ಸೋಮವಾರ ಬಿಡುಗಡೆ ಆದ ಬಾಲಿವುಡ್ನ 'ಪಠಾಣ್' ಚಿತ್ರದ ಬೇಷರಮ್ ರಂಗ್ ಹಾಡು ವಿವಾದಕ್ಕೆ ಸಿಲುಕಿದೆ. ಬಾಯ್ಕಾಟ್ ಪಠಾಣ್ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ವಾದ ವಿವಾದ ಜೋರಾಗುತ್ತಿದ್ದು, ನಟ ಚೇತನ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
''ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ಪಠಾಣ್ ಚಿತ್ರದ ಹಾಡು ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ಈ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು'' ಎಂದು ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.