಕ್​ಟೈಲ್ ಹೀರೋ ಡಾರ್ಲಿಂಗ್ ಕೃಷ್ಣನ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಹೆಸರಡಿಸ ಹೊಸ ಚಿತ್ರ ಸೈಲೆಂಟ್ ಆಗಿ ಸೆಟ್ಟೇರಿದೆ.

ಸೆಟ್ಟೇರಿತು ಡಾರ್ಲಿಂಗ್ ಕೃಷ್ಣನ ಹೊಸ‌ ಸಿನಿಮಾ

ಲವ್ ಸ್ಟೋರಿ ಹಾಗೂ ಆ್ಯಕ್ಷನ್ ಸಿನಿಮಾಗಳನ್ನ ಮಾಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಶಶಾಂಕ್‌ ಅವರು ನಟ ಡಾರ್ಲಿಂಗ್ ಕೃಷ್ಣ ಅವರ ಈ‌ ಹೊಸ ಸಿನಿಮಾ ಅನೌನ್ಸ್​​ ಮಾಡಿದ್ದಾರೆ. ಹಿಟ್ ಚಿತ್ರಗಳನ್ನು ಕೊಟ್ಟಿರುವ ಶಶಾಂಕ್ ಹೊಸ ಸಿನಿಮಾದ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

ನಿರ್ದೇಶಕ ಶಶಾಂಕ್‌ ಜೊತೆ ಡಾರ್ಲಿಂಗ್ ಕೃಷ್ಣನ ಹೊಸ‌ ಸಿನಿಮಾ

ಈ ಸಿನಿಮಾದ ನಾಯಕಿ ಜೊತೆಗೆ ಬೇರೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅತೀ ಶೀಘ್ರದಲ್ಲೇ ಸಿನಿಮಾದ ಟೈಟಲ್ ಕೂಡ ಅನಾವರಣ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್​​ನಲ್ಲಿ ಸಿನಿಮಾ ಮೂಡಿ ಬರುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಸೆಟ್ಟೇರಿತು ನಿರ್ದೇಶಕ ಪವನ್ ಒಡೆಯರ್ ಹಿಂದಿ ಸಿನಿಮಾ 'ನೋಟರಿ'

ಶಶಾಂಕ್ ಸಿನಿಮಾಸ್ ಹಾಗೂ ಕೌರವ ಪ್ರೊಡಕ್ಷನ್ಸ್ ಹೌಸ್ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಡಾರ್ಲಿಂಗ್ ಕೃಷ್ಣ ಒಂದರ ಹಿಂದೆ ಒಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನೂ ದಿಲ್‌ ಪಸಂದ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ABOUT THE AUTHOR

...view details